• Home
  • »
  • News
  • »
  • state
  • »
  • C T Ravi: ನನ್ನನ್ನು ಹಿಂದೂ ಹುಲಿ ಅಂತ ಕರೆಯಬೇಕೇ ವಿನಃ ಮುಲ್ಲಾ ಅಂತಲ್ಲ; ಸಿ ಟಿ ರವಿ

C T Ravi: ನನ್ನನ್ನು ಹಿಂದೂ ಹುಲಿ ಅಂತ ಕರೆಯಬೇಕೇ ವಿನಃ ಮುಲ್ಲಾ ಅಂತಲ್ಲ; ಸಿ ಟಿ ರವಿ

ಸಿ ಟಿ ರವಿ

ಸಿ ಟಿ ರವಿ

ಈಗ ಗಡಿಯನ್ನ ಮೀರಿ ಸಂಬಂಧಗಳು ಗಟ್ಟಿಯಾಗುತ್ತಿರುವ ಕಾಲದಲ್ಲಿ ಗಡಿಯ ಗೋಡೆಯನ್ನ ಎತ್ತಿ ಸಂಬಂಧ ಹಾಳು ಮಾಡುವ ಕೆಲಸವನ್ನ ಯಾರೂ ಕೂಡ ಮಾಡಬಾರದು. ಮತ್ತೆ ಕರ್ನಾಟಕದ ವಿಷಯ ಬಂದಾಗ ನೆಲ ಜಲದ ರಕ್ಷಣೆ ಬಗ್ಗೆ ಯಾವತ್ತೂ ಕೂಡಾ ರಾಜಿ ಮಾಡಿಕೊಂಡಿಲ್ಲ.

  • Share this:

ಬಿಜೆಪಿ ನಾಯಕರ (BJP Leaders) ಹೆಸರಿಗೆ ಮುಸ್ಲಿಂ ಹೆಸರನ್ನು (Muslim Names) ಹಾಕಿ ಕಾಂಗ್ರೆಸ್ ಟ್ವೀಟ್ (Congress Tweet) ಮಾಡ್ತಿರೋ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP Leader CT Ravi) ಪ್ರತಿಕ್ರಿಯೆ ನೀಡಿದರು. ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ರೆ ಕಾಂಗ್ರೆಸ್​​ನವರು (Congress) ಖಂಡಿತ ಕರೆಯಲಿ. ನನ್ನ ಸ್ವಭಾವ ಕುಂಕುಮ ಕಂಡರೆ ಆಗದಿದ್ರೆ, ಕೇಸರಿ ನೋಡಿದ್ರೆ ಆಗದಿದ್ರೆ, ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ರೆ ಖಂಡಿತ ಕರೆಯಬಹುದು. ನನ್ನ ಮುಲ್ಲಾ ಅಂತ ಕರೆಯೊಕ್ಕಾಗಲ್ಲ, ಹಿಂದೂ ಹುಲಿ ಅಂತಾನೇ ಕರೆಯಬೇಕು. ನನ್ನ ಮುಲ್ಲಾ ಅಂತ ಕರೆದ್ರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ. ಸ್ವಭಾವಕ್ಕೆ ತಕ್ಕಂತೆ ಬಿರುದುಗಳು ನಮಗೆ ಬರುತ್ತದೆ. ಪರ್ಷಿಯನ್ ಭಾಷೆಯನ್ನ ಆಡಳಿತ ಭಾಷೆಯನ್ನಾಗಿ ಮಾಡಿದವನನ್ನ ಕನ್ನಡ ಪ್ರೇಮಿ ಅಂತ ಹೇಳಕ್ಕಾಗುತ್ತಾ ಎಂದು ಪ್ರಶ್ನೆ ಮಾಡಿದರು.


ಮುಲ್ಲಾ ಅನ್ನೋ ಹೆಸರು ಯಾರಿಗೆ ಕನೆಕ್ಟ್ ಆಗುತ್ತೆ ಅಂದ್ರೆ, ಶಾದಿ ಭಾಗ್ಯ, ದೇ ಆರ್ ಆಲ್ ಮೈ ಬ್ರದರ್ಸ್ ಅನ್ನೋರಿಗೆ ಕನೆಕ್ಟ್ ಆಗುತ್ತದೆ. ಬೆಂಕಿ ಹಾಕಿದ್ರು ಕೂಡ ಅಮಾಯಕರು ಅನ್ನೋರಿಗೆ ಕನೆಕ್ಟ್ ಆಗುತ್ತೆ. ಕೇಸರಿ, ಕುಂಕುಮವನ್ನ ದೂಡಿ ಟೋಪಿಯನ್ನ ಪ್ರೀತಿಯಿಂದ ಹಾಕಿಕೊಳ್ಳುವವರಿಗೆ ಕನೆಕ್ಟ್ ಆಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಕುಟುಕಿದರು.


ಪ್ರಚೋದನೆ ಮಾಡುವ ಕೆಲಸ ಆಗ್ತಿದೆ


ಇದೇ ವೇಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಮಹಾರಾಷ್ಟ್ರದ ವಾಹನ ಅಥವಾ ಕರ್ನಾ ಟಕದ ವಾಹನಗಳಿಗೆ ಮಸಿ ಬಳಿಯೋದಾಗಲೀ ಬೇರೆದಾಗಲೀ ಮಾಡೋದು ಪ್ರಚೋದನೆ ಮಾಡೋ ಕೆಲಸ ಆಗುತ್ತದೆ. ಆ ರಾಜ್ಯದಲ್ಲಿ ಅವಕಾಶ ಕೊಡಬಾರದು, ಈ ರಾಜ್ಯದಲ್ಲಿ ಇಲ್ಲಿ ಅದಕ್ಕೆ ಅವಕಾಶ ಕೊಡಬಾರದು. ನಾವು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎರಡೂ ರಾಜ್ಯಗಳ ಆಡಳಿತವನ್ನ ನಡೆಸುವರಿಗೆ ಇದೆ ಎಂದರು.


call me hindu huli says ct ravi mrq
ಸಿ ಟಿ ರವಿ


ಇದನ್ನೂ ಓದಿ:  Karnataka Politics: ರೌಡಿ ರಾಜಕೀಯ ಟೀಕೆಗೆ ಬಿಜೆಪಿ ತಿರುಗೇಟು; ಕಾಂಗ್ರೆಸ್​ಗೆ​ 16 ಪ್ರಶ್ನೆ ಕೇಳಿದ ಕೇಸರಿ ಪಡೆ


ನಾವು ಭಾರತೀಯರು


ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಇಬ್ಬರೂ ಮಾತಾಡಿದ್ದಾರೆ. ಗಡಿ ವಿವಾದ ಅದನ್ನ ಕಾನೂನಿನಾತ್ಮಕವಾಗಿ ನ್ಯಾಯಾಲಯದ ಮೂಲಕ ಬಗೆಹರಿಸಕೊಳ್ಳೋಣ. ವಿವಾದ ಇರೋದು ಸತ್ಯ, ಅದನ್ನ ಬಗೆಹರಿಸಿಕೊಳ್ಳೋಕೆ ಅವಕಾಶ ಇದೆ. ಇದನ್ನ‌ ಮೀರಿ ನಮ್ಮ ಸಂಬಂಧನೂ‌ ಇದೆ. ಭಾರತೀಯರು ಅನ್ನೋ ಭಾವನೆ ಇಟ್ಕೊಂಡು ನಾವು ಕೆಲಸ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ನೆಲ, ಜಲದ ರಕ್ಷಣೆಯಲ್ಲಿ ರಾಜಿ ಮಾಡಿಕೊಂಡಿಲ್ಲ


ಈಗ ಗಡಿಯನ್ನ ಮೀರಿ ಸಂಬಂಧಗಳು ಗಟ್ಟಿಯಾಗುತ್ತಿರುವ ಕಾಲದಲ್ಲಿ ಗಡಿಯ ಗೋಡೆಯನ್ನ ಎತ್ತಿ ಸಂಬಂಧ ಹಾಳು ಮಾಡುವ ಕೆಲಸವನ್ನ ಯಾರೂ ಕೂಡ ಮಾಡಬಾರದು. ಮತ್ತೆ ಕರ್ನಾಟಕದ ವಿಷಯ ಬಂದಾಗ ನೆಲ ಜಲದ ರಕ್ಷಣೆ ಬಗ್ಗೆ ಯಾವತ್ತೂ ಕೂಡಾ ರಾಜಿ ಮಾಡಿಕೊಂಡಿಲ್ಲ.


call me hindu huli says ct ravi mrq
ಸಿ ಟಿ ರವಿ


ಹಾಗೆಯೇ ಆ ವಿಷಯದಲ್ಲಿ ರಾಜಕೀಯ ಪಕ್ಷಗಳು ಒಂದಾಗಿ ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ. ಹಾಗೆಯೇ ಸೌಹಾರ್ದಯುತವಾಗಿ ಬಗೆಹರಿಸುವಂತಹ ದಾರಿಯನ್ನು ಹುಡುಕಿ, ಹೊರತು ಸಂಘರ್ಷದ ದಾರಿಯಲ್ಲ ಎಂದು ಹೇಳಿದರು.


ಇದನ್ನೂ ಓದಿ: Belagavi Dispute: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಬೆಳಗಾವಿ, ಮಹಾರಾಷ್ಟ್ರ ನಡುವೆ ಬಸ್​ ಸಂಚಾರ ಬಂದ್​​!


ದತ್ತ ಜಯಂತಿಗೆ ನಾಳೆ ವಿದ್ಯುಕ್ತ ತೆರೆ


ಭಕ್ತರು ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಬೇಕು ಅನ್ನೋದು ಪರಂಪರೆಯ ಅನ್ವಯ. ಭಿಕ್ಷಾಟನೆಯನ್ನು ಮಾಡಿ, ಶೋಭಾಯಾತ್ರೆಯೊಂದಿಗೆ ಸಂಪನ್ನ ಮೆರವಣಿಗೆ ಮಾಡಲಾಗುವುದು. ನಾಳೆ ಹೋಮ ಹವನಗಳೊದಿಗೆ  ಪೂಜೆ ಪ್ರಸಾದದ ನಂತರ ಧಾರ್ಮಿಕ ಸಭೆ ದತ್ತ ಜಯಂತಿ ವಿದ್ಯುಕ್ತವಾಗಿ ಈ ವರ್ಷದಲ್ಲಿ ತೆರೆ ಕಾಣುತ್ತದೆ ಎಂದು ಹೇಳಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು