ಕ್ಷಣಮಾತ್ರದಲ್ಲಿ ಕಳ್ಳರನ್ನು ಹಿಡಿಯಲು ನೆರವಾಗುತ್ತೆ; ಕರ್ನಾಟಕ ಪೊಲೀಸರಿಗೆ ಶಕ್ತಿಯಾಗಲಿದೆ ಹೊಸ ಆ್ಯಪ್

ಪೊಲೀಸರು ಬರೋದೆ ಎಲ್ಲಾ ಮುಗಿದ್ಮೇಲೆ ಅನ್ನೋ ಮಾತು ಇವತ್ತಿಗೂ ಜನಮಾನಸದಲ್ಲಿದೆ. ಆದ್ರೆ, ಇನ್ಮುಂದೆ ಹಾಗಾಗಲ್ಲ. ಪೊಲೀಸರು ಘಟನೆಯ ಸ್ಥಳಕ್ಕೆ ಬರುವಾಗ ಅಪರಾಧಿಗಳನ್ನ ಜೊತೆಯಲ್ಲೇ ಕರ್ಕೊಂಡ್ ಬರ್ಬೋದು. ಯಾಕಂದ್ರೆ, ಕಾಫಿನಾಡಿನ ಹುಡುಗ್ರು ಅಂತಹದ್ದೊಂದು ಆ್ಯಪ್ ಸಂಶೋಧಿಸಿದ್ದಾರೆ. ಮನೆ, ಅಂಗಡಿ, ರಸ್ತೆಗಳಲ್ಲಿರೋ ಸಿಸಿ ಕ್ಯಾಮರಾಕ್ಕೆ ಈ ಆ್ಯಪ್ ಅಳವಡಿಸಿದ್ರೆ ಅಪರಾಧಿಗಳು ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ. ಪೊಲೀಸ್ ಇಲಾಖೆ ಈ ಆ್ಯಪ್ನ ಬಳಸಿಕೊಂಡ್ರೆ ವರ್ಷವಾಗೋ ಪ್ರಕರಣ ವಾರದಲ್ಲೇ ಮುಗಿಯುತ್ತೆ. ಹೇಗೆ ಅನ್ನೋ ಕತೂಹಲಕ್ಕೆ ಈ ಸ್ಟೋರಿ ನೋಡಿ.


Updated:July 7, 2018, 4:42 PM IST
ಕ್ಷಣಮಾತ್ರದಲ್ಲಿ ಕಳ್ಳರನ್ನು ಹಿಡಿಯಲು ನೆರವಾಗುತ್ತೆ; ಕರ್ನಾಟಕ ಪೊಲೀಸರಿಗೆ ಶಕ್ತಿಯಾಗಲಿದೆ ಹೊಸ ಆ್ಯಪ್
ಪೊಲೀಸರು ಬರೋದೆ ಎಲ್ಲಾ ಮುಗಿದ್ಮೇಲೆ ಅನ್ನೋ ಮಾತು ಇವತ್ತಿಗೂ ಜನಮಾನಸದಲ್ಲಿದೆ. ಆದ್ರೆ, ಇನ್ಮುಂದೆ ಹಾಗಾಗಲ್ಲ. ಪೊಲೀಸರು ಘಟನೆಯ ಸ್ಥಳಕ್ಕೆ ಬರುವಾಗ ಅಪರಾಧಿಗಳನ್ನ ಜೊತೆಯಲ್ಲೇ ಕರ್ಕೊಂಡ್ ಬರ್ಬೋದು. ಯಾಕಂದ್ರೆ, ಕಾಫಿನಾಡಿನ ಹುಡುಗ್ರು ಅಂತಹದ್ದೊಂದು ಆ್ಯಪ್ ಸಂಶೋಧಿಸಿದ್ದಾರೆ. ಮನೆ, ಅಂಗಡಿ, ರಸ್ತೆಗಳಲ್ಲಿರೋ ಸಿಸಿ ಕ್ಯಾಮರಾಕ್ಕೆ ಈ ಆ್ಯಪ್ ಅಳವಡಿಸಿದ್ರೆ ಅಪರಾಧಿಗಳು ತಪ್ಪಿಸಿಕೊಳ್ಳೋಕೆ ಚಾನ್ಸೇ ಇಲ್ಲ. ಪೊಲೀಸ್ ಇಲಾಖೆ ಈ ಆ್ಯಪ್ನ ಬಳಸಿಕೊಂಡ್ರೆ ವರ್ಷವಾಗೋ ಪ್ರಕರಣ ವಾರದಲ್ಲೇ ಮುಗಿಯುತ್ತೆ. ಹೇಗೆ ಅನ್ನೋ ಕತೂಹಲಕ್ಕೆ ಈ ಸ್ಟೋರಿ ನೋಡಿ.

Updated: July 7, 2018, 4:42 PM IST
- ವೀರೇಶ್ ಜಿ. ಹೊಸೂರ್, ನ್ಯೂಸ್18 ಕನ್ನಡ

ಚಿಕ್ಕಮಗಳೂರು(ಜು. 07): ಕೊಲೆ, ಕಾರು-ಬೈಕ್-ಮನೆ ಕಳ್ಳತನ ಸೇರಿದಂತೆ ಯಾವುದೇ ರೀತಿಯ ಕೃತ್ಯಗಳ ಅಪರಾಧಿಗಳನ್ನ ಬಂಧಿಸಲು ಪೊಲೀಸರಿಗೆ ಇನ್ಮುಂದೆ ಕಷ್ಟವೇನೂ ಆಗಲ್ಲ. ಯಾಕಂದ್ರೆ, ಕಾಫಿನಾಡಿನ ಕೆಪ್ಯುಲಸ್ ಟೆಕ್ನಾಲಜಿಸ್ ಸಂಸ್ಥೆಯ ಯುವಕರು ಅಭಿವೃದ್ಧಿಪಡಿಸುತ್ತಿರುವ ಹೊಸ ಆ್ಯಪ್ ಇನ್ಮುಂದೆ ಪೊಲೀಸರ ಅರ್ಧ ಕೆಲಸ ಕಡಿಮೆ ಮಾಡಲಿದೆ. ಕ್ರೈಂ ಮಾಡಿರೋ ವ್ಯಕ್ತಿಯ ಒಂದು ಫೋಟೋ ಸಿಕ್ರೆ ಸಾಕು ಮಿಕ್ಕೆಲ್ಲಾ ವಿವರವನ್ನು ಈ ಆ್ಯಪ್ ಕಲೆಹಾಕುತ್ತದೆ. ಆ ವ್ಯಕ್ತಿ ಎಲ್ಲೇ ಓಡಾಡುತ್ತಿದ್ದರೂ ಆತ ಈಗ ಹೇಗಿದ್ದಾನೆ, ಎಲ್ಲಿದ್ದಾನೆ, ಎಲ್ಲೆಲ್ಲಿ ಓಡಾಡಿದ್ದಾನೆ, ಎಷ್ಟು ಬಾರಿ ಓಡಾಡಿದ್ದಾನೆ ಎಂಬೆಲ್ಲಾ ವಿವರಗಳೊಂದಿಗೆ ಆತನ ಜನ್ಮವನ್ನೇ ಜಾಲಾಡುತ್ತೆ. ಒಂದು ಬಾರಿ ಓರ್ವ ಒಂದು ಜಾಗದಲ್ಲಿ ಓಡಾಡಿದ್ರೆ ಮುಂದೆ ಆತ ಎಲ್ಲೇ ಕ್ರೈಂ ಮಾಡಿದರೂ ಆತನ ಸಂಪೂರ್ಣ ಮಾಹಿತಿಯನ್ನ ಮೂರೇ ಸೆಕೆಂಡ್‍ಗೆ ನೀಡುತ್ತೆ. ಈ ಆ್ಯಪ್‍ನ್ನು ಪೊಲೀಸರು ಸಮರ್ಪಕವಾಗಿ ಬಳಿಸಿಕೊಂಡ್ರೆ ಅಪರಾಧಿಗಳನ್ನ ಹಿಡಿಯೋದು ಪೊಲೀಸರಿಗೆ ತುಂಬಾ ಸುಲಭ.

ತಂತ್ರಜ್ಞಾನ ಹೇಗೆ?
ಫೋಟೋದ ವಿವರ ಇಟ್ಟುಕೊಂಡು ವ್ಯಕ್ತಿಯ ರಿಯಲ್-ಟೈಮ್ ಚಲನವಲನಗಳನ್ನು ಈ ಆ್ಯಪ್ ಹೇಗೆ ಮಾಡುತ್ತದೆ ಎಂಬುದು ಕುತೂಹಲ. ಕ್ಯಾಪುಲಸ್ ಟೆಕ್ನಾಲಜಿಸ್​ನ ಸಂಶೋಧಕ ನಿತಿನ್ ಕಾಮತ್ ನೀಡಿದ ಮಾಹಿತಿ ಪ್ರಕಾರ, ನಿರ್ದಿಷ್ಟ ಚಿಪ್​ನ್ನು ಸಿಸಿಟಿವಿಗಳಿಗೆ ಅಳವಡಿಸಬೇಕಾಗುತ್ತದೆ. ಬೇಕಾದ ವ್ಯಕ್ತಿಯ ಫೋಟೋವನ್ನು ಸ್ಕ್ಯಾನ್ ಮಾಡಿ ಈ ಆ್ಯಪ್​ನಲ್ಲಿ ಅಪ್​ಡೇಟ್ ಮಾಡಿದರೆ, ಆ ವ್ಯಕ್ತಿಯ ಚಹರೆಯ ವಿವರವನ್ನು ಸಂಗ್ರಹಿಸಲಾಗುತ್ತದೆ. ಚಿಪ್​​ಗಳನ್ನು ಅಳವಡಿಸಿರುವ ಸಿಸಿಟಿವಿಗಳಲ್ಲಿ ದಾಖಲಾದ ದೃಶ್ಯಗಳಲ್ಲಿ ಆ ವ್ಯಕ್ತಿ ಇದ್ದರೆ ಕೂಡಲೇ ಪತ್ತೆ ಹೆಚ್ಚುತ್ತದೆ. ತತ್​ಕ್ಷಣ ಅಲರ್ಟ್ ಮಾಡುತ್ತದೆ. ಯಾವ್ಯಾವ ಸಿಸಿಟಿವಿಗಳಲ್ಲಿ ಆ ವ್ಯಕ್ತಿಯ ಚಲನವಲನಗಳು ದಾಖಲಾಗಿವೆಯೋ ಅವೆಲ್ಲಾ ವಿವರಗಳು ಕೂಡಲೇ ಸಿಗುತ್ತವೆ.

ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಪೊಲೀಸರು ಕಳ್ಳರನ್ನು, ವಂಚಕರನ್ನು ಪತ್ತೆಹಚ್ಚುತ್ತಾರೆ. ಆದರೆ, ಚಾಲಾಕಿ ಕಳ್ಳರು ಈಗ ಅಪರಾಧ ಎಸಗುವಾಗ ಮೊಬೈಲ್​ನ್ನು ಬಳಸುವುದೇ ಇಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ಪಡೆಯುವಷ್ಟರಲ್ಲಿ ಎಸ್​​ಐಟಿ ತಂಡಕ್ಕೆ ಸಾಕುಸಾಕಾಗಿ ಹೋಗಿದೆ. ಇನ್ನು, ಒಂದೊಂದೇ ಸಿಸಿಟಿವಿಗಳನ್ನು ಜಾಲಾಡುವಷ್ಟರಲ್ಲಿ ಪೊಲೀಸರು ಇನ್ನೂ ಹೈರಾನಾಗಿ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಚಿಕ್ಕಮಗಳೂರಿನ ಈ ಹುಡುಗರು ಅಭಿವೃದ್ಧಿಪಡಿಸುತ್ತಿರುವ ಫೇಸ್ ರೆಕಗ್ನಿಶನ್​ನ ಆ್ಯಪ್ ನಿಜಕ್ಕೂ ಅತ್ಯುಪಯುಕ್ತವಾಗಿರಲಿದೆ. ಪೊಲೀಸರ ಅರ್ಧ ತಲೆನೋವು ಮತ್ತು ಕೆಲಸದ ಹೊರೆ ಕಡಿಮೆಯಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಪುಲಸ್ ಟೆಕ್ನಾಲಜಿಸ್​ನ ಟೀಮ್


ಕೆಎಸ್​ಪಿ ಆ್ಯಪ್:
Loading...

ಇತ್ತೀಚೆಗಷ್ಟೇ ಬಿಡುಗಡೆಯಾದ ಕರ್ನಾಟಕ ರಾಜ್ಯ ಪೊಲೀಸ್​ನ ಕೆಎಸ್​ಪಿ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದ್ದು ಇದೇ ಕ್ಯಾಪುಲಸ್ ಟೆಕ್ನಾಲಜೀಸ್ ಸಂಸ್ಥೆಯೇ. 35 ಸಾವಿರಕ್ಕೂ ಹೆಚ್ಚು ಡೌನ್​ಲೋಡ್ ಆಗಿರುವ ಈ ಆ್ಯಪ್​ನಲ್ಲಿ ಆಕರ್ಷಕ ಫೀಚರ್ಸ್ ಸೇರಿಸಲಾಗಿದೆ. ಈ ಆ್ಯಪ್‍ನಲ್ಲಿ ಬೈಕ್-ಕಾರ್ ಕಳ್ಳತನದ ಬಗ್ಗೆಯೂ ಸಂಪೂರ್ಣ ಮಾಹಿತಿ ದೊರೆಯಲಿದೆ. ಕಳ್ಳತನವಾಗಿರುವ ಗಾಡಿ ಈಗ ಎಲ್ಲಿದೆ, ಯಾರು ಓಡಿಸ್ತಿದ್ದಾರೆ ಅನ್ನೋದರ ಸಂಪೂರ್ಣ ಮಾಹಿತಿ ನೀಡಲಿದೆ. ಜೊತೆಗೆ ಈ ಆ್ಯಪ್‍ನಲ್ಲಿ ರಾಜ್ಯದ 35 ಪೊಲೀಸ್ ಕಂಟ್ರೋಲ್ ರೂಂಗಳ ಸಂಪೂರ್ಣ ಮಾಹಿತಿ ಇರುತ್ತದೆ. ನೀವು ಇರೋ ಜಾಗ ಯಾವ ಸ್ಟೇಷನ್ ಲಿಮಿಟ್‍ನಲ್ಲಿದೆ ಅನ್ನೋದನ್ನೂ ತೋರಿಸುತ್ತೆ. ಘಟನೆಯ ವಿವರ ಹಾಗೂ ಫೋಟೋವನ್ನ ಈ ಆ್ಯಪ್‍ನಲ್ಲಿ ಆಯಾ ಕಂಟ್ರೋಲ್ ರೂಂಗೆ ಸೆಂಡ್ ಮಾಡಬಹುದು. ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ತಾರೆ.

ಕೆಎಸ್​ಪಿ ಆ್ಯಪ್ ಜನಸಾಮಾನ್ಯರಿಗೆ ಲಭ್ಯವಿದೆ. ಆದರೆ, ಫೇಸ್ ರೆಕಗ್ನಿಶನ್ ಫೀಚರ್ ಇರುವ ಹೊಸ ಆ್ಯಪನ್ನು ಪೊಲೀಸ್ ಇಲಾಖೆಗೆಂದೇ ಅಭಿವೃದ್ಧಿಪಡಿಸಲಾಗುತ್ತಿದೆ. ಇಂಥದ್ದೊಂದು ಅಪ್ಲಿಕೇಶನ್ ಸಿದ್ಧವಾಗುತ್ತಿರುವುದು ನಮ್ಮ ದೇಶದಲ್ಲಿ ಇದೇ ಮೊದಲು ಎನ್ನುತ್ತಾರೆ ಕ್ಯಾಪುಲಸ್ ಟೆಕ್ನಾಲಜೀಸ್​ನ ಡೆವಲಪರ್ ನಿತಿನ್ ಕಾಮತ್. ಅಂದಹಾಗೆ, ಚಿಕ್ಕಮಗಳೂರಿನಲ್ಲಿ ಕಚೇರಿ ಹೊಂದಿರುವ ಈ ಸಂಸ್ಥೆಯಲ್ಲಿ ಒಟ್ಟು 12 ಮಂದಿಯ ತಂಡವಿದೆ. ಪೊಲೀಸ್ ಒನ್ ಎಂಬ ಆ್ಯಪ್​ನ ಡೆವಲಪ್ ಮಾಡಿದ್ದೂ ಇದೇ ತಂಡವೇ. ಸಮಾಜದಲ್ಲಿ ಅಪರಾಧಗಳನ್ನ ನಿಯಂತ್ರಿಸಲು ಪೊಲೀಸರಿಗೆ ತಾಂತ್ರಿಕ ಸಹಾಯವಾಗಿ ಈ ಯುವಕರು ನಿಂತಿದ್ದಾರೆ. ಈ ತಂಡದಿಂದ ಇಂಥ ಇನ್ನೂ ಹಲವು ಉಪಯುಕ್ತ ಆ್ಯಪ್​ಗಳು ಹೊರಹೊಮ್ಮಲಿ ಎಂದು ಹಾರೈಸೋಣ.
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...