• Home
  • »
  • News
  • »
  • state
  • »
  • Hubballi: ಸಹೋದರರಿಗೆ ಚಾಕುವಿನಿಂದ ಇರಿದು ಎಸ್ಕೇಪ್; ಇಂದು ನೇರವಾಗಿ ಕೋರ್ಟ್​ಗೆ ಬಂದು ಶರಣಾದ ಆರೋಪಿಗಳು

Hubballi: ಸಹೋದರರಿಗೆ ಚಾಕುವಿನಿಂದ ಇರಿದು ಎಸ್ಕೇಪ್; ಇಂದು ನೇರವಾಗಿ ಕೋರ್ಟ್​ಗೆ ಬಂದು ಶರಣಾದ ಆರೋಪಿಗಳು

ಆರೋಪಿಗಳು ಕೋರ್ಟ್​ಗೆ ಶರಣು

ಆರೋಪಿಗಳು ಕೋರ್ಟ್​ಗೆ ಶರಣು

ಸರೋದರಿಬ್ಬರ ಮೇಲೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಗಳು ತಾನಾಗಿಯೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಈಗಾಗಲೇ ಓರ್ವವನ್ನ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಿದ್ದಂತೆಯೇ, ಉಳಿದ ಮೂವರು ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.

  • Share this:

ಹುಬ್ಬಳ್ಳಿ (ಜೂ 17) : ಹುಬ್ಬಳ್ಳಿಯ (Hubballi) ಆನಂದ ನಗರದಲ್ಲಿ ಸಹೋದರರ ಮೇಲೆ ಮನಬಂದಂತೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳು ಹುಬ್ಬಳ್ಳಿ ನ್ಯಾಯಾಲಯಕ್ಕೆ (Court) ಶರಣಾಗತರಾಗಿದ್ದಾರೆ. ಇಬ್ಬರು ಯುವಕರ ಮೇಲೆ ಚಾಕುವಿನಿಂದ ಇರಿದು ತಲೆಮರೆಸಿಕೊಂಡಿದ್ದ ಆರೋಪಿಗಳು, ಕೊನೆಗೂ ನ್ಯಾಯಾಲಕ್ಕೆ ಶರಣಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಂಗಳವಾರ ಅಣ್ಣ ತಮ್ಮಂದಿರಿಗೆ ಚಾಕು ಇರಿದಿದ್ದ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಪೈಕಿ ಇರ್ಫಾನ್ ಎಂಬುವವನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು. ಎದೆ ಹಾಗೂ ತಲೆಗೆ ಚಾಕುವಿನಿಂದ ಇರಿದ ಆರೋಪಿಗಳು (Accursed) ಕೊಲೆ ಯತ್ನ ನಡೆಸಿದ್ದರು. ಪೊಲೀಸರು ಹುಡುಕಾಟ ತೀವ್ರಗೊಳಿಸುತ್ತಿದ್ದಂತೆ ಆರೋಪಿಗಳು ಕೋರ್ಟ್ ಗೆ ಶರಣಾಗಿದ್ದಾರೆ.


ಮೂವರು ಆರೋಪಿಗಳು ಕೋರ್ಟ್​ಗೆ ಶರಣು


ಹುಬ್ಬಳ್ಳಿ ಜೆಎಂಎಫ್​ನ ಮೊದಲ ಕೋರ್ಟ್ ನಲ್ಲಿ ಆರೋಪಿಗಳು ಶರಣಾಗಿದ್ದಾರೆ. ರಫೀಕ್, ಅಸ್ಲಾಂ ಹಾಗೂ ಅಲ್ತಾಫ್ ಶರಣಾಗಿರುವ ಆರೋಪಿಗಳಾಗಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಜಿಲಾನಿ ಹಾಗೂ ಜಾವಿದ್ ಎನ್ನುವ ಅಣ್ಣ ತಮ್ಮಂದಿರಿಗೆ ಚಾಕು ಇರಿದಿದ್ದ ಆರೋಪಿಗಳು, ನಂತರ ತಲೆಮರೆಸಿಕೊಂಡಿದ್ದರು. ಇಬ್ಬರೂ ಗಾಯಾಳುಗಳಿಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.


ಇಡಿ ತನಿಖೆ ಖಂಡಿಸಿ ಪ್ರತಿಭಟನೆಗಳಿದವರ ಬಂಧನ


ಇಡಿ ಸಂಸ್ಥೆಯ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ ಹುಬ್ಬಳ್ಳಿ ನವನಗರದ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು


ಪ್ರತಿಭಟನಾನಿರತರ ಬಂಧನಕ್ಕೆ ಆಕ್ರೋಶ


ಆದಾಯ ತೆರಿಗೆ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ ನೂರಕ್ಕು ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಸೇರಿ ಹಲವು ಮುಖಂಡರ ಬಂಧಿಸಲಾಯಿತು. ಪ್ರತಿಭಟನಾನಿರತರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.


ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯಿಂದ ಪೊಲೀಸರ ಮೂಲಕ ದಬ್ಬಾಳಿಕೆ ನಡೆಯುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಂಡಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಎಚ್ಚರಿಕೆ ನೀಡಿದರು.


ಅಗ್ನಿಪಥ್ ಮೋದಿ ಗಿಮಿಕ್ ಎಂದ ಕಾಂಗ್ರೆಸ್ಸಿಗರು


ಅಗ್ನಿ ಪಥ್ ಯೋಜನೆ ಪ್ರಧಾನಿ ಮೋದಿ ಗಿಮಿಕ್ ಆಗಿದೆ. ಇದರಿಂದ ಯುವ ಜನರಿಗೆ ಅನ್ಯಾಯ ಆಗುತ್ತೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಮುಖಂಡ ಪಿ.ಎಚ್.ನೀರಲಕೇರಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಮೂಲದವರನ್ನೇ ಸೇನೆಗೆ ಸೇರಿಸಿಕೊಳ್ಳೋ ಹುನ್ನಾರ ಇದರ ಹಿಂದಿದೆ. ವಯೋಮಿತಿ ಸಡಿಲಗೊಳಿಸುವ ಇತ್ಯಾದಿ ವಿಚಾರಗಳು ಅವೈಜ್ಞಾನಿಕವಾಗಿವೆ.


ಇದನ್ನೂ ಓದಿ: Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!


ನಿರುದ್ಯೋಗ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ


ಚುನಾವಣೆ ಪೂರ್ವದಲ್ಲಿ ಮೋದಿ ಭರವಸೆ ಕೊಟ್ಟಿದ್ದೇ ಒಂದು, ಸದ್ಯ ಮೋದಿ ಮಾಡುತ್ತಿರುವುದೇ ಮತ್ತೊಂದು. ನಿರುದ್ಯೋಗ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗ್ತಿದೆ. ಇದರ ನಡುವೆ ಅಗ್ನಿಪಥ್ ಯೋಜನೆ ಜಾರಿಗೆ ತರೋ ಮೂಲಕ ಮತ್ತಷ್ಟು ಜನರನ್ನು ಅತಂತ್ರಗೊಳಿಸೋ ತಂತ್ರ ಅಡಗಿದೆ. ಕೂಡಲೇ ಈ ಯೋಜನೆ ಜಾರಿ ಕೈಬಿಡಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡೋದಾಗಿ ನೀರಲಕೇರಿ ಎಚ್ಚರಿಕೆ.

Published by:Pavana HS
First published: