ಕರ್ನಾಟಕ ಚುನಾವಣೆ: ಪಕ್ಷಕ್ಕಾಗಿ ಸೋನಿಯಾ ಗಾಂಧಿಯಂತೆ ತ್ಯಾಗಕ್ಕೆ ಮುಂದಾಗ್ತಾರಾ ಬಿ. ಎಸ್​ ಯಡಿಯೂರಪ್ಪ?


Updated:May 16, 2018, 12:00 PM IST
ಕರ್ನಾಟಕ ಚುನಾವಣೆ: ಪಕ್ಷಕ್ಕಾಗಿ ಸೋನಿಯಾ ಗಾಂಧಿಯಂತೆ ತ್ಯಾಗಕ್ಕೆ ಮುಂದಾಗ್ತಾರಾ ಬಿ. ಎಸ್​ ಯಡಿಯೂರಪ್ಪ?

Updated: May 16, 2018, 12:00 PM IST
ಸುಮಿತ್ ಪಾಂಡೆ, ನ್ಯೂಸ್ 18 ಕನ್ನಡ

ನವದೆಹಲಿ(ಮೇ. 16): 1999ರಲ್ಲಿ 13 ತಿಂಗಳು ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ ಕೆಳಗುರುಳಿಸಿದ ಬಳಿಕ ಬಹುಮತದ ವಿಶ್ವಾನೆ ಮಂಡಿಸುವ ಸಂದರ್ಭದಲ್ಲಿ ಸೋನಿಯಾ ಗಾಂಧಿಗೆ ರಾಜಕೀಯದ ಅತ್ಯಂತ ಕಹಿ ಪಾಠವೊಂದು ಕಲಿತಿದ್ದರು. ಅಂದು ಅವರ ಮುಖ್ಯ ಸಲಹೆಗಾರ ಅರ್ಜುನ್ ಸಿಂಗ್ 'ಪ್ರವಾಸಿ ಪಕ್ಷಿಗಳು ಆಗಮಿಸುತ್ತಿದ್ದಾರೆ' ಎಂದಿದ್ದರು. ಅಲ್ಲದೇ ಸಮಾಜವಾದಿ ಪಾರ್ಟಿಯ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಕಾಂಗ್ರೆಸ್​ ನೇತೃತ್ವದ ಸರ್ಕಾರವನ್ನು ಸಮರ್ಥಿಸಲು ಹಿಂದೇಟು ಹಾಕಿದ್ದರು. ಇದು ಸೋನಿಯಾ ಗಾಂಧಿಗೆ ಸಿಕ್ಕ ಬಹುದೊಡ್ಡ ಶಾಕಿಂಗ್ ಸುದ್ದಿಯಅಗಿತ್ತು.

ಇದಾದ 5 ವರ್ಷಗಳ ಬಳಿಕ 2004ರಲ್ಲಿ ಸೋನಿಯಾ ಗಾಂಧಿ ಬಿಜೆಪಿಯನ್ನು ಹೊರತುಪಡಿಸಿ ಮೈತ್ರಿ ರೂಪಿಸಿದಾಗ, ಸರ್ಕಾರ ರಚಿಸುವ ಎಲ್ಲಾ ಅವಕಾಶಗಳು ಅವರ ಬಳಿ ಇತ್ತು. ಆದರೆ ಮುಂದಾಲೋಚನೆ ಇಟ್ಟುಕೊಂಡಿದ್ದ ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾಗುವ ಅವಕಾಶವನ್ನು ಬದಿಗೊತ್ತಿ, ಆ ಸ್ಥಾನಕ್ಕೆ ಮನಮೋಹನ್​ ಸಿಂಗ್​ರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು.

ಆದರೆ ಇಂದು ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಸ್ಥಿತಿಯನ್ನು ಗಮನಿಸಿದರೆ 2004ರಲ್ಲಿ ಯುಪಿಎ ಸರ್ಕಾರದ ಅದೇ ಘಟನಾವಳಿಗಳು ನೆನಪಿಸುವಂತಿದೆ.

ಇದೆಲ್ಲವೂ ಕಾಂಗ್ರೆಸ್​ನ ಶಿಮ್ಲಾ ಕಾನ್ಕ್ಲೆವ್​ನಿಂದ ಆರಂಭವಾಗಿತ್ತು, ಅಂದು ಕೈ ಪಾಳಯವು 90ರ ದಶಕದ ತನ್ನ 'ಎಕ್ಲಾ ಚಲೋ' ಸಿದ್ಧಾಂತವನ್ನು ಬಿಟ್ಟು ಬಿಡುವ ನಿರ್ಧಾರ ಮಾಡಿದ್ದರು. ಇದಾದ ಬಳಿಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ್ದ ಕಾಂಗ್ರೆಸ್​ ಪ್ರಾದೇಶಿಕ ಪಕ್ಷಗಳನ್ನು ತಮ್ಮೊಂದಿಗೆ ಸೇರಿಸುವ ಪ್ರಯತ್ನಕ್ಕ ಮುಂದಾಯಿತು.

ಕರ್ನಾಟಕದ ಕಾಂಗ್ರೆಸ್​ ಈಗಾಗಲೇ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದು, ಸರ್ಕಾರ ರಚಿಸುವ ಅವಕಾಶ ಸಿಕ್ಕರೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕುಮಾರಸ್ವಾಮಿಗೆ ನೀಡುವ ಷರತ್ತನ್ನೂ ಒಪ್ಪಿಕೊಂಡಿದೆ. ಇದರಿಂದ ಜೆಡಿಎಸ್​ ಹಾಗೂ ಬಿಜೆಪಿಯ ನಡುವಿನ ಮೈತ್ರಿ ಅಸಾಧ್ಯವೆನ್ನಬಹುದು ಯಾಕೆಂದರೆ ಕಾಂಗ್ರೆಸ್​ ನೀಡುವಷ್ಟು ಉತ್ತಮ ಆಫರ್​ ಬಿಜೆಪಿ ನೀಡಲು ಸಾಧ್ಯವಿಲ್ಲ ಎಂಬುವುದು ಪ್ರತಿಯೊಬ್ಬರಿಗೂ ತಿಳಿದಿರುವಂತಹುದ್ದೇ. 104 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅದು ಹೆಚ್ಚೆಂದರೆ ಕುಮಾರಸ್ವಾಮಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬಹುದಷ್ಟೇ.

ಒಂದು ವೇಳೆ ಬಿಜೆಪಿ ಕುಮಾರಸ್ವಾಮಿಗೆ ಸಿಎಂ ಆಗುವ ಅವಕಾಶ ನೀಡಿದರೆ, ಬಿಎಸ್​ ಯಡಿಯೂರಪ್ಪ ತ್ಯಾಗ ಮಾಡಬೇಕಾಗುತ್ತದೆ. ಇದರ ನೇರ ಪರಿಣಾಮ ರಾಜ್ಯದ ಲಿಂಗಾಯತ ವೋಡ್​ ಬ್ಯಾಂಕ್​ ಮೇಲೆ ಬೀರುತ್ತದೆ. ಇನ್ನು ಬಿಜೆಪಿ ಕುಮಾರಸ್ವಾಮಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಹೇಳಿದರೆ ಹಳೆ ಮೈಸೂರು ಭಾಗದ ಒಕ್ಕಲಿಗರ ವಿರೋಧವನ್ನೆದುರಿಸಬೇಕಾಗುತ್ತದೆ. ಆದರೆ 2019ರ ಮೊದಲು ಬಿಜೆಪಿ ಇಷ್ಟು ದೊಡ್ಡ ತೊಂದರೆ ಮೈಮೇಲೆ ಎಳೆದುಕೊಳ್ಳಲು ಇಷ್ಟಪಡುವುದಿಲ್ಲ.

Loading...

ಕರ್ನಾಟಕದ ಜಾತಿ ರಾಜಕೀಯವನ್ನು ಬದಿಗಿಟ್ಟು ಗಮನಿಸಿದರೆ 2019 ರಲ್ಲಿ ನಡೆಯಲಿರುವ ಸಾಮಾನ್ಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷವು ಅತಿ ದೊಡ್ಡ ಸಂದೇಶವನ್ನು ನೀಡಲು ಸಜ್ಜಾಗಿದೆ. ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಅವರ ಇಷ್ಟದಂತೆ ಕಾರ್ಯ ನಿರ್ವಹಿಸಲು ತಾವು ಸಿದ್ದ ಎಂಬುವುದನ್ನು ತೋರಿಸಿಕೊಡಲು ಕಾಂಗ್ರೆಸ್​ ಸದ್ಯ ಯತ್ನಿಸುತ್ತಿದೆ.

ಇನ್ನು ಇತ್ತ ಜೆಡಿಎಸ್​ ಬಿಜೆಪಿಯೊಂದಿಗೆ ಮೈತ್ರಿ ಮಾಡಿದರೆ ಸರ್ಕಾರ ರಚನೆಯಲ್ಲಿ ಮಹತ್ವದ ಸ್ಥಾನವೇನೂ ಸಿಗುವುದಿಲ್ಲ. ಆದರೆ ಕಾಂಗ್ರೆಸ್​ನೊಂದಿಗೆ ಕೈ ಮಿಲಾಯಿಸುವುದರಿಂದ ಅವರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.

ಹೀಗಾಗಿ ಕರ್ನಾಟಕ ಚುನಾವಣೆಯಲ್ಲಿ ಮತದಾರರು ಜೆಡಿಎಸ್​ಗೆ ಕಂಚಿನ ಪದಕ ನೀಡಿದರೂ ಅದಕ್ಕೆ ಚಿನ್ನ ಅಂಟಿಕೊಂಡಿದೆ ಎಂದು ಹೇಳಬಹುದು.


ಅದೇನಿದ್ದರೂ ಮುಂದಿನ 12 ತಿಂಗಳಿನಲ್ಲಿ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಲು ದೇವೇಗೌಡರಿಗೆ ಸಮಯ ಸಿಕ್ಕಂತಾಗುತ್ತದೆ. ಅವರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಕಣಕ್ಕಿಳಿಸುವ ಯತ್ನದಲ್ಲಿದ್ದಾರೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ