Belagavi: ಕುಂದಾನಗರಿಯಲ್ಲಿ ಗಾಂಜಾ ಘಾಟು! 6 ಜನರಿಂದ ಯುವಕನ ಮೇಲೆ ತಲ್ವಾರ್ ದಾಳಿ

ಬೆಳಗಾವಿಯಲ್ಲಿ ಗಾಂಜಾ ಸೇವನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಗಾಂಜಾ ಸೇವನೆ ಮಾಡಿದ್ದ ಆರು ಜನರ ಗ್ಯಾಂಗ್ ಒಂದು ಯುವಕನ ಮೇಲೆ ತಲ್ವಾರ್‌ನಿಂದ ಅಟ್ಯಾಕ್ ಮಾಡಿದೆ. ಗಾಯಾಳು ಯುವಕ ಈಗ ಆಸ್ಪತ್ರೆ ಸೇರಿದ್ದಾನೆ. ಕಿಡಿಗೇಡಿಗಳ ಕಾಟದಿಂದ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.

ಗಾಂಜಾ ಗ್ಯಾಂಗ್‌ನ ದಾಳಿಗೆ ಒಳಗಾದ ಯುವಕ

ಗಾಂಜಾ ಗ್ಯಾಂಗ್‌ನ ದಾಳಿಗೆ ಒಳಗಾದ ಯುವಕ

  • Share this:
ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ (Belagavi) ಇತ್ತೀಚೆಗೆ ಗಾಂಜಾ (Ganja) ಪ್ರಕರಣಗಳು (Case) ಹೆಚ್ಚಾಗುತ್ತಿವೆ. ಗ್ಯಾರೇಜ್ (Garage) ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ‌ (Deadly Attack) ಮಾಡಲಾಗಿದೆ. ಗಾಂಜಾ ಸೇವನೆ ಮಾಡಿದ್ದ ಆರು ಜನರ ಗ್ಯಾಂಗ್ (Gang) ಒಂದು ಬೆಳಗಾವಿಯ ನ್ಯೂ ಗಾಂಧಿನಗರದ (New Gandhinagar) ನಿವಾಸಿ, 20 ವರ್ಷದ ಮಹಮ್ಮದ್ ಕೈಫ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ. ಇತ್ತ ಗಂಭೀರ ಗಾಯಗೊಂಡ ಯುವಕನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಗಾಯಾಳು ಯುವಕನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯುವಕನನ್ನು ಅಡ್ಡಗಟ್ಟಿ ತಲ್ವಾರ್‌ನಿಂದ ಹಲ್ಲೆ

ಮಹಮ್ಮದ್ ಕೈಫ್ ನ ಮೇಲೆ ತಲವಾರ್ ಮತ್ತು ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಆತನ ಕೈ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದೆ. ಇತ್ತ ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದ ಯುವಕ ತೀರಾ ಬಡ ಕುಟುಂಬದವ ಎನ್ನಲಾಗಿದೆ.

ಗಾಂಜಾ ಗ್ಯಾಂಗ್ ಬಂಧನಕ್ಕೆ ಆಗ್ರಹ

ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಆತನ‌ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮಗನ ಸ್ಥಿತಿ ಕಂಡು ಮರುಗಿದ್ದಾರೆ‌. ‌ಇನ್ನೂ ಹಲ್ಲೆ ಮಾಡಿದ ಅರೋಪಿಗಳೊ ಪೊಲೀಸರು ತಕ್ಷಣ ಬಂಧಿಸಬೇಕು. ಅವರೆಲ್ಲಾ ಗಾಂಜಾ, ಮದ್ಯಪಾನ ಸೇವನೆ ಮಾಡಿ ನಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನ ಮಾಡಿದ್ರು.

ಇದನ್ನೂ ಓದಿ: Explosion Sound: ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಭೂಕಂಪನ!? ಬೆಚ್ಚಿಬಿದ್ದು ಮನೆಯಿಂದ ಹೊರಗೆ ಓಡಿದ್ರು ಜನ

ಈ ಗಾಂಜಾ ಗ್ಯಾಂಗ್‌ನ ಹಿಂದೆ ಇರುವವರು ಯಾರು?

ಹಲ್ಲೆಗೊಳಗಾದ ಕುಟುಂಬಸ್ಥರು ಹೇಳುವಂತೆ, ಮುಷ್ತಾಕ್ ದೇವಲಾಪುರೆ ಎಂಬಾತ ಹತ್ತು ಜನರ ಯುವಕರ ಗ್ಯಾಂಗ್ ಕಟ್ಟಿಕೊಂಡು ಈ ರೀತಿ ಅಟ್ಟಹಾಸ ಮೆರೆಯುತ್ತಾನೆ. ಅವರೆಲ್ಲ ಗಾಂಜಾ ಸೇವನೆ ಮಾಡ್ತಾರೆ ಬೆದರಿಕೆ ಹಾಕ್ತಾರೆ. ನಾವು ಬಡವರಿದ್ದೇವೆ. ನಮ್ಮ ಪಾಡಿಗೆ ನಮ್ಮನ್ನ ಜೀವಿಸಲು ಬಿಡಬೇಕೆಂದು ಹಲವು ಬಾರಿಗೆ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ, ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅಂತಾ ಹೇಳಿದ್ರು.

ಘಟನೆ ಬಳಿಕ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ

ಯುವಕನ ಮೇಲೆ ಗಾಂಜಾ ಗ್ಯಾಂಗ್ ಹಲ್ಲೆ ಮಾಡಿದ ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಜಿಲ್ಲಾಸ್ಪೆತ್ರಯಲ್ಲಿ ಬಿಗುವಿನ ವಾತವರಣ ಕೂಡ ನಿರ್ಮಾಣವಾಗಿತ್ತು. ಈ ವೇಳೆ ಯುವಕ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಹಾಗೂ ಏರಿಯಾ ನಿವಾಸಿಗಳೆಲ್ಲ ಆರೋಪಿಗಳನ್ನ ಬಂಧಿಸಬೇಕೆಂದು ಪಟ್ಟುಹಿಡಿದ್ದರು.

ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರ ಭರವಸೆ

ಇನ್ನೂ ಜಿಲ್ಲಾಸ್ಪತ್ರೆಗೆ ಆಗಮಿಸಿದ ಡಿಸಿಪಿ ರವೀಂದ್ರ ಗಡಾದಿ ಪರಿಶೀಲನೆ ನಡೆಸಿದರು. ಹಲ್ಲೆಗೊಳಗಾದ ಕುಂಬಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಇನ್ನೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಾಗುತ್ತಿದೆ‌. ಆರೋಪಿಗಳು ಯಾರೂ ಇದ್ದಾರೆ ಅನ್ನೋದನ್ನ ಪತ್ತೆ ಹಚ್ಚಲಾಗುತ್ತದೆ. ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು.,

6 ಮಂದಿ ವಿರುದ್ಧ ಪ್ರಕರಣ ದಾಖಲು

ಇನ್ನೂ ನಗರದಲ್ಲಿ ಗಾಂಜಾ ಹಾವಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಪಿ,ಈ ಬಗ್ಗೆ ತನಿಖೆ ನಂತರ ಗೊತ್ತಾಗಲಿದೆ. ನಗರದಲ್ಲಿ ಗಾಂಜಾ ಪ್ರಕರಣಗಳನ್ನು ಮಟ್ಟ ಹಾಕಲು ‌ಕ್ರಮಕೈಗೊಳ್ಳಲಾಗುತ್ತದೆ‌ ಎಂದು‌ ಹೇಳಿದ್ರು.

ಇದನ್ನೂ ಓದಿ: Hubballi: KIMS ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಆಯ್ತಾ 2 ವರ್ಷದ ಕಂದಮ್ಮ?

ಗಾಂಜಾ ಗ್ಯಾಂಗ್ ನಿಂದ ಹಲ್ಲೆ ಪ್ರಕರಣ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಶೀಘ್ರದಲ್ಲೇ ‌ಆರೋಪಿಗಳನ್ನು ಬಂಧಿಸಬೇಕು ಎಂದು‌ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಇನ್ನೂ ಬೆಳಗಾವಿ ಗಾಂಜಾ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.
Published by:Annappa Achari
First published: