Cancer: ಕೊನೆಗೂ ಕ್ಯಾನ್ಸರ್​​ಗೆ ಔಷಧಿ ಸಿಕ್ಕೇಬಿಡ್ತಾ? ಹಿತ್ತಲ ಗಿಡವೇ ಮದ್ದು ಅಂತಿದ್ದಾರೆ ವಿಜ್ಞಾನಿಗಳು

ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಪತ್ತೆ ಮಾಡುವ ಸಂಧರ್ಭದಲ್ಲಿ ಕ್ಯಾನ್ಸರ್ ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್  ಅಂಶ ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ ಯಾರೂ ಈ ವಿಚಾರದಲ್ಲಿ ಸಂಶೋಧನೆ ಮಾಡಿಲ್ಲ .ಹಾಗಾಗಿ ಇದು ಭಾರತದ‌ ಮೊದಲ ಸಂಶೋಧನೆ ಎಂಬ ಗಿರಿಮೆಗೆ ಪಾತ್ರವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಪೂರ್ವಜರು ಪ್ರಕೃತಿಯನ್ನು ಉಸಿರಾಗಿಕೊಂಡವರು. ಪ್ರಕೃತಿಯನ್ನೇ ಬದುಕನ್ನಾಗಿಸಿದವರು. ಯಾವುದೇ ಆರೋಗ್ಯ ಸಮಸ್ಯೆಗೆ ಪ್ರಕೃತಿಯಲ್ಲೇ ಮದ್ದು ಕಂಡುಹುಡುಕಿ ಅದಕ್ಕೆ ಪರಿಹಾರ ಕಂಡುಕೊಂಡವರು. ಆದರೆ ಕಾಲ ಕಳೆದಂತೆ ಪ್ರಕೃತಿ ನಾಶವಾಗಿ ಜೀವನ ಕ್ರಮವೇ ಬದಲಾಯಿತು. ಗಿಡಮೂಲಿಕೆಗಳ ಚಿಕಿತ್ಸಾ ಪದ್ಧತಿ ಮೂಢನಂಬಿಕೆ ಎಂಬ ಚರ್ಚೆಯಾಗುವ ಮಟ್ಟಿಗೆ ಬದಲಾಗಿಬಿಟ್ಟಿದ್ದೇವೆ..

ಆದರೆ ಹಿತ್ತಲಗಿಡವೇ ಮದ್ದು ಅಂತಾ ಮಂಗಳೂರಿನ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ, ಕೃಷಿ ತೋಟಗಳಲ್ಲಿ ಸಿಗುವ ಹಡೇ ಬಳ್ಳಿಯೂ ಮಾರಕ ಕ್ಯಾನ್ಸರ್ ನಿವಾರಕ ಅನ್ನೋದನ್ನು ಮಂಗಳೂರಿನ ಸಸ್ಯ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ.

ಹಡೇ ಬಳ್ಳಿಯನ್ನು ಸಂಶೋಧನೆ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್ ಗೆ ರಾಮಬಾಣವಾಗುವ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅಂಶಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ನ್ನು ಪಡೆದಿದ್ದಾರೆ. ಹಡೇ ಬಳ್ಳಿಯನ್ನು ಸಂಶೋಧನೆ ಮಾಡಿದ ದೇಶದ ಮೊದಲ ಸಂಶೋಧನೆ ಇದಾಗಿದ್ದು, ಭಾರತದ ಮೊದಲ ಪೇಟೆಂಟ್ ಕೂಡಾ ಇದಾಗಿದೆ.

ಇದನ್ನೂ ಓದಿ:Metabolism: ಈ 6 ಅಭ್ಯಾಸ ಬಿಡದೆ ಇದ್ರೆ ನಿಮ್ಮ ಮೆಟಬಾಲಿಸಂ ಕಡಿಮೆ ಆಗುತ್ತಂತೆ..!

ಹಡೇ ಬಳ್ಳಿ


ಮಂಗಳೂರು ವಿಶ್ವ ವಿದ್ಯಾನಿಲಯದ ಸಸ್ಯ ಶಾಸ್ತ್ರ ಸಂಶೋಧಕರಾದ ಫ್ರೋ.ಕೆ.ಆರ್ ಚಂದ್ರಶೇಖರ್ ಮತ್ತು ಫ್ರೊ.ಭಾಗ್ಯ ನಕ್ರೆಕಲಾಯ ಹಡೇ ಬಳ್ಳಿಯನ್ನು ಸಂಶೋಧನೆ  ಮಾಡಿದ್ದಾರೆ. ಸದ್ಯ ಈ ಇಬ್ಬರೂ ವಿಜ್ಞಾನಿಗಳು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ನಿವೃತಿಯಾಗಿದ್ದಾರೆ. ಸದ್ಯ ಮಂಗಳೂರು ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2017ರಲ್ಲಿ ಸಂಶೋಧನೆ ನಡೆಸಿ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀರ್ಘ ಸಮಯದ ಬಳಿಕ ಇವರ ಸಂಶೋಧನೆಗೆ ಪೇಟೆಂಟ್ ಲಭ್ಯವಾಗಿದೆ. 20 ವರ್ಷಗಳ ಅವಧಿಗೆ ಪೇಟೆಂಟ್ ಲಭ್ಯವಾಗಿದ್ದು,ಈ ಸಂಶೋಧನಾ‌ ಅಂಶ ಬಳಸಿ ಡ್ರಗ್ ತಯಾರು ಮಾಡಬಹುದಾಗಿದೆ.

ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಪತ್ತೆ ಮಾಡುವ ಸಂಧರ್ಭದಲ್ಲಿ ಕ್ಯಾನ್ಸರ್ ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್  ಅಂಶ ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ ಯಾರೂ ಈ ವಿಚಾರದಲ್ಲಿ ಸಂಶೋಧನೆ ಮಾಡಿಲ್ಲ .ಹಾಗಾಗಿ ಇದು ಭಾರತದ‌ ಮೊದಲ ಸಂಶೋಧನೆ ಎಂಬ ಗಿರಿಮೆಗೆ ಪಾತ್ರವಾಗಿದೆ.

ಈ ಹಿಂದೆ ಚೀನಾದಲ್ಲೂ ಈ ರೀತಿಯ ಬಳ್ಳಿಯನ್ನು ಸಂಶೋಧನೆ ಯನ್ನು ಅಲ್ಲಿನ ವಿಜ್ಞಾನಿಗಳು ಮಾಡಿದ್ದರು. ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು.ಇದಾದ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.

ಇದನ್ನೂ ಓದಿ:Dates Health Benefits: ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು? ತಜ್ಞರು ಹೇಳುವುದು ಹೀಗೆ..!

ಸಾಮಾನ್ಯವಾಗಿ ಈ ಹಡೇ ಬಳ್ಳಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ .ಗ್ರಾಮೀಣ ಭಾಗದ ಜನರು ಈ ಬಳ್ಳಿಯನ್ನು ಅರೆದು ದೇಹ ತಂಪಾಗಲು ಹಣೆಗೆ ಹಚ್ಚುತ್ತಿದ್ದರು. ನೆಗಡಿ ಜ್ವರ ಶೀತ,ಮಧುಮೇಹ ಸೇರಿದಂತೆ ಕೆಲ ರೋಗಗಳಿಗೆ ಇದು ರಾಮಬಾಣವಾಗಿದೆ..

ಈ ಮೂಲಕ ಪೃಕೃತಿ ಯಲ್ಲಿ ಸಿಗುವ ಹಲವು ಸಸ್ಯ ಪ್ರಬೇಧಗಳು ಹಲವು ರೋಗಗಳಿಗೆ ಚಿಕಿತ್ಸೆಯನ್ನು ನೀಡಬಹುದು ಎಂಬುವುದು ಸಾಬೀತಾಗಿದೆ. ಚಿಕಿತ್ಸಾ ವಿಧಾನಗಳು ಮುಂದುವರಿದರೂ, ನಮ್ಮ ಪೂರ್ವಜರು ಮಾಡಿದ ಚಿಕಿತ್ಸಾ ಪದ್ಧತಿಯಲ್ಲಿ ಸತ್ವ ಇದೆ. ಅದರಲ್ಲೂ ಸತ್ಯ ಇದೆ ಎಂಬುವುದು ಈ ಸಂಶೋಧನೆಯಿಂದ ಸಾಬೀತಾಗಿದೆ.
Published by:Latha CG
First published: