ಆ್ಯಂಬುಲೆನ್ಸ್​ಗೆ ದಾರಿ ಬಿಡದ ಕಾರು; ಮಾನವೀಯತೆ ಮರೆತ ಚಾಲಕ

news18
Updated:August 31, 2018, 5:13 PM IST
ಆ್ಯಂಬುಲೆನ್ಸ್​ಗೆ ದಾರಿ ಬಿಡದ ಕಾರು; ಮಾನವೀಯತೆ ಮರೆತ ಚಾಲಕ
news18
Updated: August 31, 2018, 5:13 PM IST
ವೀರೇಶ್​ ಜಿ. ಹೊಸೂರು, ನ್ಯೂಸ್​18 ಕನ್ನಡ

ಚಿಕ್ಕಮಗಳೂರು (ಆ. 31): ಚಿಕ್ಕಮಗಳೂರಿನಿಂದ ಮಂಗಳೂರು ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್​ಗೆ ಕಾರು ಚಾಲಕನೊಬ್ಬ ಅಮಾನವೀಯತೆ ಮೆರೆದಿದ್ದಾನೆ.

ಆ್ಯಂಬುಲೆನ್ಸ್​ ಬರುತ್ತಿದೆ ಎಂದರೆ ಟ್ರಾಫಿಕ್​ ಸಿಗ್ನಲ್​ ಕೂಡ ಬಿಟ್ಟುಕೊಡುತ್ತಾರೆ. ಅಂಥದ್ದರಲ್ಲಿ ಮಂಗಳೂರಿನ ಬಿಸಿ ರೋಡ್​ನಲ್ಲಿ ಆ್ಯಂಬುಲೆನ್ಸ್​ನಲ್ಲಿ ರೋಗಿಯಿದ್ದರೂ ಮುಂದೆ ಸಾಗಲು ಬಿಡದೆ ಸತಾಯಿಸಿದ ಘಟನೆ ನಡೆದಿದೆ.ರೋಗಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ್ದರಿಂದ ಆ್ಯಂಬುಲೆನ್ಸ್ ಚಾಲಕ 10 ಕಿ.ಮೀ. ದೂರ ಸಾಗಲು ಕೂಡ ಪರದಾಡುವಂತಾಯಿತು. ಅನಾರೋಗ್ಯದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ   ಕಿರಿದಾದ ರಸ್ತೆಯಲ್ಲಿ ದಾರಿ ಬಿಡದೆ ತೊಂದರೆ ನೀಡಿದ ಕಾರು ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...