ಪಿಎಂ ಮೋದಿ ಜೊತೆ ಚರ್ಚಿಸುವ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ; ಸಿಎಂ ಯಡಿಯೂರಪ್ಪ

ಶಿರಾ ಉಪ ಚುನಾವಣೆ ಶೀಘ್ರವೇ ನಡೆಯಲಿದೆ. ಈಗಾಗಲೇ ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ಬಗ್ಗೆಯೂ ಬಿಎಸ್​ ಯಡಿಯೂರಪ್ಪ ಮಾತನಾಡಿದ್ದಾರೆ.

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

 • Share this:
  ನವದೆಹಲಿ (ಸೆಪ್ಟೆಂಬರ್ 18): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.  ಅದಕ್ಕೂ ಮೊದಲು ದೆಹಲಿಯ ಚಾಣಕ್ಯ ಪುರಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಮೋದಿ ಜೊತೆಗಿನ ಭೇಟಿ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

  “ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿ ಜೊತೆ ಚರ್ಚೆ ಮಾಡುತ್ತೇನೆ. ಯಾವ ವಿಷಯಗಳನ್ನು ಚರ್ಚೆ ಮಾಡುತ್ತೇನೆಂದು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಪ್ರಧಾನಿ ಜೊತೆ ಚರ್ಚಿಸುತ್ತೇನೆ. ಇದಲ್ಲದೆ ಕೇಂದ್ರ ಸಚಿವರ ಬಳಿಯೂ ರಾಜ್ಯದ ವಿಷಯ ಚರ್ಚೆ ಮಾಡುತ್ತೇನೆ, ಎಂದು ಹೇಳುವ ಮೂಲಕ ಅವರು ಪ್ರವಾಹ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಪರೋಕ್ಷವಾಗಿ ತಿಳಿಸಿದರು.

  ಶಿರಾ ಉಪ ಚುನಾವಣೆ ಶೀಘ್ರವೇ ನಡೆಯಲಿದೆ. ಈಗಾಗಲೇ ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ಬಗ್ಗೆಯೂ ಬಿಎಸ್​ ಯಡಿಯೂರಪ್ಪ ಮಾತನಾಡಿದ್ದಾರೆ. “ಬಿಜೆಪಿ ಶಿರಾ ಉಪ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಎಚ್​.ಡಿ. ಕುಮಾರಸ್ವಾಮಿ ಭೇಟಿ ಬಗೆಗಿನ ಊಹಾಪೋಹದಲ್ಲಿ ಹುರುಳಿಲ್ಲ. ವಿಪಕ್ಷ ನಾಯಕನಾಗಿ ಬಂದು ಭೇಟಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ, ಎಂದರು.

  ಇದನ್ನೂ ಓದಿ: ನನಗೆ ಒಂದು ಆಹ್ವಾನವನ್ನೂ ನೀಡಿಲ್ಲವಲ್ಲ; ಕರ್ನಾಟಕ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಗರಂ

  ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಮೋದಿಗೆ ಬಿಎಸ್​ವೈ ಶುಭಕೋರಲಿದ್ದಾರೆ. ರಾಜ್ಯ ರಾಜಕೀಯ, ನೆರೆ, ಅತಿವೃಷ್ಟಿ ಪರಿಹಾರ ಹಂಚಿಕೆ , ಅನುದಾನದ ಕುರಿತು ಚರ್ಚೆ ನಡೆಸಲಿದ್ದು, ಅಗತ್ಯ ನೆರವು ಕೋರಲಿದ್ದಾರೆ.  ಇದೇ ವೇಳೇ ರಾಜ್ಯದ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ಕೂಡ ನಡೆಸಲಿದ್ದಾರೆ ಎನ್ನಲಾಗಿದೆ.
  Published by:Rajesh Duggumane
  First published: