ಪೊಲೀಸರ ಮೇಲೆಯೆ ಬಿಜೆಪಿ ಶಾಸಕನ ಗೂಂಡಾಗಿರಿ: ಪ್ರೀತಮ್​ ಗೌಡ ವಿರುದ್ಧ ಕೇಸ್​


Updated:August 30, 2018, 10:37 AM IST
ಪೊಲೀಸರ ಮೇಲೆಯೆ ಬಿಜೆಪಿ ಶಾಸಕನ ಗೂಂಡಾಗಿರಿ: ಪ್ರೀತಮ್​ ಗೌಡ ವಿರುದ್ಧ ಕೇಸ್​

Updated: August 30, 2018, 10:37 AM IST
ನ್ಯೂಸ್​-18 ಕನ್ನಡ

ಹಾಸನ(ಆಗಸ್ಟ್​.30): ಚುನಾವಣೆ ಹಿನ್ನೆಲ್ಲೆಯಲ್ಲಿ ಅಕ್ರಮ ಮಧ್ಯ ಹಂಚುತ್ತಿದ್ದ ಆರೋಪಿಗಳನ್ನು ರಕ್ಷಿಸಲು ಪೊಲೀಸರ ಮೇಲೆಯೆ ಬಿಜೆಪಿ ಶಾಸಕನೋರ್ವ ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಶಾಸಕ ಪ್ರೀತಮ್ ಗೌಡ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡರಾತ್ರಿಯಲ್ಲಿ ಠಾಣೆಗೆ ನುಗ್ಗಿ ಶಾಸಕ ಪ್ರೀತಮ್ ಗೌಡ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ಧಾರೆ ಎನ್ನಲಾಗಿದೆ. ಮಧ್ಯ ಹಂಚುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಆರೋಪಿಗಳನ್ನ ಶಾಸಕ ಅಕ್ರಮವಾಗಿ ಹೊರ ಕರೆತಂದಿದ್ದಾರೆ.

ನಗರಸಭೆ ಚುನಾವಣೆ ಹಿನ್ನೆಲ್ಲೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುರಿಂದ ಅಕ್ರಮ ಮಧ್ಯ ಹಂಚಿಕೆಯಾಗಿದೆ. ಬಳಿಕ ಆರೋಪಿಗಳನ್ನ ರಕ್ಷಿಸಲು ಮುಂದಾದ ಶಾಸಕ ಪ್ರೀತಮ್ ಗೌಡ, ಪೊಲೀಸ್ ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆಗೆ ನುಗ್ಗಿ ಶಾಸಕ ಪ್ರೀತಮ್ ಗೌಡ 20 ಮಂದಿ ಬೆಂಬಗಲಿಗರಿಂದ ಗೂಂಡಾವರ್ತನೆ ನಡೆಸಿದ್ಧಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು 8 ನೇ ವಾರ್ಡ್ ನ ಅಭ್ಯರ್ಥಿ ವೇಣು ಸೇರಿ ಮೂರು ಮಂದಿಯನ್ನು ಬಂಧಿಸಲಾಗಿತ್ತು. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಪೊಲೀಸರಿಗೆ ಅವಾಜ್​ ಹಾಕಿದ್ದಾರೆ.

ನಂತರ ಆರೋಪಿಗಳನ್ನು ಬಿಡಿಸಿಕೊಂಡು ಹೋಗಿದ್ದಾರೆ. ಅಲ್ಲದೇ ಈ ವೇಳೆ ಅಲ್ಲಿನ ಸಿಬ್ಬಂದಿ ಹಲ್ಲೆಯೂ ನಡೆದಿದೆ. ಹೀಗಾಗಿ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ದೂರು ನೀಡಿದ್ದು, ಶಾಸಕ ಪ್ರೀತಮ್ ಗೌಡ ವಿರುದ್ದ ಐಪಿಸಿ ಸಕ್ಷನ್ 143, 353, 225ರ ಅಡಿ ಪ್ರಕರಣ ದಾಖಲಾಗಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ