CAMS Letter: ಬೇಸಿಗೆ ರಜೆ ವಿಸ್ತರಣೆ ಮಾಡಬೇಡಿ, ನಿಗದಿಯಂತೆ ಶಾಲೆ ತೆರೆಯಿರಿ; ಸಿಎಂಗೆ ಖಾಸಗಿ ಶಾಲೆಗಳಿಂದ ಪತ್ರ

ಖಾಸಗಿ ಶಾಲೆಗಳು ಈಗ ನಿಗದಿಯಾಗಿರುವ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು. ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡುವಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 6):  ಶಾಲೆಗಳಿಗೆ ಬೇಸಿಗೆ ರಜೆ (Summer Holidays) ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ಯಾಮ್ಸ್​ ಕಾರ್ಯದರ್ಶಿ ಶಶಿಕುಮಾರ್​ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ. ಬೇಸಿಗೆ ರಜೆ ಅವಧಿ ವಿಸ್ತರಿಸದಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಿಸಿಲಿನ ತಾಪಮಾನ (Temperatures) ಹೆಚ್ಚಳ ಮುಂದುವರೆದರೆ ಮೇ 16ಕ್ಕೆ ನಿಗದಿಯಾಗಿರುವ ಶಾಲಾ ಆರಂಭ (School Start) ದಿನಾಂಕವನ್ನು ಮುಂದೂಡಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ (Children Health) ದೃಷ್ಟಿಯಿಂದ ರಜೆ ಮುಂದೂಡುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯೋಚನೆ ಮಾಡುತ್ತಿದೆ. ಆದರೆ ರಜೆ ಅವಧಿ ಮುಂದೂಡದಂತೆ ಸಿಎಂಗೆ ಕ್ಯಾಮ್ಸ್ ನಿರ್ದೇಶಕರು ಪತ್ರ ಬರೆದಿದ್ದಾರೆ.

ನಿಗದಿಯಂತೆ ಶಾಲೆ ಆರಂಭಿಸಿ

ಖಾಸಗಿ ಶಾಲೆಗಳು ಈಗ ನಿಗದಿಯಾಗಿರುವ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು. ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒತ್ತು ನೀಡುವಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ‌ 2019-20ರಿಂದ ಪ್ರಸುತ್ತ ಸಾಲಿನ ತನಕ ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಶೈಕ್ಷಣಿಕ ಚಟುವಟಿಕೆಗಳು ಅತ್ಯಂತ ಕನಿಷ್ಠ ಕಲಿಕೆ ಆಗಿವೆ. ಇದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನ್ಯಾಯ ಎಸಗಿದಂತೆ ಆಗುತ್ತದೆ ಎಂದಿದ್ದಾರೆ.


ಶಾಲೆ ಆರಂಭ ಮುಂದೂಡದಂತೆ ಮನವಿ

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಜವಾಬ್ದಾರಿಯಿಂದ ಇದನ್ನ ಅರಿತು ಮೇ 16ಕ್ಕೆ ಶಾಲೆ ಪುನರ್ ಆರಂಭಿಸಿ, ಶೈಕ್ಷಣಿಕ ಸುಧಾರಣೆಗೆ ರೂಪು ರೇಷೆಗಳನ್ನ ಹಮ್ಮಿಕೊಂಡಿತ್ತು. ಆದರೆ, ಕೆಲವರು ವೈಯಕ್ತಿಕ ಅಭಿಪ್ರಾಯಗಳ ಮೂಲಕ ಬೇಸಿಗೆ ನೆಪವೊಡ್ಡಿ ಶಾಲೆ ಪ್ರಾರಂಭ ಮುಂದೂಡಲು ಕೆಲವರು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಸರ್ಕಾರಕ್ಕೆ ಶಾಲೆ ಆರಂಭ ಮುಂದೂಡಲು ಶಿಫಾರಸು ಮಾಡಿದ್ದಾರೆ.‌


ಇದನ್ನೂ ಓದಿ: Rain Update: ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಮೇಲೆ ಉರುಳಿ ಬಿದ್ದ ಮರ; ಇನ್ನು 5 ದಿನಗಳ ಕಾಲ ಅಬ್ಬರಿಸಲಿದ್ದಾನೆ ವರುಣ

ಆದರೆ, ಯಾವುದೇ ಒತ್ತಡಕ್ಕೆ ಮಣಿಯಾದೇ ಯಾವುದೇ ಕಾರಣಕ್ಕೂ ಶಾಲೆ ಆರಂಭ ಮುಂದೂಡಬಾರದು ಅಂತ ಕೆಲವರು ಒತ್ತಾಯ ಮಾಡಿದ್ದಾರೆ.‌ ಮಕ್ಕಳ ನಿರಂತರ ಕಲಿಕೆಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.


ಮೇ 16ರಂದು ಶೈಕ್ಷಣಿಕ ವರ್ಷ ಆರಂಭ

ಶಿಕ್ಷಣ ಇಲಾಖೆಯು 2022-23ನೇ ಶೈಕ್ಷಣಿಕ ವರ್ಷ ಪುನಾರಂಭಕ್ಕೆ ಇದೇ ಮೇ 16ಕ್ಕೆ ದಿನಾಂಕ ನಿಗದಿ ಮಾಡಿದೆ. ಆದರೆ, ಇದಕ್ಕೆ ಪೋಷಕರ ವರ್ಗ ವಿರೋಧ ವ್ಯಕ್ತಪಡಿಸಿದೆ. ಕಾರಣ ಕೋವಿಡ್ ನಾಲ್ಕನೇ ಅಲೆ ಭೀತಿ ಇರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದ್ದು, ಪ್ರವೇಶ ಶುಲ್ಕ, ಸಮವಸ್ತ್ರ ಖರೀದಿಸಿದ ಮೇಲೆ ಲಾಕ್​​ಡೌನ್ ಘೋಷಣೆ ಮಾಡಿ ಬಳಿಕ ಆನ್​​ಲೈನ್ ಶಿಕ್ಷಣ ಆರಂಭಿಸಲಾಗುತ್ತದೆ. ಹೀಗಾಗಿ ತಡವಾಗಿ ಶೈಕ್ಷಣಿಕ ವರ್ಷ ಆರಂಭಿಸುವಂತೆ ಪೋಷಕರು ಸರ್ಕಾರಕ್ಕೆ ಒತ್ತಾಯ ಮಾಡ್ತಿದ್ದಾರೆ. ಕೋವಿಡ್ ಸ್ಥಿತಿ - ಗತಿ ನೋಡಿಕೊಂಡು ಶಾಲಾ ಪುನಾರಂಭದ ದಿನಾಂಕ ಘೋಷಿಸುವಂತೆ ಹೇಳುತ್ತಿದ್ದಾರೆ.

ಪೋಷಕರಿಗೆ ಮಕ್ಕಳ ಆರೋಗ್ಯದ ಚಿಂತೆ

ಆದರೆ, ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಮಕ್ಕಳನ್ನು ಈ ಸಮಯದಲ್ಲಿ ಶಾಲೆಗೆ ಕಳುಹಿಸಿದರೆ, ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬ ಆತಂಕ ಪಾಲಕರಲ್ಲೂಇದೆ. ಈ ಮಧ್ಯೆ, ವಿಧಾನ ಪರಿಷತ್ತಿನ ಸದಸ್ಯ  ಎಸ್‌.ಎಲ್‌. ಭೋಜೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ರಜೆ ಅವಧಿ ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನು ಓದಿ:  ಪಿಎಸ್ಐ ಪರೀಕ್ಷೆ ಹಗರಣದ ಅಪರಾಧಿಗಳು ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತೇವೆ! ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಾವಣಗೆರೆ ಸೇರಿದಂತೆ ಮಲೆನಾಡು, ಅರೆ ಮಲೆನಾಡಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ನಿಗದಿಪಡಿಸಿರುವ ದಿನಾಂಕವನ್ನು ವಿಸ್ತರಿಸಬೇಕೆಂದು ಅವರು ಕೋರಿದ್ದಾರೆ.
Published by:Pavana HS
First published: