BJP Program: ಜನೋತ್ಸವಕ್ಕೆ ಮಾಡಿ ಉಳಿದ ಊಟ ಅನಾಥಾಶ್ರಮಕ್ಕೆ, ಇದು ನಿಯಮ ಬಾಹಿರ; ಆ ಮಕ್ಕಳಿಗೆ ಮಿಕ್ಕ ಆಹಾರ ಕೊಡ್ಬೇಡಿ!

ಜನೋತ್ಸವ ಕಾರ್ಯಕ್ರಮಕ್ಕೆ ಬೆಳಗ್ಗೆ  25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ ಇತ್ತು. ಹೀಗಾಗಿ ರಾತ್ರಿಯಿಂದಲೇ ಬಾಣಸಿಗರು ಬೆಳಗ್ಗೆಗೆಂದು ಕಾರ್ಯಕರ್ತರಿಗೆ ಪಲಾವ್ ಹಾಗೂ ಬಾದುಶಾ ಸಿದ್ದ ಮಾಡಿದ್ರು. ಬಳಿಕ  ಈ ಆಹಾರವನ್ನು ದೊಡ್ಡಬಳ್ಳಾಪುರದ ಹಾಸ್ಟೆಲ್ ಮತ್ತು ಅನಾಥಾಶ್ರಮಗಳಿಗೆ ಕಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ರು.

ಜನೋತ್ಸವಕ್ಕೆ ಸಿದ್ದವಾಗಿದ್ದ ಊಟ

ಜನೋತ್ಸವಕ್ಕೆ ಸಿದ್ದವಾಗಿದ್ದ ಊಟ

  • Share this:
ಬೆಂಗಳೂರು (ಜು.28): ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಹತ್ಯೆ (Praveen Murder) ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದ ಜನೋತ್ಸವ (Janotsava) ಕಾರ್ಯಕ್ರಮ ರದ್ದು ಮಾಡಲಾಗಿದೆ. ಕಾರ್ಯಕ್ರಮದಲ್ಲಿ (Program) ಪಾಲ್ಗೊಳ್ಳಲು ಆಗಮಿಸಬೇಕಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರ ಬೆಳಗಿನ ಉಪಹಾರಕ್ಕಾಗಿ ಭಾರಿ ಪ್ರಮಾಣದಲ್ಲಿ ಸಿದ್ಧಪಡಿಸಲಾಗಿದ್ದ ಪುಲಾವ್ , (Pulav) ಕೋಸಂಬರಿ ಮತ್ತು ಬಾದೂಷ ಹಾಗೇ ಉಳಿದುಬಿಟ್ಟಿದೆ. ಈ ಆಹಾರವನ್ನು ಹಾಸ್ಟೆಲ್ ಮತ್ತು ಅನಾಥಾಶ್ರಮಗಳಿಗೆ (Orphanage) ಕಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ರು. ಆದ್ರೆ ಈ ನಿರ್ಧಾರದ ಮೂಲಕ ಸರ್ಕಾರವೇ ತನ್ನ ಆದೇಶ ಉಲ್ಲಂಘಿಸಿದಂತಾಗಿದೆ. ಅನಾಥಾಶ್ರಮಗಳಿಗೆ ಹೊರಗಿನ ಯಾವುದೇ ಊಟ ನೀಡುವಂತಿಲ್ಲ ಹಾಗೂ ಅನಾಥಶ್ರಮದ ಮಕ್ಕಳನ್ನು ಬಿಟ್ಟು ಇತರರು ಅಲ್ಲಿ ಬರ್ತಡೇಗಳನ್ನು ಆಚರಿಸುವಂತಿಲ್ಲ ಎಂದು ಸರ್ಕಾರವೇ ಈ ಹಿಂದೆ ಆದೇಶ ಹೊರಡಿಸಿತ್ತು.

1 ಲಕ್ಷ  15 ಸಾವಿರ ಬಾದುಶಾ

ಜನೋತ್ಸವ ಕಾರ್ಯಕ್ರಮಕ್ಕೆ ಬೆಳಗ್ಗೆ  25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ ಇತ್ತು. ಹೀಗಾಗಿ ರಾತ್ರಿಯಿಂದಲೇ ಬಾಣಸಿಗರು ಬೆಳಗ್ಗೆಗೆಂದು ಕಾರ್ಯಕರ್ತರಿಗೆ ಪಲಾವ್ ಹಾಗೂ ಬಾದುಶಾ ಸಿದ್ದ ಮಾಡಿದ್ರು. ಬಳಿಕ  ಈ ಆಹಾರವನ್ನು ದೊಡ್ಡಬಳ್ಳಾಪುರದ ಹಾಸ್ಟೆಲ್ ಮತ್ತು ಅನಾಥಾಶ್ರಮಗಳಿಗೆ ಕಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ರು.ಅನಾಥಾಶ್ರಮಗಳಿಗೆ ಈ ಊಟ ಕೊಡ್ಬೇಡಿ

ಜನೋತ್ಸವ ರದ್ದು ಮಾಡಿದ್ದಕ್ಕೆ ಊಟ ವ್ಯರ್ಥವಾಗಬಾರದು ಎಂದು ಅನಾಥಾಶ್ರಮಗಳಿಗೆ, ಹಾಸ್ಟೆಲ್​ಗಳಿಗೆ ನೀಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅನಾಥಾಶ್ರಮಗಳಿಗೆ ಊಟ ನೀಡಿದ್ರೆ ನಿಮ್ಮ ಆದೇಶವನ್ನು ನೀವೆ ಉಲ್ಲಂಘಿಸಿದ್ದಂತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Praveen Murder: ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ನರಹಂತಕ ರಾಜಕಾರಣ ನಿಲ್ಲಲಿ; HDK

ಕಾರ್ಯಕ್ರಮ ರದ್ದು, ಮಧ್ಯರಾತ್ರಿ ಘೋಷಣೆ 

ತುರ್ತು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯರಾತ್ರಿ ಘೋಷಣೆ ಮಾಡಿದರು. ಮನಃಸಾಕ್ಷಿ ಒಪ್ಪಿರಲಿಲ್ಲ. ತುಂಬಾ ತೊಳಲಾಟದಲ್ಲಿದ್ದೆ. ಹಾಗಾಗಿ ಕಾರ್ಯಕ್ರಮ ರದ್ದುಪಡಿಸಲು ನಿರ್ಧರಿಸಿದೆ ಎಂದರು. ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ, ಈ‌ ಘಟನೆ ನೋಡಿ ಮನಸ್ಸಿಗೆ ಶಾಂತಿ ಇರಲಿಲ್ಲ. ಯುವಕನ ತಾಯಿಯ ಆಕ್ರಂದನ ನೋಡಿ ಮನಸ್ಸಿಗೆ ನೋವಾಯಿತು. ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ಹಾಗೂ ಸಾಧನಾ ಸಮಾವೇಶ ರದ್ದು ಗೊಳಿಸಲಾಗಿದೆ. ಬದಲಾಗಿ ಕೇವಲ ಪತ್ರಿಕಾಗೋಷ್ಠಿ ಮಾತ್ರ ಇರುತ್ತದೆ ಎಂದರು.

ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಹತ್ಯೆ ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲರೊಂದಿಗೆ ಮಾತನಾಡಿ ಈ ನಿರ್ಣಯವನ್ನು ಆತ್ಮಸಾಕ್ಷಿ ಮೂಲಕ ತೆಗೆದುಕೊಳ್ಳಲಾಗಿದೆ. ಆದರೂ ಸರ್ಕಾರದ ಕಲ್ಯಾಣ ಕಾರ್ಯಕ್ರಮವನ್ನು ಹೇಳುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಪ್ರವೀಣ್​ ಕುಟುಂಬಕ್ಕೆ 25 ಲಕ್ಷ ಪರಿಹಾರ


ಮಂಗಳವಾರ ರಾತ್ರಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಹತ್ಯೆಯಾಗಿದೆ ಈ ಹಿನ್ನೆಲೆ ಇವತ್ತು ನಡೆಯಬೇಕಿದ್ದ ಜನೋತ್ಸವವನ್ನು ರದ್ದು ಮಾಡಿದ್ದೀವಿ. ಪ್ರವೀಣ್ ಹತ್ಯೆ ಪ್ರಕರಣವನ್ನು  ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅಲ್ಲದೇ ಗಂಭೀರವಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ತಿಳಿಸಿದೆ. ಮೃತ ದುರ್ದೈವಿ ಪ್ರವೀಣ್​ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು ಹಾಗೂ ಅವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ರಾಜ್ಯಾಧ್ಯಕ್ಷರು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  Praveen Murder: ಏಳು SDPI ಕಾರ್ಯಕರ್ತರು ವಶಕ್ಕೆ; ಆತ್ಮೀಯ ಗೆಳೆಯ ಪ್ರವೀಣ್ ಬಗ್ಗೆ ಆರೀಫ್ ಹೇಳಿದ್ದು ಹೀಗೆ

ಪ್ರವೀಣ್ ಮನೆಗೆ ನಾಯಕರ ಭೇಟಿಗೂ ನಿರ್ಧಾರ ಮಾಡಿದ್ದೇವೆ. ಕೇಸ್​ನಲ್ಲಿ ಬೇರೆ ರಾಜ್ಯಗಳ ದುಷ್ಟ ಶಕ್ತಿಗಳ ಪಾತ್ರ ಏನಾದರೂ ಇದೆಯಾ ಎಂಬುದರ ಬಗ್ಗೆ ಪರಿಶೀಲಿಸಿ, ಇದನ್ನು NIAಗೆ ಕೊಡಬೇಕು ಎಂದು ಆಗ್ರಹ ಮಾಡುತ್ತೇವೆ ಎಂದು ಸಚಿವ ಅಶ್ವತ್ಥ​  ನಾರಾಯಣ್ ಹೇಳಿದ್ದಾರೆ.
Published by:Pavana HS
First published: