ಫೆಬ್ರವರಿ 6ಕ್ಕೆ ಸಚಿವ ಸಂಪುಟ ವಿಸ್ತರಣೆ; ಸೋತವರಿಗಿಲ್ಲ ಮಂತ್ರಿಗಿರಿ; ಸಿಎಂ ಯಡಿಯೂರಪ್ಪ ಸ್ಪಷ್ಟನೆ

"17 ಜನರ ರಾಜೀನಾಮೆಯಿಂದ ನಮಗೆ ಅಧಿಕಾರ ಸಿಕ್ಕಿದೆ. ನಾವು ಹಿಂದೆ ಅವರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸುತ್ತೇವೆ. ಯಾವ ಶಾಸಕರಿಗೂ ಅನ್ಯಾಯ ಮಾಡುವುದಿಲ್ಲ. ಆರ್​. ಶಂಕರ್ ಅವರನ್ನು​ ಮುಂದಿನ ದಿನಗಳಲ್ಲಿ ಎಂಎಲ್​ಸಿ ಮಾಡಿ ಮಂತ್ರಿ ಮಾಡುತ್ತೇವೆ," ಎಂದರು.

ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

 • Share this:
  ಬೆಂಗಳೂರು(ಫೆ.02): ಉಪಚುನಾವಣೆ ಫಲಿತಾಂಶ ಬಂದ ದಿನದಿಂದಲೂ ಸಂಪುಟ ವಿಸ್ತರಣೆ ವಿಚಾರ ಮುನ್ನೆಲೆಯಲ್ಲಿದೆ. ಸದ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿತ್ತು. ಆದರೆ, ಸೋತವರಿಗೆ ಸಚಿವ ಸ್ಥಾನ ಸಿಗದು ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 

  ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಫೆಬ್ರವರಿ 6ರಂದು ಬೆಳಗ್ಗೆ 10.30ಕ್ಕೆ  ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಈಗ ಇರುವ ಪ್ರಕಾರ 10+3 ಆಗಲಿದೆ. ಪುನಾರಚನೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಈ ಬಗ್ಗೆ ನಾಳೆ ತಿಳಿಸುತ್ತೇನೆ. ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಹೇಳಿದ್ದೆ. ಅದೇ ರೀತಿಯಾಗಿ ನೂತನ ಶಾಸಕರು ಮಂತ್ರಿಗಳಾಗುತ್ತಾರೆ," ಎಂದರು.

  ಸೋತವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ, "ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಆಗಲ್ಲ. ಸೋತವರನ್ನು ಸಚಿವರನ್ನಾಗಿ ಮಾಡಲು ಬರಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ನೋಡೋಣ,"ಎಂದು ಹೇಳಿದರು.

  ದೆಹಲಿ ವಿಧಾನಸಭೆ ಚುನಾವಣೆ: 133 ಅಭ್ಯರ್ಥಿಗಳ ಮೇಲಿವೆ ಅಪರಾಧ ಪ್ರಕರಣಗಳು

  "17 ಜನರ ರಾಜೀನಾಮೆಯಿಂದ ನಮಗೆ ಅಧಿಕಾರ ಸಿಕ್ಕಿದೆ. ನಾವು ಹಿಂದೆ ಅವರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸುತ್ತೇವೆ. ಯಾವ ಶಾಸಕರಿಗೂ ಅನ್ಯಾಯ ಮಾಡುವುದಿಲ್ಲ. ಆರ್​. ಶಂಕರ್ ಅವರನ್ನು​ ಮುಂದಿನ ದಿನಗಳಲ್ಲಿ ಎಂಎಲ್​ಸಿ ಮಾಡಿ ಮಂತ್ರಿ ಮಾಡುತ್ತೇವೆ," ಎಂದರು.

  "ಒಟ್ಟು 13 ಶಾಸಕರು ಸಚಿವ ಸಂಪುಟ ಸೇರ್ಪಡೆಯಾಗಲಿದ್ದಾರೆ. ನೂತನವಾಗಿ ಗೆದ್ದ 10 ಶಾಸಕರು ಹಾಗೂ ಮೂವರು ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದರು. ಆದರೆ ಯಾರು ಯಾರು ಸೇರ್ಪಡೆ ಆಗ್ತಾರೆ, ಯಾರು ಸೇರಲ್ಲ ಎಂಬ ಗುಟ್ಟು ಬಿಟ್ಟು ಕೊಡಲಿಲ್ಲ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಬರೀ ಕಾದು ನೋಡಿ,"ಎಂದಷ್ಟೇ ಹೇಳಿದರು.
  First published: