ಮೈತ್ರಿ ಸರ್ಕಾರ ಪತನ ಹೇಳಿಕೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ

news18
Updated:August 28, 2018, 1:06 PM IST
ಮೈತ್ರಿ ಸರ್ಕಾರ ಪತನ ಹೇಳಿಕೆ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಹೆಚ್ಚಿದ ಒತ್ತಡ
ಸಿದ್ದರಾಮಯ್ಯ, ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ
news18
Updated: August 28, 2018, 1:06 PM IST
ಚಿದಾನಂದ ಪಟೇಲ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಆ.28): ಸಮನ್ವಯ ಸಮಿತಿ ಒಪ್ಪಿದರೆ ಮುಖ್ಯಮಂತ್ರಿ ಬದಲಾವಣೆ ಎಂಬ ಮಾತು ಸಚಿವರಿಂದಲೇ ಕೇಳಿಬರುತ್ತಿದ್ದು, ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ ಎಂಬ ಮಾತು ಕಾಂಗ್ರೆಸ್​, ಜೆಡಿಎಸ್​ ನಾಯಕರಿಂದ ಕೇಳಿ ಬರುತ್ತಿದೆ.

ಸರ್ಕಾರದ ಅಸ್ತಿತ್ವದ ಬಗ್ಗೆ ಶಾಸಕರಲ್ಲೇ ಪ್ರಶ್ನೆ ಎದುರಾಗಿದೆ. ಅಲ್ಲದೇ ಇದೇ ಸಮಯವನ್ನು ಬಳಸಿಕೊಂಡು ಬಿಜೆಪಿ ಕೆಲವು ಶಾಸಕರ ಸಂಪರ್ಕ ನಡೆಸಿದೆ ಹೀಗೆ ಮುಂದುವರೆದರೆ  ಮೈತ್ರಿ ಸರ್ಕಾರದ ಉಳಿವು ಕಷ್ಟ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆ ಆತಂಕಕ್ಕೆ ಒಳಗಾದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಇದಕ್ಕೆ ಪರಿಹಾರವೆಂದರೇ ಸಚಿವ ಸಂಪುಟ ವಿಸ್ತರಣೆ ಒಂದೇ ಮಾರ್ಗ ಎಂದಿದ್ದಾರೆ.

ಇದಕ್ಕಾಗಿ ರಾಜ್ಯ ಉಸ್ತುವಾರಿ ವೇಣುಗೋಪಾಲ್​ ಮೇಲೂ ಒತ್ತಡ ಏರಿದ್ದಾರೆ. ಆಷಾಢ ಬಳಿಕ ನಡೆಯಬೇಕಾಗಿದ್ದ ಸಂಪುಟ ವಿಸ್ತರಣೆ ಇನ್ನು ಕೂಡ ನಡೆದಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಲೇಬೇಕು. ಇಲ್ಲದಿದ್ದರೆ, ಏನು ಬೇಕಾದರೂ ಆಗಬಹುದು ಎಂದು ವೇಣುಗೋಪಾಲ್​ಗೆ ಎಚ್ಚರಿಕೆ ನೀಡಿದ್ದಾರೆ.

ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿ ಶಾಸಕರ ಅತೃಪ್ತಿ ಶಮನಕ್ಕೆ ಮುಂದಾಬೇಕು ಎಂದು ಒತ್ತಾಯಿಸಿದರು. ದೂರವಾಣಿ ಮೂಲಕ ಈ ಕುರಿತು ಮಾತನಾಡಿರುವ ಅವರು, ಶೀಘ್ರದಲ್ಲಿಯೇ ಈ ಬಗ್ಗೆ ರಾಹುಲ್​ ಗಾಂಧಿಯೊಂದಿಗೆ ಮಾತನಾಡಿ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ ಬಳಿಕ ಕೆಲವು ಕಾಂಗ್ರೆಸ್ ಶಾಸಕರಿಂದ‌ ಮೈತ್ರಿಭಂಗದ ಹೇಳಿಕೆ ನೀಡುತ್ತಿದ್ದರೆ. ಹೀಗೇ ಮುಂದುವರಿದರೆ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಸಾಧ್ಯತೆ ಇದೆ. ಈ ಕೂಡಲೇ  ವೇಣುಗೋಪಾಲ್​ ಹಾಗೂ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಡ್ಯಾನಿಷ್​ ಅಲಿ​ ಮನವಿ ಮಾಡಿದ್ದಾರೆ. ಅಲ್ಲದೇ ತಕ್ಷಣ ಕಾಂಗ್ರೆಸ್​ ಶಾಸಕರ ವಿವಾದಾತ್ಮಕ ಹೇಳಿಕೆಗೆ ಕಡಿವಾಣ ಹಾಕುವಂತೆ ಕೂಡ ಮನವಿ ಮಾಡಿದ್ದಾರೆ.

ಪರಮೇಶ್ವರ್​ ಟಾರ್ಗೆಟ್​: 
Loading...

ಸಂಪುಟ ವಿಸ್ತರಣೆ ಬಳಿಕ ಹಿರಿಯ ಸಚಿವರ ಇಲಾಖೆ ಬದಲಾವಣೆ ಬಗ್ಗೆ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆ ನಡೆದಿದ್ದು, ಪರಮೇಶ್ವರನನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.

ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್​ ಅವರ ಬಳಿಯಿರುವ ಬೆಂಗಳೂರು ನಗರ ಉಸ್ತುವಾರಿ ಖಾತೆಯನ್ನು ಬೆಂಗಳೂರಿನ ಶಾಸಕರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಪರಮೇಶ್ವರ್​ ಬದಲಿಗೆ ಕೆ ಜೆ ಜಾರ್ಜ್ಗೆ ಬೆಂಗಳೂರು ಉಸ್ತುವಾರಿ ನೀಡಬೇಕು.  ಡಾ ಜಿ ಪರಮೇಶ್ವರ್ ಗೆ ಬೆಂಗಳೂರು ನಗರ ಉಸ್ತುವಾರಿ ಬದಲು ಕಂದಾಯ ಇಲಾಖೆ ನೀಡಬೇಕು.

ಜಾರ್ಜ್ ಬಳಿ ಇರೋ ಬೃಹತ್ ಕೈಗಾರಿಕಾ ಇಲಾಖೆ ದೇಶಪಾಂಡೆಗೆ ನೀಡಬೇಕು. ರಾಮಲಿಂಗಾ ರೆಡ್ಡಿ ಸಂಪುಟಕ್ಕೆ ಸೇರ್ಪಡೆಯಾದರೆ ಗೃಹ ಇಲಾಖೆ ನೀಡಬೇಕು ಎಂದು ಇಲಾಖಾ ಬದಲಾವಣೆಯ ಪೂರ್ವಪರದ ಬಗ್ಗೆ ಕಾಂಗ್ರೆಸ್ ನಲ್ಲಿಚರ್ಚೆ ನಡೆದಿದೆ

 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ