ಜೈಲಿನಿಂದೇ ಸ್ಪರ್ಧಿಸಿ ಗೆಲುವು ಸಾಧಿಸಿದ ಬೋಪಣ್ಣ; ಅಕ್ಕನ ವಿರುದ್ಧ ಜಯಭೇರಿ ಬಾರಿಸಿದ ತಂಗಿ

ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕೊನೇ ಕ್ಷಣದಲ್ಲಿ ಬೇಲ್ ಪಡೆದು ಹೊರಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಅಂತು ಜೈಲಿನಲ್ಲಿ ಇದ್ದುಕೊಂಡೇ ಗೆಲುವು ಸಾಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬೋಪಣ್ಣ

ಬೋಪಣ್ಣ

  • Share this:
ಕೊಡಗು(ಡಿ.31): ರಾಜಕಾರಣದಲ್ಲಿ ಸೋಲು ಗೆಲುವು ಎನ್ನುವುದು ಕಾಮನ್. ಆದರೆ, ಇಲ್ಲಿ ಒಳ್ಳೆಯವರು ಗೆಲ್ಲುತ್ತಾರೋ, ಕೆಟ್ಟವರು ಗೆಲ್ಲುತ್ತಾರೋ ಎನ್ನೋದನ್ನು ಅಂದಾಜು ಮಾಡುವುದು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರನೇ ಪ್ರಭು. ಆತನ ಮರ್ಮವನ್ನು ಯಾರೂ ಊಹಿಸಲು ಸಾಧ್ಯವೇ ಇಲ್ಲ. ಹೀಗಾಗಿಯೇ ನಿರೀಕ್ಷೆಗೂ ಮೀರಿ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದು ಬಿಡುತ್ತದೆ. ಅದೇ ರೀತಿಯಲ್ಲೇ ಕೊಡಗು ಜಿಲ್ಲೆಯಲ್ಲೂ ಇಬ್ಬರು ವಿಶೇಷ ಅಭ್ಯರ್ಥಿಗಳು ಗೆದ್ದಿದ್ದಾರೆ. ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು ಜೈಲಿನಲ್ಲಿ ಇದ್ದುಕೊಂಡೇ ಗೆಲುವು ಸಾಧಿಸಿದ್ದಾರೆ. ಜಾತಿನಿಂದನೆ ಪ್ರಕರಣದಲ್ಲಿ ಜೈಲು ಸೇರಿ, ಬಳಿಕ ಅಲ್ಲಿಂದಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಅಭೂತಪೂರ್ವ ಗೆಲುವು ಪಡೆದಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ವಾರ್ಡಿನ ಬೋಪಣ್ಣ ಜೈಲಿನಲ್ಲಿ ಇದ್ದೇ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಬೋಪಣ್ಣ ಜಾತಿನಿಂದನೆ ಪ್ರಕರಣದಲ್ಲಿ ಕೆಲವು ತಿಂಗಳ ಹಿಂದೆ ಜೈಲು ಸೇರಿದ್ದರು. ಆದರೆ ಸ್ನೇಹಿತರು ಮತ್ತು ಕಾರ್ಯಕರ್ತರ ಸಹಾಯದಿಂದ ಜೈಲಿನಲ್ಲಿ ಇದ್ದೇ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ಮೂರು ಚುನಾವಣೆಗಳಲ್ಲಿ ಅವರು ಗೆಲುವು ಸಾಧಿಸಿ ಎರಡು ಬಾರಿ ಪಂಚಾಯಿತಿಯ ಅಧ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಈಗ ನಾಲ್ಕನೆ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಾಲಯಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕೊನೇ ಕ್ಷಣದಲ್ಲಿ ಬೇಲ್ ಪಡೆದು ಹೊರಬಂದು ಚುನಾವಣಾ ಪ್ರಚಾರ ನಡೆಸಿದ್ದರು. ಅಂತು ಜೈಲಿನಲ್ಲಿ ಇದ್ದುಕೊಂಡೇ ಗೆಲುವು ಸಾಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಇನ್ನು, ಅಧಿಕಾರ, ಅಂತಸ್ತು ಎನ್ನೋದು ಯಾರಿಗೆ ಆಸೆ ಇರಲ್ಲ ಹೇಳಿ.  ಒಂದೇ ವಾರ್ಡಿನ ಬೇರೆ ಬೇರೆಯವರು ಚುನಾವಣೆಗೆ ಸ್ಪರ್ಧಿಸೋದು ಸಹಜ. ಆದರೆ ಇಲ್ಲಿ ಒಂದೇ ಮನೆಯ ಅಕ್ಕ ತಂಗಿಯರು ಚುನಾವಣೆಗೆ ಸ್ಪರ್ಧಿಸಿ ಅಕ್ಕನ ವಿರುದ್ಧ ತಂಗಿ ಬಾರಿ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

ಬೋಪಣ್ಣ ಎಂಬುವರು ಜೈಲಿನಲ್ಲಿ ಇದ್ದೇ ಗೆದ್ದಿದ್ದರೆ, ಹೌದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮೇಕೇರಿ ಗ್ರಾಮ ಪಂಚಾಯಿತಿಯ ಬಿಳಿಗೇರಿ ವಾರ್ಡ್ ಒಂದರಿಂದ ಪುಷ್ಪಾ ಎಂಬುವವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರ ಅಕ್ಕ ಸುಮಾವತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಇಬ್ಬರ ನಡುವೆಯೂ ಜಿದ್ದಾಜಿದ್ದಿನ ಫೈಟ್ ಇತ್ತು. ಆದರೂ ಪುಷ್ಪಾ ಅವರು ಬರೋಬ್ಬರಿ 283 ಮತಗಳನ್ನು ಪಡೆದಿದ್ದರೆ, ಅವರ ಅಕ್ಕ ಸುಮಾವತಿ ಕೇವಲ 80 ಮತಗಳನ್ನು ಪಡೆದಿದ್ದಾರೆ. ಅಂದರೆ 203 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲೂ ಅಕ್ಕ ತಂಗಿಯರು ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲೂ ಇಬ್ಬರು ಮುಖಾಮುಖಿ ಸ್ಪರ್ಧಿಸಿದ್ದಾಗ, ಆಗಲೂ ಪುಷ್ಪಾ ಅವರು ಗೆಲುವು ಸಾಧಿಸಿದ್ದರು. ಆಗ ಸುಮಾವತಿ ಅವರು ಸ್ವಲ್ಪ ಮುನಿಸಿಕೊಂಡಿದ್ದರಂತೆ. ಆದರೆ ಈ ಬಾರಿ ಅದ್ಯಾವುದೂ ಇಲ್ಲ, ಗೆದ್ದು ಬಾ ಎಂದು ಅವರೇ ಆಶೀರ್ವದಿಸಿದ್ದಾರೆ ಎನ್ನು ಪುಷ್ಪಾ ಸಂತೋಷ ವ್ಯಕ್ತಪಡಿಸಿದ್ದಾರೆ.
Published by:Latha CG
First published: