ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ (Election 2023) ಕಾವು ಜೋರಾಗಿದ್ದು, ಕನ್ನಡ ಚಿತ್ರರಂಗದ (Kannada Cinema Industry) ಘಟಾನುಘಟಿ ನಾಯಕರು ಈ ಬಾರಿ ಎಲೆಕ್ಷನ್ ಅಖಾಡಕ್ಕಿಳಿದು ನೆಚ್ಚಿನ ನಾಯಕರ ಪರ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ನಾಯಕರ ಪರ ಸ್ಟಾರ್ ಪ್ರಚಾರಕರಾಗಿ ನಟ ಕಿಚ್ಚ ಸುದೀಪ್ (Actor Sudeep) ಎಲ್ಲೆಡೆ ಅಬ್ಬರಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ.
ವರುಣಾದಲ್ಲಿ ಟಗರು ಸಿದ್ದು ಪರ ಟಗರು ಶಿವ ಪ್ರಚಾರ
ಮಾಜಿ ಸಿಎಂ ಸಿದ್ದರಾಮಯ್ಯ ಪರವೂ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಗೆಲುವಿಗಾಗಿ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಸಿದ್ದರಾಮಯ್ಯ, ಮತದಾರರನ್ನು ಸೆಳೆಯಲು ನಾನಾ ಪ್ಲಾನ್ ಮಾಡಿದ್ದಾರೆ. ಇದೀಗ ಶಿವಣ್ಣ ಕೂಡ ವರುಣಾದಲ್ಲಿ ಸಿದ್ದರಾಮಯ್ಯ ಪರ ಮತಬೇಟೆಯಾಡಲಿದ್ದಾರೆ. ಮೇ 4ರಂದು ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಸಿನಿಮಾ ಸ್ಟಾರ್ಗಳು ಅಬ್ಬರದ ಪ್ರಚಾರ ಮಾಡಲಿದ್ದಾರೆ.
ಸಿದ್ದು ಪರ ನಿಂತ ಸ್ಟಾರ್ ನಟರು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ರಮ್ಯಾ, ನಟ ದುನಿಯಾ ವಿಜಯ್ ವರುಣಾ ಕ್ಷೇತ್ರದಲ್ಲಿ ಸಿದ್ದು ಪರವಾಗಿ ಭರ್ಜರಿ ಪ್ರಚಾರ ಮಾಡಲಿದ್ದಾರೆ. ರಾಜ್ಯ ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ ಕೂಡ ಇದೀಗ ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ. ಕೇಂದ್ರ ನಾಯಕರು ನಟಿಯ ಮನವೊಲಿಕೆ ಮಾಡಿ ಪ್ರಚಾರಕ್ಕೆ ಒಪ್ಪಿಸಿದ್ದಾರೆ.
ಮಧು ಬಂಗಾರಪ್ಪ ಪರ ಶಿವಣ್ಣ ಪ್ರಚಾರ
ಸೋಮವಾರದಿಂದಲೇ (ಮೇ.01) ನಟ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗದ ಸೊರಬದ ಕ್ಷೇತ್ರದಲ್ಲಿ ಭಾಮೈದ ಮಧು ಬಂಗಾರಪ್ಪ ಪರ ಶಿವರಾಜ್ ಕುಮಾರ ಮತಯಾಚಿಸಲಿದ್ದಾರೆ. ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಸೇರಿರುವ ಮಧು ಬಂಗಾರಪ್ಪ ಅವರನ್ನು ಈ ಬಾರಿ ಗೆಲ್ಲಿಸಲು ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಲು ಪಣ ತೊಟ್ಟಂತಿದೆ.
ಜಗದೀಶ್ ಶೆಟ್ಟರ್ ಪರ ಹ್ಯಾಟ್ರಿಕ್ ಹೀರೋ ಮತಬೇಟಿ
ಶಿವಮೊಗ್ಗ ಮುಗಿಸಿ ವರುಣಾದಲ್ಲಿ ನಟ ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಟಗರು ಶಿವಣ್ಣ ಮತಯಾಚಿಸಿದ ಬಳಿಕ ಬಿಜೆಪಿ ಬಿಟ್ಟು ಬಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ಪ್ರಚಾರ ಮಾಡಲಿದ್ದಾರೆ. ಬಿಜೆಪಿಗೆ ಟಾಂಗ್ ಕೊಡಲು ಕಾಂಗ್ರೆಸ್ ಪಕ್ಷದಿಂದ ನಿಂತು ಶೆಟ್ಟರ್ ಗೆಲ್ಲುವಿನ ಪಣ ತೊಟ್ಟಿದ್ದಾರೆ. ಶಿರಸಿಯಲ್ಲಿ ಭೀಮಣ್ಣ ನಾಯಕ ಮತ್ತು ಅಶೋಕ್ ಖೇಣಿ ಪರ ಕೂಡ ಶಿವಣ್ಣ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿ ಪರ ಆ್ಯಕ್ಷನ್ ಪ್ರಿನ್ಸ್ ಧ್ರುವ
ಅರಕಲಗೂಡು ಕ್ಷೇತ್ರದ ಪ್ರತಿ ಹೋಬಳಿಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೋಗಲಿದ್ದಾರೆ. ಇಲ್ಲಿಯ ಪಕ್ಷೇತರ ಅಭ್ಯರ್ಥಿ ಪರವಾಗಿಯೇ ಪ್ರಚಾರ ಮಾಡಲಿದ್ದಾರೆ. ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕೆಡಿ ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ. ಇದರ ಬೆನ್ನಲ್ಲಿಯೇ ಮಾರ್ಟಿನ್ ಚಿತ್ರದ ಟೀಸರ್ ಅಂತೂ ಬೇಜಾನ್ ಸದ್ದು ಮಾಡುತ್ತಲೇ ಇದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಎಲೆಕ್ಷನ್ ಪ್ರಚಾರಕ್ಕೆ ಬರ್ತಾರೆ ಅನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಇರಲಿಲ್ಲ ಅನಿಸುತ್ತದೆ. ಆದರೆ ಧ್ರುವ ಸರ್ಜಾ ಕೂಡ ಚುನಾವಣೆ ಪ್ರಚಾರ ಮಾಡೋಕೆ ಸಜ್ಜಾಗಿದ್ದಾರೆ. ರಾಜ್ಯದಲ್ಲಿರೋ ಯಾವುದೇ ಪಕ್ಷದ ಪರವಾಗಿ ಧ್ರುವ ಸರ್ಜಾ ಇಲ್ಲಿ ಪ್ರಚಾರ ಮಾಡುತ್ತಿಲ್ಲ. ಪಕ್ಷೇತರ ಅಭ್ಯರ್ಥಿ ಪರವಾಗಿ ಧ್ರುವ ಸರ್ಜಾ ಪ್ರಚಾರಕ್ಕೆ ಬರ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ