Bannerghatta: ಪ್ರಸವ ವೇದನೆಯಿಂದ ನರಳುತ್ತಿದ್ದ ಸಾಕಾನೆ ಆರೈಕೆ ಮಾಡಿದ ಗಜಪಡೆ; ಬನ್ನೇರುಘಟ್ಟ ಕಾಡಿನಲ್ಲಿ ಅಪರೂಪದ ಘಟನೆ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಉದ್ಯಾನವನದ ಸಾಕಾನೆ ವನಶ್ರೀ ಹೆಣ್ಣು ಮರಿಗೆ ಜನ್ಮ ನೀಡಿದೆ. ಅದ್ರಲ್ಲು ಸಾಕಾನೆ ವನಶ್ರೀ ಕಾಡಿನಲ್ಲಿ ಪ್ರಸವ ವೇದನೆಯಿಂದ ನರಳಾಡುತ್ತಿದ್ದಾಗ ಇತರೆ ಸಾಕಾನೆಗಳು ಅರೈಕೆ ಮಾಡಿದೆ.

ಆನೆಗಳ ಬೀಡು

ಆನೆಗಳ ಬೀಡು

  • Share this:
ಆನೇಕಲ್: ಸಾಮಾನ್ಯವಾಗಿ ಸಂಕಷ್ಟದಲ್ಲಿದ್ದವರಿಗೆ ಮನುಷ್ಯ ನೆರವಾದ ಬಗ್ಗೆ ನೋಡಿರುತ್ತಿರಿ, ಕೇಳಿರುತ್ತಿರಿ. ಆದ್ರೆ ಆನೆಯೊಂದು ಕಾಡಿನಲ್ಲಿ ಪ್ರಸವ ವೇದನೆಯಲ್ಲಿ (Labor Pains) ನರಳಾಡುತ್ತಿದ್ದಾಗ ಇತರ ಆನೆಗಳು (Elephants) ನೆರವಿಗೆ ನಿಂತು ಆರೈಕೆ  ಮಾಡಿದ ಅಪರೂಪ ಘಟನೆ ವನ್ಯಜೀವಿಗಳ ಮಾನವೀಯತೆ ಸಾಕ್ಷಿಯಾಗಿದೆ. ಬನ್ನೇರುಘಟ್ಟ (Bannerghatta Forest) ಅರಣ್ಯದಲ್ಲಿ ಸಾಕಾನೆ ವನಶ್ರೀ ಪ್ರಸವ ವೇದನೆಯಿಂದ ನರಳುತ್ತಿತ್ತು. ಕಾಡಿನ ನಡುವೆ ವನಶ್ರೀ ಆರೈಕೆಗೆ ಸಾಕಾನೆಗಳು ನಿಂತ ದೃಶ್ಯ ಮಾನವೀಯತೆಯ ಪಾಠ ಮಾಡಿದಂತಿದೆ.

ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಉದ್ಯಾನವನದ ಸಾಕಾನೆ ವನಶ್ರೀ ಹೆಣ್ಣು ಮರಿಗೆ ಜನ್ಮ ನೀಡಿದೆ. ಅದ್ರಲ್ಲು ಸಾಕಾನೆ ವನಶ್ರೀ ಕಾಡಿನಲ್ಲಿ ಪ್ರಸವ ವೇದನೆಯಿಂದ ನರಳಾಡುತ್ತಿದ್ದಾಗ ಇತರೆ ಸಾಕಾನೆಗಳು ಮುತುವರ್ಜಿಯಿಂದ ಅರೈಕೆ ಮಾಡಿದ್ದು, ನಿಜಕ್ಕೂ ಅಪರೂಪ ಎನಿಸಿದೆ.

ನಡುರಾತ್ರಿಯಲ್ಲಿ ಪ್ರಸವ ವೇದನೆ

ಎಂದಿನಂತೆ ಸಾಕಾನೆಗಳ ಜೊತೆ ಅಂದು ಸಹ ವನಶ್ರೀ ಕಾಡಿಗೆ ಆಹಾರಕ್ಕೆ ಹೊರಟಿದೆ. ನಡುರಾತ್ರಿಯಲ್ಲಿ ಪ್ರಸವ ವೇದನೆ ಶುರುವಾಗಿದೆ. ವನಶ್ರೀ ಸ್ಥಿತಿ ಅರಿತ ಇತರ ಹೆಣ್ಣಾನೆಗಳು ಹೆರಿಗೆಗೆ ಪೂರಕ ವ್ಯವಸ್ಥೆ ಕಲ್ಪಿಸಿದ್ದು, ಸುರಕ್ಷಿತವಾಗಿ ಮರಿ ಜನನಕ್ಕೆ ಅಗತ್ಯ ನೆರವು ಒದಗಿಸಿವೆ. ಜೊತೆಗೆ ತಾಯಿ ಮತ್ತು ಮರಿಯಾನೆಯ ಆರೈಕೆ ಮಾಡಿವೆ.

ಮತ್ತೊಂದು ಕಡೆ ಗಂಡಾನೆಗಳ ಹಿಂಡು ತಾಯಿ ಮತ್ತು ಮರಿ ಆನೆ ಕಡೆ ಇತರ ಕಾಡು ಪ್ರಾಣಿಗಳು ಸುಳಿಯದಂತೆ ಸುತ್ತಲು ನಿಂತು ಅಭೇದ್ಯ ಕೋಟೆ ನಿರ್ಮಿಸಿ ರಕ್ಷಣೆ ನೀಡುವ ಮೂಲಕ ತಾನು ಮನುಷ್ಯರಿಗಿಂತ ಕಮ್ಮಿಯಿಲ್ಲ. ನಾವು ಕಾಡು ಪ್ರಾಣಿಗಳಾದರು ನಮ್ಮಲ್ಲು ಮಾನವೀಯತೆ ಇದೆ ಎಂಬ ಸಂದೇಶ ರವಾನಿಸಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ದೇಶಕ ಡಾ ಉಮಾ ಶಂಕರ್ ತಿಳಿಸಿದ್ದಾರೆ.



ಕೆರೆಯೊಂದರ ಸಮೀಪ ಬೆಟ್ಟದ ಮೇಲೆ ಸಾಕಾನೆ ಹಿಂಡು

ಎಂದಿನಂತೆ ಬೆಳಗ್ಗೆ ಮಾವುತರು, ಕಾವಾಡಿಗಳು ಆನೆ ಬಿಡಾರಕ್ಕೆ ಕೆಲಸಕ್ಕೆ ಬಂದಾಗ ಉದ್ಯಾನವನದ ಸಾಕಾನೆಗಳ ಸುಳಿವಿರಲಿಲ್ಲ. ಬನ್ನೇರುಘಟ್ಟ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಕೆರೆಯೊಂದರ ಸಮೀಪ ಬೆಟ್ಟದ ಮೇಲೆ ಸಾಕಾನೆ ಹಿಂಡು ಕಾಣಿಸಿದೆ. ಸಮೀಪಕ್ಕೆ ಹೋದಾಗ ವನಶ್ರೀ ಮರಿಗೆ ಜನ್ಮ ನೀಡಿರುವುದು ಕಂಡು ಬಂದಿದೆ. ಅದಾಗಲೇ ಮರಿ ಆನೆ ಲವಲವಿಕೆಯಿಂದ ಅಕ್ಕ ತುಳಸಿ ಜೊತೆ ಹೆಜ್ಜೆ ಹಾಕುತ್ತಿತ್ತು.

ಇದನ್ನೂ ಓದಿ: Rain Effect: ಮಳೆ ಅಬ್ಬರಕ್ಕೆ 1.20 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಪರಿಹಾರಕ್ಕಾಗಿ ರೈತರ ಪರದಾಟ

ಇತರೆ ಸಾಕಾನೆಗಳು ಆರೈಕೆ ಮಾಡಿ ತಾಯಿ ಮತ್ತು ಆನೆ ಮರಿಗೆ ರಕ್ಷಣೆ ನೀಡಿದ್ದವು. ಸಾಮಾನ್ಯವಾಗಿ ಸಾಕಾನೆಗಳು ಬಿಡಾರದಲ್ಲಿ ಮರಿ ಹಾಕುತ್ತಿದ್ದವು. ಉದ್ಯಾನವನದ ಸಿಬ್ಬಂದಿ ಅವುಗಳ ಆರೈಕೆ ಮಾಡುತ್ತಿದ್ದರು. ಆದ್ರೆ ವನಶ್ರೀಗೆ ಕಾಡಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಸಾಕಾನೆಗಳೇ ಹರಿಗೆ ಮಾಡಿಸಿ ತಮ್ಮ ಬಾಂಧವ್ಯನ್ನು ತೋರಿಸಿವೆ. ಜೊತೆಗೆ ಕಾಡು ಪ್ರಾಣಿಗಳ ದಾಳಿಯಿಂದಲು ತಾಯಿ ಮತ್ತು ಆನೆ ಮರಿಯನ್ನು ರಕ್ಷಣೆ ಮಾಡಿವೆ ಎಂದು ಮಾವುತ ಭೀಮರಾಜ್ ಸಾಕಾನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Caring for an elephant suffering from labor pains
ಆನೆಗಳ ಬೀಡು


ಮಾವುತರಿಂದ ಮರಿ ಆನೆ ಆರೈಕೆ

ಅಂದಹಾಗೆ ಆನೆಗಳು ಮನುಷ್ಯನಿಗಿಂತ ಹೆಚ್ಚು ಭಾವನಾ ಜೀವಿಗಳು. ಅವು ತಮ್ಮ ಕುಟುಂಬ ಸದಸ್ಯನನ್ನು ಹೆಚ್ಚು ಜೋಪಾನ ಜಾಗರೂಕತೆಯಿಂದ ಕಾಯುತ್ತವೆ. ತಮ್ಮ ಕುಟುಂಬದ ಸದಸ್ಯನಿಗೆ ಅಪಾಯ ಎದುರಾದರೆ ಕೊನೆ ಕ್ಷಣವರೆ ಹೋರಾಡುತ್ತವೆ. ವಾಸನೆ ಗ್ರಹಿಕೆಯಲ್ಲಿ ಆನೆಗಳು ಹೆಚ್ಚು ಪ್ರಾವೀಣ್ಯತೆ ಹೊಂದಿರುತ್ತವೆ. ಜೊತೆಗೆ ಇತರೆ ಆನೆಗಳ ಶಬ್ದದಲ್ಲು ಪರಿಸ್ಥಿತಿ ಬಗ್ಗೆ ಅಂದಾಜಿಸುತ್ತವೆ. ಹಾಗಾಗಿ ವನಶ್ರೀ ಪ್ರಸವ ವೇದನೆ ಅರಿತು ಎಲ್ಲಾ ಸಾಕಾನೆಗಳು ನೆರವಿಗೆ ಧಾವಿಸಿ ಆರೈಕೆ ಮತ್ತು ರಕ್ಷಣೆ ಮಾಡಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನೆಗಳ ಮೇಲ್ವಿಚಾರಕ ಸುರೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Potholes: ಜನರ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ; ತಾನೇ ರಚಿಸಿದ್ದ ನಿಯಮ ಬ್ರೇಕ್ ಮಾಡಿದ BBMP

ಒಟ್ನಲ್ಲಿ ಉದ್ಯಾನವನಕ್ಕೆ ನೂತನ ಅತಿಥಿಯಾಗಿ ಆಗಮಿಸಿರುವ ಮರಿ ಆನೆಗೆ ಅಕ್ಕ ತುಳಸಿ, ಸಹಪಾಠಿಗಳಾದ ಗೌರಿ, ರೀಟಾ ಆಟ ತುಂಟಾಟದಲ್ಲಿ ಸಾಥ್ ನೀಡುತ್ತಿದ್ದು, ಮಾವುತರು ತಾಯಿ ಮತ್ತು ಮರಿ ಆನೆಗೆ ಕುಸುಪಲು ಅಕ್ಕಿ, ಬೆಲ್ಲ, ಉರುಳಿಯಂತಹ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಸದ್ಯ ಉದ್ಯಾನವನದ ಸಾಕಾನೆಗಳ ಸಂಖ್ಯೆ ಇಪ್ಪತ್ತೈದಕ್ಕೆ ಏರಿಕೆಯಾಗಿದೆ.
Published by:ಪಾವನ ಎಚ್ ಎಸ್
First published: