Belagavi Bandh: ಅಗ್ನಿಪಥ್ ಯೋಜನೆ ವಿರೋಧಿಸಿ ಜೂ. 20ರಂದು ಬೆಳಗಾವಿ ಬಂದ್​ಗೆ ಕರೆ

ಬೆಳಗಾವಿ ಚಲೋ ಮಹಾ ಆಂದೋಲನಕ್ಕೆ ಸೇನೆ ಸೇರಲು ಬಯಸುವ ಯುವಕರು ಕರೆ ನೀಡಿದ್ದು ಸೇನಾ ನೇಮಕಾತಿ ವಿಳಂಬ, ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೂನ್ 20ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.

ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿಯಲ್ಲಿ ಪ್ರತಿಭಟನೆ

  • Share this:
ಬೆಳಗಾವಿ(ಜೂನ್,18)- ಸೇನಾ (Indian Army) ನೇಮಕಾತಿಯ ಹೊಸ ನಿಯಮ ಅಗ್ನಿಪಥ್ ಯೋಜನೆ (Agnipath project) ಜಾರಿಗೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ  ವಿರೋಧ ವ್ಯಕ್ತವಾಗಿದ್ದು,  ಜೂನ್ 20ರಂದು ಬೆಳಗಾವಿ ಬಂದ್‌ಗೆ (Belagavi Bandh) ಕರೆ ನೀಡಲಾಗಿದೆ. ಸೇನೆ ಸೇರಲು ಬಯಸುವ ಆಕಾಂಕ್ಷಿಗಳು ಬಂದ್‌ಗೆ ಕರೆ ನೀಡಿದ್ದಾರೆ. ಜೂನ್ 20ರ ಬೆಳಗ್ಗೆ ಬೆಳಗಾವಿಯ ಕೋಟೆ ಬಳಿ ಜಮಾವಣೆಗೊಳ್ಳುವಂತೆ ವಾಟ್ಸಪ್ ಮೂಲಕ ನೂರಾರು ಯುವಕರಿಂದ ಅನಾಮಧೇಯ ಸಂದೇಶ ಕಳುಹಿಸಲಾಗಿದೆ. ಬೆಳಗಾವಿ, ಬಾಗಲಕೋಟ, ಧಾರವಾಡ ಜಿಲ್ಲೆಯ ಯುವಕರು ಜಮಾವಣೆ ಸಾಧ್ಯತೆ ಇದೆ. ಬೆಳಗಾವಿ ಚಲೋ ಮಹಾ ಆಂದೋಲನಕ್ಕೆ ಸೇನೆ ಸೇರಲು ಬಯಸುವ ಯುವಕರು ಕರೆ ನೀಡಿದ್ದು ಸೇನಾ ನೇಮಕಾತಿ ವಿಳಂಬ, ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೂನ್ 20ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.

ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ

ಇಂದು ಅಗ್ನಿಪಥ್ ಯೋಜನೆ ಹಿಂಪಡೆಯುವಂತೆ ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಯುವಕರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಗೋಕಾಕ ನಗರ, ಸುತ್ತಮುತ್ತಲಿನ ಸೇನಾ ಆಕಾಂಕ್ಷಿ ಯುವಕರು ಅಗ್ನಿಪಥ್ ಯೋಜನೆ ಯುವ ಸಮೂಹದ ಆತ್ಮಹತ್ಯೆಗೆ ಕಾರಣವಾಗಿದೆ‌. ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡಯತ್ತಿದೆ.ಇದರಿಂದ ದೇಶದಲ್ಲಿ ಮತ್ತಷ್ಟು ನಿರುದ್ಯೋಗ ಸಮಸ್ಯೆಗಳು ತಲೆದೂರುತ್ತವೆ.ಹೀಗಾಗಿ ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆ ಜಾರಿಗೆ ತರಬಾರದು ಎಂದು ಸೇನಾ ಆಸಕ್ತ ಯುವಕರು ಒತ್ತಾಯಿಸಿದರು. ಒಂದು ವೇಳೆ ಅಗ್ನಿಪಥ್ ಯೋಜನೆ ರದ್ದು ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆಯನ್ನು ಯುವಕರು ನೀಡಿದರು.

ಇದನ್ನೂ ಓದಿ: Agnipath: ಒಂದೆಡೆ ಹೊತ್ತಿ ಉರಿಯುತ್ತಿರುವ 'ಅಗ್ನಿ', ಮತ್ತೊಂದೆಡೆ ಮೀಸಲಾತಿ! ಅಗ್ನಿವೀರರಿಗೆ ಕೇಂದ್ರದಿಂದ ಗುಡ್‌ ನ್ಯೂಸ್

ಬೆಳಗಾವಿ ಜಿಲ್ಲೆಯ ಗೋಕಾಕ್, ಖಾನಾಪುರ, ಚಿಕ್ಕೋಡಿಯಲ್ಲಿ ಪ್ರತಿಭಟನೆ ಆರಂಭವಾಗಿದೆ. ಇನ್ನೂ ಎಲ್ಲಾ 15 ತಾಲೂಕಿನಲ್ಲಿ ಧರಣಿ ಬಳಿಕ. ಜೂನ್ 20 ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ. ಈ ಬಗ್ಗೆ ಭೀತಿ ಪತ್ರಗಳು ಹರಿದಾಡುತ್ತಿವೆ. ದೇಶದ ಹಲವು ಕಡೆಗಳಲ್ಲಿ ಹಿಂಸಾ ರೂಪ ಪಡೆದಿರೋ ಧರಣಿ ಈಗ ಬೆಳಗಾವಿ ಜಿಲ್ಲೆಗೆ ಕಾಲಿಟ್ಟಿದೆ. ಪೊಲೀಸರ ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಿದ್ಧತೆ ಮಾಡಿದ್ದಾರೆ.

ಖಾನಾಪೂರದಲ್ಲೂ ಶಾಸಕಿ‌‌ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ;
ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಸೇನಾ ಆಕಾಂಕ್ಷಿ ಯುವಕರು ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣ ಮಲಪ್ರಭಾ ಮೈದಾನದಲ್ಲಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಖಾನಾಪುರ ಪಟ್ಟಣದ ‌ಮಲಪ್ರಭಾ ತಾಲೂಕು ಮೈದಾನದಲ್ಲಿ ಸಾವಿರಾರು ಯುವಕರು ಜಮಾವನೆಗೊಂಡಿದ್ದು ಯುವಕರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಸಾಥ್ ನೀಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮಲಪ್ರಭಾ ಕ್ರೀಡಾಂಗಣದಿಂದ ತಹಶಿಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸೇನಾ ನೇಮಕಾತಿ ಹೊಸ ನಿಯಮ ಅಗ್ನಿಪಥ್ ಕೈಬಿಡುವಂತೆ ತಹಶಿಲ್ದಾರರ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಲಿದರು.

ಚಿಕ್ಕೋಡಿಯಲ್ಲೂ ಅಗ್ನಿಪಥ್ ಗೆ ಸಿಟ್ಟು..!
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಯುವಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ‌. ಕೇಂದ್ರ ಸರ್ಕಾರ ತಕ್ಷಣವೇ ಅಗ್ನಿಪಥ್ ಯೋಜನೆ ಹಿಂಪಡೆಯಬೇಕೆಂದು ಭಾರತೀಯ ಸೇನೆ ಸೇರುವ ಆಕಾಂಕ್ಷಿ ಯುವಕರು ಆಗ್ರಹಿಸಿದರು. ಇತ್ತ ಜಿಲ್ಲೆಯ ಅಗ್ನಿಪಥ್ ವಿರುದ್ಧ ಹೋರಾಟ ಹಿನ್ನೆಲೆ ಬೆಳಗಾವಿ ಜಿಲ್ಲೆ ಮತ್ತು ನಗರ ವ್ಯಾಪ್ತಿಯಲ್ಲಿ ಪ್ರತಿಭಟನ ನಡೆಯುವ ಸ್ಥಳಗಳಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.
Published by:Kavya V
First published: