ತಿಂಗಳ 4ನೇ ಶನಿವಾರ ರಜೆ, ಸಿ,ಡಿ, ಗ್ರೂಪ್​ ನೌಕರರ ವರ್ಗಾವಣೆಯಲ್ಲಿ ಕೌನ್ಸಿಲಿಂಗ್​ ಸೇರಿ ಸಂಪುಟ ಸಭೆಯಲ್ಲಿ ಹಲವು ತೀರ್ಮಾನ

ಕೋಲಾರ, ಚಿಕ್ಕಬಳ್ಳಾಪುರ ಕೆರೆ ತುಂಬಿಸುವ ಯೋಜನೆಗೆ 450 ಕೋಟಿ ಅನುದಾನ,  ಮೈಸೂರು ಮೆಡಿಕಲ್ ಕಾಲೇಜು ಸೌಲಭ್ಯಕ್ಕೆ ಅನುದಾನ, ಲೈಬ್ರರಿ, ಹಾಸ್ಟೆಲ್ ನಿರ್ಮಾಣಕ್ಕೆ 120 ಕೋಟಿ ಟೆಂಡರ್ ಗೆ ಅನುಮತಿ, ಕೊಪ್ಪಳ ಆಸ್ಪತ್ರೆ 350ಹಾಸಿಗೆಯಿಂದ 450 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಮ್ಮತಿ ಸೂಚಿಸಿದೆ.

HR Ramesh | news18
Updated:June 6, 2019, 3:36 PM IST
ತಿಂಗಳ 4ನೇ ಶನಿವಾರ ರಜೆ, ಸಿ,ಡಿ, ಗ್ರೂಪ್​ ನೌಕರರ ವರ್ಗಾವಣೆಯಲ್ಲಿ ಕೌನ್ಸಿಲಿಂಗ್​ ಸೇರಿ ಸಂಪುಟ ಸಭೆಯಲ್ಲಿ ಹಲವು ತೀರ್ಮಾನ
ಕೃಷ್ಣಭೈರೇಗೌಡ
HR Ramesh | news18
Updated: June 6, 2019, 3:36 PM IST
ಬೆಂಗಳೂರು: ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆಯ ವ್ಯವಸ್ಥೆ. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬರುವ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಾಗುವುದು. ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೆ ಸಿ ಗ್ರೂಪ್ ಗೆ 5 ವರ್ಷ ಡಿ ಗ್ರೂಪ್ ಗೆ 7 ವರ್ಷ ನಿಗದಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಇಂದು ನಡೆದ ಸಚಿವ ಸಂಪುಟ ಸಭೆಯ ವಿವರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕೃಷ್ಣ ಭೈರೇಗೌಡ, ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬಲು ಆದ್ಯತೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ಸಚಿವಾಲಯದ ವರ್ಗಾವಣೆ ಬಗ್ಗೆ ಚರ್ಚೆಯಾಗಿಲ್ಲ. ಇದಕ್ಕೇ ಪ್ರತ್ಯೇಕ ನಿಯಮಾವಳಿಗಳಿವೆ. ಇಲ್ಲೇ ಭರ್ತಿಯಾಗುತ್ತೆ, ಇಲ್ಲೇ ವರ್ಗಾವಣೆಯಾಗಲಿದೆ. ಪ್ರತ್ಯೇಕ ಇರುವುದರಿಂದ ಇದರ ಚರ್ಚೆ ನಡೆದಿಲ್ಲ. ಚರ್ಚೆಯಾಗುವುದಕ್ಕೆ ಮುಕ್ತ ಅವಕಾಶವಿದೆ ಎಂದು ಹೇಳಿದರು.

ಕೋಲಾರ, ಚಿಕ್ಕಬಳ್ಳಾಪುರ ಕೆರೆ ತುಂಬಿಸುವ ಯೋಜನೆಗೆ 450 ಕೋಟಿ ಅನುದಾನ,  ಮೈಸೂರು ಮೆಡಿಕಲ್ ಕಾಲೇಜು ಸೌಲಭ್ಯಕ್ಕೆ ಅನುದಾನ, ಲೈಬ್ರರಿ, ಹಾಸ್ಟೆಲ್ ನಿರ್ಮಾಣಕ್ಕೆ 120 ಕೋಟಿ ಟೆಂಡರ್ ಗೆ ಅನುಮತಿ, ಕೊಪ್ಪಳ ಆಸ್ಪತ್ರೆ 350ಹಾಸಿಗೆಯಿಂದ 450 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಮ್ಮತಿ ಸೂಚಿಸಿದೆ.

ಇದನ್ನು ಓದಿ: ಅನ್ನಭಾಗ್ಯ ಅಕ್ಕಿ ಪ್ರಮಾಣ ಏರಿಕೆ ಬದಲು ಕಡಿತಕ್ಕೆ ಮುಂದಾದ ಸಿಎಂ; ಸಚಿವ ಜಮೀರ್​ ಆಕ್ಷೇಪ

ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ, ನಿರ್ವಹಣೆ ಮಾಡಲು ಗ್ರಾ.ಪಂ.ಗೆ ಜವಾಬ್ದಾರಿ ನೀಡಲಾಗುತ್ತದೆ. ಆದರೆ ಈ ಹಿಂದಿನ ನೀರು ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಹಲವು ಆರೋಪಗಳು ಕೇಳಿಬಂದಿವೆ. ಹೀಗಾಗಿ ಮಾರ್ಗಸೂಚಿ ಸಿದ್ಧಮಾಡಿದ್ದೇವೆ. ನಿರ್ವಹಣೆಗೆ ಟೆಂಡರ್ ಮೂಲಕ ಹೊರಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ. ಘಟಕದ ರಿಪೇರಿಗೆ ಸರಾಸರಿ 3 ಸಾವಿರ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಐದು ವರ್ಷಕ್ಕೆ 233 ಕೋಟಿ ಅನುದಾನ ಇಡಲಾಗಿದೆ. ಎಂದು ಕೃಷ್ಣಭೈರೇಗೌಡ ತಿಳಿಸಿದರು.
Loading...

ತಿಂಗಳ ನಾಲ್ಕನೇ ಶನಿವಾರ ರಜೆ 

17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. 4 ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ‌ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ ಎಂಬ ಚರ್ಚೆ ನಡೆಯಿತು. ಈಗ ಕ್ಯಾಸ್ಯುವಲ್ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆಗೆ ನಿರ್ಧಾರ ಮಾಡಲಾಗಿದೆ. ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೂ ಇದು ಅನ್ವಯ ಆಗಲಿದೆ. ಆದರೆ, ಇದು ಮುಂದಿನ ವರ್ಷಕ್ಕಾ ಅಥವಾ ತಕ್ಷಣವಾ ಅನ್ನೋದು ತೀರ್ಮಾನ ಆಗುತ್ತೆ ಎಂದು ಕೃಷ್ಣಭೈರೇಗೌಡ ಹೇಳಿದರು.

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...