Harassment: ಕಾರು ಚಾಲಕನ ಪತ್ನಿ ಮೇಲೆ ಮಾಲೀಕನ ಕಣ್ಣು! ಅನ್ಯಾಯ ಪ್ರಶ್ನಿಸಿದ್ರೆ ಕೊಂದು ಊರಿಗೆ ಊಟ ಹಾಕ್ತಾನಂತೆ ಕಾಮುಕ

ಇದು ಒಂದರ್ಥದಲ್ಲಿ ಪತಿ... ಪತ್ನಿ... ಔರ್ ವೋ.. ಅನ್ನೋ ಕಥೆ. ಗೆಳೆಯನೆಂದು ನಂಬಿದ ಮೂರವೇ ವ್ಯಕ್ತಿ ಲೈಂಗಿಕ ದೌರ್ಜನ್ಯ, ಒಂದು ಕುಟುಂಬವನ್ನೇ ಊರು ಬಿಡುವಂತೆ ಮಾಡಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ಇದುವರೆಗೂ ಯಾರನ್ನು ಬಂಧಿಸಿಲ್ಲ.

ಪ್ರಕರಣದ ಆರೋಪಿ

ಪ್ರಕರಣದ ಆರೋಪಿ

  • Share this:
ಹುಬ್ಬಳ್ಳಿ: ಸುಂದರ ಮಹಿಳೆಯ (Lady) ಮೇಲೆ ಕಣ್ಣಿಟ್ಟ ಭೂಪ. ಆಕೆಯನ್ನು ಅನುಭೋಗಿಸೋಕೆ ಅವಳ ಗಂಡನನ್ನೇ (Husband) ತನ್ನ ಕಾರು ಚಾಲಕನನ್ನಾಗಿಸಿಕೊಂಡ (Car Driver). ಚಾಲಕನಿಗೆ ಕಾರು ಕೊಟ್ಟು ಬೇರೆ ಊರಿಗೆ ಕಳಿಸೋದು, ರಾತ್ರಿ ವೇಳೆ (Bight Time) ಚಾಲಕನ ಮನೆಗೆ ನುಗ್ಗೋದು, ಚಾಲಕನ ಹೆಂಡ್ತಿಗೆ (Wife) ಧಮ್ಕಿ ಹಾಕಿ, ಲೈಂಗಿಕ ದೌರ್ಜನ್ಯ ಎಸಗೋದು. ಇದ್ಯಾವುದೂ ತನ್ನ ಮೇಲೆ ಬರಬಾರದೆಂದು ಊರಲ್ಲಿ ವಾಮಾಚಾರ (Black Magic) ಮಾಡೋದು. ಇವ್ನ ಕಾಟಕ್ಕೆ ತಾಳದೆ ಕಾರು ಚಾಲಕ, ಅವ್ನ ಹೆಂಡತಿ, ಮಕ್ಕಳು (Children) ಊರೇ ಬಿಟ್ಟಿದ್ದಾರೆ. ಹಾಗಿದ್ರೆ ಏನಿದು ಪತಿ.. ಪತ್ನಿ.. ಔರ್ ವೋ ಕಹಾನಿ? ಈ ಬಗ್ಗೆ ಇಲ್ಲಿದೆ ಮಾಹಿತಿ…

ಮಹಿಳೆ ಮೇಲೆ ಬಿತ್ತು ಕಾಮುಕನ ಕಣ್ಣು

ಹಾಗೆ ನೋಡಿದ್ರೆ ಅವ್ನು, ಆ ಮಹಿಳೆಗಿಂತ ಚಿಕ್ಕ ವಯಸ್ಸಿನವನು. ಅವ್ನಿಗೆ ಈಗಾಗ್ಲೇ ಮದುವೆಯಾಗಿ, ಮಕ್ಕಳೂ ಇದ್ದಾರೆ. ಇಷ್ಟೆಲ್ಲದರ ನಡುವೆ ಈ ಕಾಮುಕನಿಗೆ ತನ್ನ ಸಮೀಪದ ಮನೆಯಲ್ಲಿಯೇ ಇದ್ದ ಸುಂದರ ಮಹಿಳೆ ನಿದ್ದೆಗೆಡಿಸಿದ್ದಾಳೆ. ಆಕೇನ ಹೇಗಾದ್ರೂ ಮಾಡಿ ಒಲಿಸಿಕೊಳ್ಳಬೇಕು, ತನ್ನ ಚಪಲಗಳನ್ನು ತೀರಿಸ್ಕೋಬೇಕಂತ ಭಾರೀ ಪ್ಲಾನ್ ಮಾಡಿದ ಈ ಭೂಪ, ಆ ಮಹಿಳೆಯ ಗಂಡನನ್ನೇ ಖೆಡ್ಡಾಕ್ಕೆ ಕೆಡವಿದ್ದಾನೆ. ಆ ಮಹಿಳೆಯ ಗಂಡನನ್ನೇ ತನ್ನ ಕಾರು ಚಾಲಕನನ್ನಾಗಿಸಿಕೊಂಡ ಇವ್ನು, ರಾತ್ರಿ ವೇಳೆ ಬೇರೆ ಊರಿಗೆ ಡ್ಯೂಟಿಗೆ ಕಳಿಸೋದು, ಕಾರು ಚಾಲಕನ ಮನೆಗೆ ರಾತ್ರಿ ವೇಳೆ ನುಗ್ಗೋದು. ಕಾರು ಚಾಲಕನ ಹಂಡ್ತೀಗೆ ಧಮ್ಕಿ ಹಾಕಿ ಲೈಂಗಿಕ ದೌರ್ಜನ್ಯ ಎಸಗೋದು. ಹೀಗೆ ನಡೆದದ್ದು ಒಂದು ದಿನ ಅಲ್ಲಾ... ಎರಡು ದಿನ ಅಲ್ಲ..  ಬರೋಬ್ಬರಿ ಎರಡು ತಿಂಗಳು.

ರಾತ್ರಿ ವೇಳೆ ಮನೆಗೆ ನುಗ್ಗುವ ಕಾಮುಕ

ತಾನು ಕಾರಿನಲ್ಲಿ ಹೋಗದೇ ಇದ್ರೂ, ತನ್ನ ಅನುಪಸ್ಥಿತಿಯಲ್ಲಿ ಕೆಲಸಗಳನ್ನು ಮಾಡಿಕೊಂಡು ಬರುವಂತೆ ಚಾಕಲನಿಗೆ ದೂರದ ಊರುಗಳಿಗೆ ದಬ್ತಿದ್ದ. ಈ ಅವಧಿಯನ್ನು ಬಳಸಿಕೊಂಡು ಚಾಲಕನ ಹೆಂಡ್ತಿ ಜೊತೆ ಪಲ್ಲಂಗದಾಟಕ್ಕೆ ಇವ್ನು ಸಜ್ಜು ಮಾಡಿಕೊಂಡಿದ್ದ.
ಆದ್ರೆ ಇವ್ನು ಮಾತಿಗೆ ಸೊಪ್ಪು ಹಾಕದ ಚಾಲಕನ ಹೆಂಡ್ತೀನ ಬೆದರಿಸಿ ನಿತ್ಯ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದಿದ್ದಾನೆ. ಹೀಗೆ ಲೈಂಗಿಕ ದೌರ್ಜನ್ಯ ಎಸಗುವ ವೇಳೆ ವೀಡಿಯೋ ದೃಶ್ಯೀಕರಣ ಮಾಡಿಕೊಂಡು, ಅದರ ಮೂಲಕವೂ ಬ್ಲಾಕ್ ಮೇಲ್ ಮಾಡಿದ್ದಾನೆ.

ಇದನ್ನೂ ಓದಿ: Rohini Sindhuri: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ! ಅಷ್ಟಕ್ಕೂ ಐಎಎಸ್ ಅಧಿಕಾರಿ ಮೇಲಿರುವ ಆರೋಪಗಳೇನು?

ಮಹಿಳೆಗೆ ಬೆದರಿಸಿ, ಕಿರುಕುಳ ನೀಡ್ತಿದ್ದ ಆರೋಪಿ

ಕಾರು ಚಲಾಯಿಸಿಕೊಂಡು ಹೋಗಿರೋ ಗಂಡನನ್ನು ಮರ್ಡರ್ ಮಾಡಿಸ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ದೃಶ್ಯಗಳನ್ನು ಹರಿಬಿಡೋದಾಗಿ ಆರೋಪಿ ಹೆದರಿಸಿದ್ದಾನೆ. ಹೀಗೆ ಧಮ್ಕಿ ಹಾಕಿದ ಆರೋಪಿಯನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಮೌಲಾಸಾಬ್ ಮಹ್ಮದ್ ಸಾಬ್ ಹುಲಸೂರ ಎಂದು ಗುರುತಿಸಲಾಗಿದೆ. 36 ವರ್ಷದ ಸಂತ್ರಸ್ತ ಮಹಿಳೆ ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ.

ದೂರು ದಾಖಲಿಸಿದರೂ ಆರೋಪಿ ಬಂಧನವಾಗಿಲ್ಲ

ವಿಚಿತ್ರವೆಂದರೆ ಪ್ರಕರಣ ದಾಖಲಿಸಿ 25 ದಿನ ಕಳೆದರೂ ಇದುವರೆಗೂ ಆರೋಪಿಯ ಬಂಧನವಾಗಿಲ್ಲ. ಬದಲಿಗೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿಗೇ ಧಮ್ಕಿಗಳ ಮೇಲೆ ಧಮ್ಕಿ ಹಾಕಲಾಗಿದೆ. ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ, ಊರಿಗೇ ಊಟ ಹಾಕೋದಾಗಿ ಬೆದರಿಕೆಗಳು ಬಂದಿವೆ. ಆರೋಪಿಯ ಬೆಂಬಲಕ್ಕೆ ನಿಂತಿರೋ ಆತನ ಕುಟುಂಬದ ಸದಸ್ಯರೂ, ಸಂತ್ರಸ್ತೆ ಕುಟುಂಬದ ಮೇಲೆ ದಾಳಿ ಮಾಡೋ ಸಂಚು ರೂಪಿಸಿದೆ ಎನ್ನಲಾಗಿದೆ. ಇದರಿಂದ ಬೆದರಿದ  ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪತಿ ಚನ್ನಬಸು ಬಿಚ್ಚಗತ್ತಿ, ಮಕ್ಕಳೊಂದಿಗೆ ಊರನ್ನೇ ತೊರೆದಿದ್ದಾರೆ.

ಊರು ಬಿಟ್ಟರೂ ಈತನ ಕಾಟ ತಪ್ಪಿಲ್ಲ

ಹುಬ್ಬಳ್ಳಿಗೆ ಬಂದು ಪರಿಚಿತ ವ್ಯಕ್ತಿಗಳ ಬಳಿ ಆಶ್ರಯ ಪಡೆದಿದ್ದಾರೆ. ಇಷ್ಟಾದರೂ ದೂರವಾಣಿ ಕರೆ ಮೂಲಕ ಧಮ್ಕಿ ಹಾಕೋದು ತಪ್ಪಿಲ್ಲ. ಕೊನೆಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮೌಲಾಸಾಬ್ ವಿರುದ್ಧ ಚನ್ನಬಸು ಬಿಚ್ಚಗತ್ತಿ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.

ವಾಮಾಚಾರವನ್ನೂ ಕಲಿತಿದ್ದಾನಂತೆ ಖದೀಮ!

ಆರೋಪಿ ಮೌಲಾಸಾಬ್ ಒಂದಷ್ಟು ವಾಮಾಚಾರವನ್ನೂ ಕಲಿತಿದ್ದಾನಂತೆ. ಮಹಿಳೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ನಂತರ ಪ್ರಕರಣ ತನ್ನ ಮೇಲೆ ಬರಬಾರದೆಂದು ಸಂತ್ರಸ್ತೆ ಮನೆ ಮುಂದೆ, ತನ್ನ ಮನೆ ಮುಂದೆ ವಾಮಾಚಾರ ಮಾಡಿದ್ದಾನೆ. ಅಲ್ಲದೆ ಇಡೀ ಓಣಿಯ ಮನೆಗಳ ಮುಂದೆ ತೆಂಗು, ನಿಂಬೆ ಮಂತ್ರಿಸಿ ಹಾಕಿ, ತಾಯಿತಗಳನ್ನು ಒಗೆದು ಹೋಗಿದ್ದಾನಂತೆ.

ಇದನ್ನೂ ಓದಿ: Gutka Ad ಬಾಲಿವುಡ್ ಆರೋಗ್ಯಕ್ಕೆ ಹಾನಿಕರ! ಅಮಿತಾಭ್ ಬಚ್ಚನ್, ಶಾರುಖ್, ರಣವೀರ್, ಅಜಯ್‌ ದೇವಗನ್‌ ಮೇಲೆ ಕೇಸ್!

ಇದೆಲ್ಲ ಬೆಳವಣಿಗೆಗಳ ನಂತ್ರ ಪುಟ್ಟ ಮಕ್ಕಳನ್ನು ಕರೆದುಕೊಂಡು ಸಂತ್ರಸ್ತ ಮಹಿಳೆ ಮತ್ತು ಆಕೆಯ ಪತಿ ಹುಬ್ಬಳ್ಳಿ ಸೇರಿದ್ದಾರೆ. ಪರಿಚಿತ ವ್ಯಕ್ತಿಯ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ವಾಪಸ್ ಊರಿಗೂ ಹೋಗಲಾಗದೆ, ಹುಬ್ಬಳ್ಳಿಯಲ್ಲಿ ದುಡಿಮೆಯನ್ನೂ ಮಾಡಲಾರದೆ ದಂಪತಿಗಳು ಗೊಂದಲಕ್ಕೀಡಾಗಿದ್ದಾರೆ. ಮಹಿಳಾ ಠಾಣೆ ಹಾಗೂ ಕಲಘಟಗಿ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ ಇರೋದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಈಗಲಾದ್ರೂ ಸೂಕ್ತ ಕ್ರಮ ಕೈಗೊಂಡು, ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
Published by:Annappa Achari
First published: