7 ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರವು ಡಿಎ ಮತ್ತು ಡಿಆರ್ ಕುರಿತು ಮಹತ್ವದ ನಿರ್ಧಾರವನ್ನು ಬುಧವಾರ ಪ್ರಕಟಿಸುವ ಸಾಧ್ಯತೆಯಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಜುಲೈ ತಿಂಗಳಿಗೆ ಅನ್ವಯವಾಗುವಂತೆ ಶೇ 3 ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಬಹುದು ಎಂದು ಅಧಿಕೃತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.
ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 17 ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದಾರೆ. ಪ್ರಸ್ತುತ ಪರಿಷ್ಕೃತ ದರವು ಜುಲೈ, 2019 ರಿಂದ ಜಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಕೋವಿಡ್ನಿಂದ ಉಂಟಾದ ವ್ಯತ್ಯಯಗಳಿಂದ ಕೇಂದ್ರವು ಕಳೆದ ವರ್ಷ ತುಟ್ಟಿ ಭತ್ಯೆ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು. 2020 ರ ಜನವರಿ 1 ರಿಂದ 2021 ರ ಜೂನ್ 30 ರವರೆಗೆ ಯಾವುದೇ ಬಾಕಿ ಪಾವತಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿತ್ತು. ಆದಾಗ್ಯೂ, ಜುಲೈ 1, 2021 ರಂದು ಪರಿಷ್ಕರಣೆ ಮಾಡುವುದರಿಂದ ಡಿ ಹಿಂದಿನ ಹೆಚ್ಚಳಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 2020 ರ ಜನವರಿಯಲ್ಲಿ ಶೇ 4, ಜೂನ್ 2020 ರಲ್ಲಿ ಶೇ 3 ಮತ್ತು ಈ ವರ್ಷದ ಜನವರಿಯಲ್ಲಿ ಶೇ 4 ರಷ್ಟು ಹೆಚ್ಚಿಸಲಾಗಿದೆ. ಜುಲೈನಲ್ಲಿ ಶೇಕಡಾ 3 ರಷ್ಟು ಹೆಚ್ಚಳ ಮಾಡಲಾಗಿದೆ. ಎಲ್ಲಾ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರ ಕೊಡಬೇಕಾಗಿರುವ ತುಟ್ಟಿ ಭತ್ಯೆಯೇ ಸುಮಾರು 31 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪಾವತಿಸುವ ಮೊತ್ತವೇ ತುಟ್ಟಿ ಭತ್ಯೆ (ಡಿಎ). ಸ್ಥಳಕ್ಕೆ ಅನುಗುಣವಾಗಿ ಹಣದುಬ್ಬರವು ಬದಲಾಗುತ್ತಿರುತ್ತದೆ. ಆದ್ದರಿಂದ, ವರ್ಷದ ಆ ಸಮಯದಲ್ಲಿ ನೌಕರನ ಸ್ಥಳ ಮತ್ತು ಹಣದುಬ್ಬರ ದರವನ್ನು ಆಧರಿಸಿತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ.
1996 ರ ಹಣಕಾಸು ವರ್ಷದಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರವನ್ನು ಸರಿದೂಗಿಸುವ ಸಲುವಾಗಿ ತುಟ್ಟಿ ಭತ್ಯೆಯನ್ನು ಸೇರಿಸಲಾಯಿತು. ಇದನ್ನು ಪ್ರತಿವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.
ಕಳೆದ ತಿಂಗಳು, ಕೇಂದ್ರದಿಂದ ಸರ್ಕಾರಿ ನೌಕರರಿಗೆ ಡಿಎ ನೀಡಲಾಗುವುದು. ಈ ಅನುಕೂಲ ಜುಲೈನಿಂದ ಪ್ರಾರಂಭವಾಗಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ, ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹಣಕಾಸು ಸಚಿವಾಲಯ ನಂತರ ಸ್ಪಷ್ಟಪಡಿಸಿತ್ತು. "ಜುಲೈ 2021 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ನೀಡಲಾಗುತ್ತಿದೆ ಎನ್ನುವ ಆದೇಶ ಪ್ರತಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ನಂತರ ಈ ಆದೇಶ ನಕಲಿ ಮತ್ತು ಅಂತಹ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ" ಎಂದು ಹಣಕಾಸು ಸಚಿವಾಲಯ ಟ್ವಿಟರ್‌ನಲ್ಲಿ ಒಂದು ತಿಂಗಳ ಹಿಂದೆ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಮೋದಿ ಹುಂಡಿ: ಇದು ಬಿಹಾರ ಶಿಲ್ಪಿಯ ಕೈಚಳಕ
ಕೇಂದ್ರ ಸರ್ಕಾರವು ಸೆಪ್ಟೆಂಬರ್ ಹೊತ್ತಿಗೆ 7ನೇ ವೇತನ ಆಯೋಗದ ಡಿಎ ಮತ್ತು ಡಿಆರ್ ಸೌಲಭ್ಯಗಳನ್ನು ಜಾರಿಗೆ ತರುವುದಕ್ಕೆ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ