ಮಲೆನಾಡಿಗರ ಮೈ ಜುಮ್ಮೆನಿಸಿದ ಕಾರ್ ರ‍್ಯಾಲಿ; ಆಫ್​ ರೋಡ್ ರೈಡ್ ಮಾಡಿ ಎಂಜಾಯ್ ಮಾಡಿದ ಸಾಹಸಿಗಳು

ಚಿಕ್ಕಮಗಳೂರು ನಗರದಿಂದ ಶುರುವಾದ ಈ ರ್ಯಾಲಿ, ರಾಜ್ಯ ಹೆದ್ದಾರಿ, ರಾಷ್ಟ್ಟೀಯ ಹೆದ್ದಾರಿ ಸೇರಿದಂತೆ ಹಳ್ಳಿ ರಸ್ತೆಗಳಲ್ಲೂ ಸಾಗಿತ್ತು. ಕೇವಲ ಯುವಕರು, ಪುರುಷರು ಅಲ್ಲದೇ ಯುವತಿಯರು, ಮಹಿಳೆಯರು ಕೂಡ ಈ ರೇಸ್ ನಲ್ಲಿ ಭಾಗಿಯಾಗಿದ್ರು.

ಕಾರ್ ರ‍್ಯಾಲಿ

ಕಾರ್ ರ‍್ಯಾಲಿ

  • Share this:
ಚಿಕ್ಕಮಗಳೂರು(ಡಿ.12): ಕಾಫಿನಾಡಲ್ಲಿ ಕಾರ್ ರೇಸ್, ರ್ಯಾಲಿಗಳೆಲ್ಲಾ ಸಾಮಾನ್ಯ. ಮಲೆನಾಡಿಗರಿಗೆ  ಈ ಸ್ಪರ್ಧೆಗಳೇನು ಹೊಸದಲ್ಲ. ಅದ್ರಲ್ಲೂ ಆಫ್ ರೋಡ್ ರೇಸ್​​​​​​​ಗಳನ್ನಂತೂ ಕೇಳೋದೇ ಬೇಡ. ಅದರ ಕಿಕ್, ಖದರ್ ನೋಡೋಕೆ ಚೆಂದ. ಸ್ಪೀಡಾಗಿ ಓಡ್ಸೋದು, ಆಫ್ ರೋಡ್ ರೈಡ್ ಮಾಡಿ ಎಂಜಾಯ್ ಮಾಡ್ತಿದ್ದ ಸಾಹಸಿಗಳು ಸದ್ಯ ಮೋಟಾರ್ ಸ್ಪೋರ್ಟ್ಸ್ ರ‍್ಯಾಲಿಯಲ್ಲಿ ಭಾಗಿಯಾಗಿ ಮಸ್ತ್ ಡ್ರೈವ್ ಮಾಡ್ತಾ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಆಫ್ ರೋಡ್ ರೈಡ್ ಮಾಡಿ ಎಂಜಾಯ್ ಮಾಡ್ತಿದ್ದ ಸಾಹಸಿಗಳು ಕಾಫಿನಾಡಲ್ಲಿ ನಡೆಯುತ್ತಿರೋ ಮೋಟಾರ್ ಸ್ಪೋರ್ಟ್ಸ್ ರ್ಯಾಲಿಯಲ್ಲಿ ಭಾಗಿಯಾಗಿ ಮಸ್ತ್ ಡ್ರೈವ್ ಮಾಡ್ತಾ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಚಿಕ್ಕಮಗಳೂರಿನ ಮೋಟರ್ ಸ್ಪೋರ್ಟ್ ಕ್ಲಬ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ ರ್ಯಾಲಿಯಲ್ಲಿ 30ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದರು.

ಚಿಕ್ಕಮಗಳೂರು ನಗರದಲ್ಲಿ ಶುರುವಾದ ಈ ರ‍್ಯಾಲಿ ರಾಜ್ಯ ಹೆದ್ದಾರಿ, ರಾಷ್ಟ್ಟೀಯ ಹೆದ್ದಾರಿ ಸೇರಿದಂತೆ ಹಳ್ಳಿ ರಸ್ತೆಗಳಲ್ಲಿ ಸುಮಾರು 300 ಕಿ. ಮೀ. ಸಾಗಬೇಕು. ರಾಜ್ಯ, ಹೊರ ರಾಜ್ಯದ ಸ್ಪರ್ಧಿಗಳು ಈ ನ್ಯಾಷನಲ್ ಲೆವೆಲ್ ರೇಸ್ ನಲ್ಲಿ ಭಾಗವಹಿಸಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಈ ರೇಸಲ್ಲಿ 30ಕ್ಕೂ ಹೆಚ್ಚು ಕಾರುಗಳು ಭಾಗವಹಿಸಿದ್ದವು. ರ್ಯಾಲಿಗೂ ಮುನ್ನ ಸವಾರರು ಎಲ್ಲಿ ಹೋಗ್ಬೇಕು, ಹೇಗೆ ಹೋಗ್ಬೇಕು ಅನ್ನೋ ಕಿಂಚಿತೂ ಸುಳಿವು ಕೂಡ ಇರಲ್ಲ.ನಿಮಿಷದ ಮುಂಚೆ ರೂಟ್ ಮ್ಯಾಪ್ ನೀಡ್ತಾರೆ. ಅದರಲ್ಲಿ ಯಾವ ಜಾಗ ತಲುಪಬೇಕು, ಯಾವ ದಾರಿಯಲ್ಲಿ ಹೋಗ್ಬೇಕು, ಎಲ್ಲಿ, ಎಷ್ಟು ಸ್ಪೀಡ್ ಅನ್ನೋ ಮಾಹಿತಿ ಇರುತ್ತೆ.‌ ಆ ಮಾಹಿತಿ ಆಧರಿಸಿ ಸವಾರರು ಕಾರ್ ಡ್ರೈವ್ ಮಾಡ್ಬೇಕು.

ರಸ್ತೆ ಸಮಸ್ಯೆಯ ಗೋಳು ಕೇಳದ ಜನಪ್ರತಿನಿಧಿಗಳು : ಆಕ್ರೋಶಗೊಂಡ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಇಲ್ಲಿ ಸವಾರರಷ್ಟೆ ಮುಖ್ಯ ಅಲ್ಲ. ಸಹ ಸವಾರರು ಅಷ್ಟೇ ಇಂಪಾರ್ಟೆಂಟ್. ಹೇಗೆ ಹೋಗ್ಬೇಕು, ಯಾವ ಸ್ಪೀಡಲ್ಲಿ ಹೋಗ್ಬೇಕು, ಯಾವ ರೋಡಲ್ಲಿ ಹೋಗ್ಬೇಕು ಅನ್ನೋ ಮಾಹಿತಿ  ಕೊಡೋದೇ ಇವ್ರು. ಆ ಮಾಹಿತಿಯನ್ನ ಆಧರಿಸಿ ಚಾಲಕ ಡ್ರೈವ್ ಮಾಡ್ತಾನೆ. ಅಲ್ಲಲ್ಲಿ ಚೆಕ್ ಪಾಯಿಂಟ್​​ಗಳಿದ್ದು, ಎಷ್ಟು ಸಮಯಕ್ಕೆ ರೀಚ್ ಆದ್ರು. ಸ್ಪೀಡಾಗಿ ಬಂದ್ರಾ. ಲೇಟಾಗಿ ಬಂದ್ರಾ. ಅನ್ನೋದು ಅಲ್ಲಿ ಕೌಂಟ್ ಆಗುತ್ತೆ. ಸ್ಲೋ ಆಗಿ ಹೋಗಂಗಿಲ್ಲ. ಫಾಸ್ಟಾಗಿ ಕೂಡ ಆ ಪಾಯಿಂಟ್ ಮುಟ್ಟಂಗಿಲ್ಲ.

ಚಿಕ್ಕಮಗಳೂರು ನಗರದಿಂದ ಶುರುವಾದ ಈ ರ್ಯಾಲಿ, ರಾಜ್ಯ ಹೆದ್ದಾರಿ, ರಾಷ್ಟ್ಟೀಯ ಹೆದ್ದಾರಿ ಸೇರಿದಂತೆ ಹಳ್ಳಿ ರಸ್ತೆಗಳಲ್ಲೂ ಸಾಗಿತ್ತು. ಕೇವಲ ಯುವಕರು, ಪುರುಷರು ಅಲ್ಲದೇ ಯುವತಿಯರು, ಮಹಿಳೆಯರು ಕೂಡ ಈ ರೇಸ್ ನಲ್ಲಿ ಭಾಗಿಯಾಗಿದ್ರು. ಟೈಂ ಪಿಕಪ್ ಮಾಡ್ತಾ, ಸ್ಪೀಡ್ ಮ್ಯಾನೇಜ್ ಮಾಡ್ತಾ ನಾವಿಗೇಟರ್ ನೋಡ್ಕೊಂಡ್ ಸವಾರರು ಸವಾರಿ ಮಾಡೋ ಈ ಪಯಣ ನಿಜಕ್ಕೂ ಥ್ರಿಲ್ ಆಗಿತ್ತು. ದಾರಿ ಮಧ್ಯೆ ಕಾರ್ ರೇಸ್ ನೋಡಿ ಸಾರ್ವಜನಿಕರು ಖುಷಿ ಪಟ್ರು.

ಡಿಸೆಂಬರ್ 11, 12ರ ಎರಡು ದಿನದ ಮೋಟಾರ್ ಸ್ಪೋರ್ಟ್ ರ್ಯಾಲಿ ಕಾಫಿನಾಡಿನಲ್ಲಿ ಆಯೋಜನೆಯಾಗಿದ್ದು, ಸ್ಪರ್ಧಿಗಳು ಈ ರ್ಯಾಲಿಯಲ್ಲಿ ಭಾಗಿಯಾಗಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಸವಾರರಿಗಂತೂ ಕೊರೋನಾ, ಲಾಕ್ ಡೌನ್ ಅಂತ ಎಂಟರ್ಟೈನ್ ಮೆಂಟ್ ಇಲ್ಲದೇ ಬೋರ್ ಆಗಿದ್ದ ಲೈಫ್ ಈ ಸ್ಪರ್ಧೆಯಿಂದ ರಿಫ್ರೆಶ್ ಆಯ್ತು. ಕಾಫಿನಾಡಲ್ಲಿ ನಡೆದ ಈ ಮೋಟಾರ್ ರ್ಯಾಲಿ ಸ್ಪೋರ್ಟ್ಸ್ ರ್ಯಾಲಿ ಪ್ರಿಯರ ಮನಗೆದ್ದಿದಂತೂ ಸತ್ಯ.
Published by:Latha CG
First published: