• Home
  • »
  • News
  • »
  • state
  • »
  • Saalumarada Thimmakka: ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನಿಗೆ ಸಂಪುಟ ದರ್ಜೆ ಸ್ಥಾನಮಾನ

Saalumarada Thimmakka: ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನಿಗೆ ಸಂಪುಟ ದರ್ಜೆ ಸ್ಥಾನಮಾನ

ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕ

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ  ಪಡೆದಿರುವ ತಿಮ್ಮಕ್ಕನವರನ್ನು ಈಗಾಗಲೇ ಸರ್ಕಾರ ಪರಿಸರ ರಾಯಭಾರಿಯನ್ನಾಗಿ ನೇಮಿಸಿದೆ. ಈಗ ಪರಿಸರ ಪ್ರೇಮಿ ಡಾ. ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  • Share this:

ಸಾಲುಮರದ ತಿಮ್ಮಕ್ಕ (Saalumarada Thimmakka) ಪರಿಸರಕ್ಕಾಗಿ ತಮ್ಮ ಜೀವನ ಮೂಡಿಪಿಟ್ಟ ತಾಯಿ. ಸಾಲು ಸಾಲು ಮರಗಳನ್ನು (Trees ) ನೆಟ್ಟು ಪರಿಸರಕ್ಕೆ ನೆರವು ಮಾಡಿದ ವೃಕ್ಷ ಮಾತೆ. ಹುಲಿಕಲ್ ಮತ್ತು ಕುದೂರಿನ ನಡುವಿನ 45 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ್ದಾರೆ. ಅಲ್ಲದೇ 8 ಸಾವಿರಕ್ಕೂ (8,000) ಹೆಚ್ಚು ಬೇರೆ ಬೇರೆ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಪದ್ಮಶ್ರೀ (Padma Shri), ನಾಡೋಜ (Nadoja) ಸೇರಿ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ  ಪಡೆದಿರುವ ತಿಮ್ಮಕ್ಕನವರನ್ನು ಈಗಾಗಲೇ ಸರ್ಕಾರ ಪರಿಸರ ರಾಯಭಾರಿಯನ್ನಾಗಿ ನೇಮಿಸಿದೆ. ಈಗ ಪರಿಸರ ಪ್ರೇಮಿ ಡಾ. ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಸಾಲುಮರದ ತಿಮ್ಮಕ್ಕನಿಗೆ ಸಂಪುಟ ದರ್ಜೆ ಸ್ಥಾನಮಾನ
ಸಾಲುಮರದ ತಿಮ್ಮಕ್ಕನಿಗೆ ಸರ್ಕಾರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದಾಗಿ ಹೇಳಿತ್ತು. ಅಂತೆಯೇ ಸಿಬ್ಬಂದಿ ಮತ್ತ ಆಡಳಿತ ಸುಧಾರಣಾ ಇಲಾಖೆ (DPAR) ಶಿಷ್ಟಾಚಾರ ವಿಭಾಗ ಅಧಿಸೂಚನೆ ಹೊರಡಿಸಿದೆ. ಸಂಪುಟ ದರ್ಜೆ ಸಚಿವರಿಗೆ ಸಿಗೋ ಸವಲತ್ತುಗಳು ತಿಮ್ಮಕ್ಕ ಅವರಿಗೂ ಲಭಿಸಿವೆ. ವೇತನ ಮತ್ತು ಭತ್ಯೆ, ವಸತಿಗೃಹ, ಕಾರು ಸೌಲಭ್ಯಗಳು ದೊರೆಯಲಿವೆ.


ಸಿಎಂ ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದೇನು?
ಸಾಲುಮರದ ತಿಮ್ಮಕ್ಕನವರ 111 ಹುಟ್ಟುಹಬ್ಬದ ಕಾರ್ಯಕ್ರಮವೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡಿ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದಾಗಿ ಘೋಷಿಸಿದ್ರು. ಎಲ್ಲಾ ರೀತಿಯ ವಾಹನ ವ್ಯವಸ್ಥೆ ಹಾಗೂ ಯಾವುದೇ ರಾಜ್ಯಕ್ಕೆ ಹೋದರೂ ಅವರ ಖರ್ಚನ್ನು ಸರ್ಕಾರವೇ ಭರಿಸುತ್ತೆ ಎಂದು ಸಿಎಂ ಹೇಳಿದ್ರು. ತಿಮ್ಮಕ್ಕನವರ ಮಾಡಿಗಿಗಾಗಿ ವೆಬ್‍ಸೈಟ್ ಮಾಡುವುದಾಗಿ ಸಹ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು. ಅಂದು ಹೇಳಿದಂತೆಯೇ ಡಾ. ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಇದನ್ನೂ ಓದಿ: Saalumarada Thimmakka: ಸಾಲುಮರದ ತಿಮ್ಮಕ್ಕ 'ಪರಿಸರದ ರಾಯಭಾರಿ'; ವೃಕ್ಷಮಾತೆಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ


ಸಾಲುಮರದ ತಿಮ್ಮಕ್ಕನಿಗೆ ಪರಿಸರ ರಾಯಭಾರಿ ಗೌರವ
ಸಾಲು ಸಾಲು ಮರಗಳನ್ನು ನೆಡಲು ತಮ್ಮ ಜೀವನವನ್ನೇ ಮೀಸಲಿಟ್ಟ ವೃಕ್ಷಮಾತೆ ತಿಮ್ಮಕ್ಕನಿಗೆ ರಾಜ್ಯ ಸರ್ಕಾರ ಪರಿಸರ ರಾಯಭಾರಿಯನ್ನಾಗಿ ನೇಮಿಸಿದೆ. ರಾಜ್ಯದ ಉದ್ದಕ್ಕೂ ಪರಿಸರ ರಕ್ಷಣೆಯ ಪ್ರಚಾರ ಮಾಡಲು ಈ ಸ್ಥಾನಮಾನ ನೀಡಲಾಗಿದೆ. ರಾಜ್ಯಾದ್ಯಂತ ತೆರಳಿ ಪರಿಸರ ಕುರಿತು ಕಾಳಜಿ ಮೂಡಿಸುವುದು. ಪರಿಸರ ರಕ್ಷಣೆಯ ಅರಿವು ಮೂಡಿಸುವ ಜವಾಬ್ದಾರಿಯನ್ನು ಸರ್ಕಾರ ಕೊಟ್ಟಿದೆ. ಹೊರ ರಾಜ್ಯಕ್ಕೆ ತೆರಳಿದರೆ ಸರ್ಕಾರದಿಂದಲೇ ಖರ್ಚು ಭರಿಸುತ್ತಂತೆ.


ಪರಿಶ್ರಮಕ್ಕೆ ಸಂದ ಫಲ
ಸಾಲುಮರದ ತಿಮ್ಮಕ್ಕನ ಪರಿಸರ ಕಾಳಜಿಯನ್ನು ಮೆಚ್ಚಿ ಸರ್ಕಾರ ವೃಕ್ಷಮಾತೆಗೆ ಕೆಲವೊಂದ ಸರ್ಕಾರದ ಗೌರವಾರ್ಥವಾಗಿ ಬಿಡಿಎ ಸೈಟ್ ನೀಡಿದೆ. ಆ ಸೈಟಿಗೆ ತಂತಿ ಬೇಲಿ ಹಾಕಿಸಲು ಸಹ ಸರ್ಕಾರ ಸೂಚಿಸಿದೆ. ಅಲ್ಲದೇ ಸರ್ಕಾರವೇ ಅಲ್ಲಿ ತಿಮ್ಮಕ್ಕನವಿರಿಗೆ ಮನೆ ಕಟ್ಟಿಸಿ ಕೊಡುತ್ತದೆಯಂತೆ. ಅಲ್ಲದೇ ಸಾಲುಮರದ ತಿಮ್ಮಕ್ಕನಿಗೆ 10 ಎಕರೆ ಜಮೀನು ಕೊಡುವುದಾಗಿ ಸಿಎಂ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದಾರೆ. ವಾರ್ತಾ ಇಲಾಖೆಯಿಂದ ಸಾಲುಮರದ ತಿಮ್ಮಕ್ಕ ಅವರ ವೆಬ್ಸೀರಿಸ್ ಮಾಡುವುದಾಗಿಯೂ ತಿಳಿಸಿದ್ದಾರೆ.


ಇದನ್ನೂ ಓದಿ: Saalumarada Thimmakka: ಸಾಲು ಮರದ ತಿಮ್ಮಕ್ಕನಿಗೆ BDA ನಿವೇಶನ; ಕ್ರಯಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ


ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸೂರು ಗ್ರಾಮದ ನಿವಾಸಿ ತಿಮ್ಮಕ್ಕ ಅನಕ್ಷರಸ್ಥೆಯಾಗಿದ್ರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕೆಲಸ ಮಾಡಿದ್ದಾರೆ. ಪತಿಯ ಜೊತೆ ಸೇರಿ ರಸ್ತೆಯ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಮಕ್ಕಳಂತೆ ಮರಗಳನ್ನು ಬೆಳೆಸಿದ್ದಾರೆ. ದೇಶ ವಿದೇಶದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿರುವ ತಿಮ್ಮಕ್ಕ ಅವರಿಗೆ ಸರ್ಕಾರದಿಂದ ಗೌರವ ಸಿಕ್ಕಿರುವುದು ಅವರ ಅಭಿನಿಗಳ ಸಂತೋಷಕ್ಕೆ ಕಾರಣವಾಗಿದೆ.

Published by:Savitha Savitha
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು