HOME » NEWS » State » CABINET EXPANSION THIS TIME NO MINISTRY POST FOR RAICHUR DISTRICT MLAS LG

Cabinet Expansion: ಸದ್ಯಕ್ಕೆ ರಾಯಚೂರಿಗಿಲ್ಲ ಸಚಿವ ಸ್ಥಾನ; ಚುನಾವಣೆ ಬಳಿಕ ಪ್ರತಾಪಗೌಡರಿಗೆ ಒಲಿಯುತ್ತಾ ಮಂತ್ರಿಭಾಗ್ಯ?

ಇನ್ನೂ ಶಿವರಾಜ ಪಾಟೀಲ ನಾನು ಸಚಿವ ಸ್ಥಾನದ ಆಕಾಂಕ್ಷಿ ನಿಜ. ಆದರೆ ಸರಕಾರ ಬರಲು ಕಾರಣರಾದ 17 ಜನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲಿ ಪ್ರತಾಪಗೌಡರೂ ಇದ್ದಾರೆ. ಅವರ ತ್ಯಾಗದಿಂದ ನಮ್ಮ ಸರಕಾರ ಬಂದಿದೆ, ಈಗ ಬಿಜೆಪಿಯ ಶಾಸಕರು ತ್ಯಾಗ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

news18-kannada
Updated:January 13, 2021, 3:08 PM IST
Cabinet Expansion: ಸದ್ಯಕ್ಕೆ ರಾಯಚೂರಿಗಿಲ್ಲ ಸಚಿವ ಸ್ಥಾನ; ಚುನಾವಣೆ ಬಳಿಕ ಪ್ರತಾಪಗೌಡರಿಗೆ ಒಲಿಯುತ್ತಾ ಮಂತ್ರಿಭಾಗ್ಯ?
ಪ್ರತಾಪಗೌಡ
  • Share this:
ರಾಯಚೂರು(ಜ.13): ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೂರನೆಯ ಬಾರಿ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಈ ಬಾರಿಯೂ ರಾಯಚೂರು ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಪ್ರಾದೇಶಿಕವಾಗಿ ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದೆ. ಹೀಗಾಗಿ ಸಹಜವಾಗಿಯೇ ಈ ಭಾಗದ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ನಿಂದ ಆಯ್ಕೆಯಾಗಿ ಪಕ್ಷಾಂತರ ಮಾಡಿ ಬಂದಿದ್ದ ದೇವದುರ್ಗಾ ಶಾಸಕ ಕೆ ಶಿವನಗೌಡ ನಾಯಕರನ್ನು ಅಂದು ಸಚಿವರನ್ನಾಗಿ ಮಾಡಿದ್ದರು. ಆ ನಂತರ ಬಂದ ಸಿದ್ದರಾಮಯ್ಯ ಸರಕಾರದಲ್ಲಿಯೂ ಈ ಜಿಲ್ಲೆಯಿಂದ ಯಾರನ್ನು ಸಚಿವರನ್ನಾಗಿ ಮಾಡದೆ ಕಾಂಗ್ರೆಸ್ ಸಹ ನಿರ್ಲಕ್ಷಿಸಿತ್ತು. ಕುಮಾರಸ್ವಾಮಿಯವರು ಮೈತ್ರಿ ಸರಕಾರದಲ್ಲಿ ವೆಂಕಟರಾವ್ ನಾಡಗೌಡರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಕುಮಾರಸ್ವಾಮಿ ಸರಕಾರ ಪತನವಾದ ನಂತರ ರಾಯಚೂರು ಜಿಲ್ಲೆಗೆ ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡಿಲ್ಲ.

ಸಚಿವರಾಗಲು ದೇವದುರ್ಗಾದಿಂದ ನಾಲ್ಕು ಬಾರಿ ಆಯ್ಕೆಯಾಗಿರುವ ಶಿವನಗೌಡ ನಾಯಕ್, ರಾಯಚೂರು ನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಡಾ ಶಿವರಾಜ ಪಾಟೀಲರು ಸಚಿವಾಕಾಂಕ್ಷಿಯಾಗಿದ್ದಾರೆ. ಆದರೆ ಯಡಿಯೂರಪ್ಪ ಸರಕಾರ ಬರಲು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಮಸ್ಕಿ ಪ್ರತಾಪಗೌಡರಿಗಾಗಿ ಜಿಲ್ಲೆಯಲ್ಲಿ ನೀಡಬೇಕಾದ ಸಚಿವ ಸ್ಥಾನ ಉಳಿಸಿಕೊಳ್ಳಲಾಗಿದೆ.

ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪಗೌಡ ಗೆದ್ದ ನಂತರವಷ್ಟೆ ಸಚಿವರಾಗಲು ಸಾಧ್ಯ. ಆದರೆ ಇಲ್ಲಿಯವರೆಗೂ ಮಸ್ಕಿ ಉಪಚುನಾವಣೆ ಆಗಿಲ್ಲ, ಈ ತಿಂಗಳೊಳಗಾಗಿ ಉಪಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಚುನಾವಣೆಯಲ್ಲಿ ಗೆದ್ದ ನಂತರ ನನಗಾಗಿ ಸಚಿವ ಸ್ಥಾನ ನೀಡಲು ಒಂದು ಸ್ಥಾನವನ್ನು ಖಾಲಿ ಇಟ್ಟಿದ್ದಾರೆ. ಚುನಾವಣೆಯಲ್ಲಿ ಗೆದ್ದು ನಾನು ಸಚಿವನಾಗುತ್ತೇನೆ ಎಂದು ಪ್ರತಾಪಗೌಡ ಹೇಳಿದ್ದಾರೆ.

Cabinet Expansion: ವಿಸ್ತರಣೆಯಾಯ್ತು ಸಚಿವ ಸಂಪುಟ; ಕೊಪ್ಪಳ ಜಿಲ್ಲೆಗೆ ಈ ಸಲವೂ ತಪ್ಪಲಿಲ್ಲ ಸಂಕಟ..!

ಈ ಮಧ್ಯೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ದೇವದುರ್ಗಾ ಶಾಸಕ ಶಿವನಗೌಡ ನಾಯಕ, ಈಗ ನಮಗೆ ಸಚಿವ ಸ್ಥಾನ ನೀಡಿಲ್ಲ, ಪರವಾಗಿಲ್ಲ. ಆದರೆ ಸರಕಾರದಲ್ಲಿ 20 ತಿಂಗಳ ಅವಧಿಗೆ ಹಳೆಯ ಸಚಿವರನ್ನು ಕೈ ಬಿಡಬೇಕು. ಹಿರಿತನ, ಪ್ರದೇಶವಾರು ಆಯಾಮಗಳನ್ನು ಪರಿಗಣಿಸಿ ಹೊಸಬರಿಗೆ ಸಚಿವ ಸ್ಥಾನ ನೀಡಬೇಕು. ಹಿಂದೆ ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ ಸರಕಾರದಲ್ಲಿ ಸಚಿವರಾದವರನ್ನು ಮತ್ತೆ ಸಚಿವರನ್ನಾಗಿ ಮಾಡುತ್ತೀರಿ. ಇದರಿಂದ ಹೊಸಬರಿಗೆ ಅವಕಾಶ ಸಿಗುತ್ತಿಲ್ಲ, ಹೊಸಬರಲ್ಲಿ ನಾಯಕತ್ವ ಬೆಳೆಯುವುದಿಲ್ಲ. ಈ ಕುರಿತು ಹೈಕಮಾಂಡ ನಿರ್ಧಾರ ತೆಗೆದುಕೊಳ್ಳಬೇಕು, ಹಲವು ಬಾರಿ ಸಚಿವರಾಗಿ ಉಪಮುಖ್ಯಮಂತ್ರಿ ಗಳಾಗಿದ್ದವರನ್ನು ಕೈಬಿಡಬೇಕು ಎಂದು ಹೆಸರು ಹೇಳಿದ ಉಪಮುಖ್ಯಮಂತ್ರಿ ಗಳಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳರ ಕೆಳಗಿಳಿಸುವಂತೆ ಸಲಹೆ ನೀಡಿದರು.

ಇನ್ನೂ ಶಿವರಾಜ ಪಾಟೀಲ ನಾನು ಸಚಿವ ಸ್ಥಾನದ ಆಕಾಂಕ್ಷಿ ನಿಜ. ಆದರೆ ಸರಕಾರ ಬರಲು ಕಾರಣರಾದ 17 ಜನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಅದರಲ್ಲಿ ಪ್ರತಾಪಗೌಡರೂ ಇದ್ದಾರೆ. ಅವರ ತ್ಯಾಗದಿಂದ ನಮ್ಮ ಸರಕಾರ ಬಂದಿದೆ, ಈಗ ಬಿಜೆಪಿಯ ಶಾಸಕರು ತ್ಯಾಗ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಒಟ್ಟಾರೆಯಾಗಿ 2008ರಿಂದ ಇಲ್ಲಿಯವರೆಗೂ ಒಂದೂವರೆ ವರ್ಷ ಹೊರತುಪಡಿಸಿದರೆ ಜಿಲ್ಲೆಯವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅತಿಥಿಗಳಾಗಿ ಬಂದು ಹೋಗುತ್ತಿರುವುದು ರಾಯಚೂರು ಜಿಲ್ಲೆಯ ಹಿಂದುಳಿದಿರುವಿಕೆ ಕಾರಣ ಎನ್ನಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಆಗಿ ಪ್ರತಾಪಗೌಡ ಗೆದ್ದರೆ ಮಾತ್ರ ಜಿಲ್ಲೆಯಲ್ಲಿ ಸಚಿವರಾಗುವಂಥ ಸ್ಥಿತಿ ಇದೆ. ಆದರೂ ಜಿಲ್ಲೆಯ ಇಬ್ಬರೂ ಶಾಸಕರು ಸಚಿವರಾಗುವ ಅರ್ಹತೆ ಇದ್ದರೂ ಬೈ ಎಲೆಕ್ಷನ್ ಅವರಿಗೆ ಅಡ್ಡಿಯಾಗಿದೆ.
Published by: Latha CG
First published: January 13, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading