ಬೆಂಗಳೂರು (ಫೆ.5): ಬಹುನೀರಿಕ್ಷಿತ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಾಳೆ ನಡೆಯಲಿದ್ದು, ಉಪಚುನಾವಣೆಯಲ್ಲಿ ಗೆದ್ದ ನೂತನ ಬಿಜೆಪಿ ಶಾಸಕರಲ್ಲಿ ಸಂಭ್ರಮ ಮೂಡಿದೆ. ಮಹೇಶ್ ಕುಮಟಳ್ಳಿ ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧವಾಗಿದ್ದು, ಇದಕ್ಕೂ ಮೊದಲೇ ತಮಗಾಗಿ ಸಿದ್ಧವಾಗಿರುವ ಕಾರುಗಳ ವೀಕ್ಷಣೆ ನಡೆಸಿದರು.
ರಾಜಭವನದ ಗಾಜಿನ ಮನೆಯಲ್ಲಿ 10.30ಕ್ಕೆ ಆರಿದ್ರಾ ನಕ್ಷತ್ರದ ಸಮಯದಲ್ಲಿ ಪದಗ್ರಹಣ ಮಾಡಲಿರುವ ಸಚಿವರಿಗಾಗಿ ಈಗಾಗಲೇ ಸರ್ಕಾರದ ವತಿಯಿಂದ ಕಾರು ಸೇರಿದಂತೆ ವಿವಿಧ ಸವಲತ್ತುಗಳು ಸಿದ್ಧವಾಗುತ್ತಿದೆ.
ನೂತನ ಸಚಿವರಿಗಾಗಿ ಕುಮಾರ ಕೃಪ ಗೆಸ್ಟ್ಹೌಸ್ನಲ್ಲಿ 20 ಇನ್ನೋವಾ ಕಾರುಗಳು ಸಿದ್ಧವಾಗಿದ್ದು, ಪ್ರಮಾಣ ವಚನಕ್ಕೂ ಮುನ್ನ ಸಚಿವಾಕಾಂಕ್ಷಿಗಳು ತಮಗಾಗಿ ಮೀಸಲಿರಿಸಿರುವ ಕಾರುಗಳ ವೀಕ್ಷಣೆ ನಡೆಸಿದರು.
ಫ್ಯಾನ್ಸಿ ನಂಬರ್ಗಾಗಿ ನಾರಾಯಣ ಗೌಡ ಹುಡುಕಾಟ
ಇನ್ನು ತಮಗೆ ಯಾವ ಕಾರು ಬೇಕು ಎಂಬ ಬಗ್ಗೆ ನಾರಾಯಣ ಗೌಡ, ರಮೇಶ್ ಜಾರಕಿಹೊಳಿ, ಭೈರತಿ ಬಸವರಾಜ್, ಕೆ ಸುಧಾಕರ್, ಬಿ.ಸಿ ಪಾಟೀಲ್ , ಆನಂದ್ ಸಿಂಗ್, ಎಸ್ಟಿ ಸೋಮಶೇಳರ್, ಶಿವರಾಮ್ ಹೆಬ್ಬಾರ್ ಪರಿಶೀಲನೆ ನಡೆಸಿ, ಕಾಯ್ದಿರಿಸಿದ್ದಾರೆ.
ಇನ್ನು ಕೆಆರ್ ಪೇಟೆ ಶಾಸಕ ನಾರಾಯಣ ಗೌಡ ಸಚಿವರಾಗುವ ಮೊದಲೇ ಇಂದು ಕುಮಾರಕೃಪಗೆ ಭೇಟಿ ನೀಡಿ, ಕಾರುಗಳ ಪರಿಶೀಲನೆ ನಡೆಸಿದರು. ಯಾವ ಕಾರು ಚೆನ್ನಾಗಿದೆ ಎಂದು ನೋಡಿಕೊಂಡ ಹೋದ ಅವರು, ಇದೇ ವೇಳೆ ಫ್ಯಾನ್ಸಿ ನಂಬರ್ಗೆ ಹುಡುಕಾಟ ನಡೆಸಿದರು. ಈ ವೇಳೆ ಜ್ಯೋತಿಷಿಗಳ ಸಲಹೆಯಂತೆ ಕೆಎ 41 ಜಿ 2727 ಫ್ಯಾನ್ಸಿ ನಂಬರ್ನ 2018ರ ಮೊಡೆಲ್ನ ಇನ್ನೋವಾ ಕ್ರಿಸ್ಟಾ ಕಾರನ್ನು ಬುಕ್ ಮಾಡಿದರು.
ಇದನ್ನು ಓದಿ: ನಾಳೆ ಬೆಳಗ್ಗೆ 10.30ಕ್ಕೆ ಪಂಚಾಂಗದ ಪ್ರಕಾರ ಸಂಪುಟ ವಿಸ್ತರಣೆ; ಎಷ್ಟು ಮಂದಿಗೆ ಸಚಿವ ಸ್ಥಾನ ಎಂಬುದು ಸಿಎಂಗೂ ಗೊತ್ತಿಲ್ಲ
ಇನ್ನು ವಿಶೇಷ ಎಂದರೇ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಪಡೆಯದಿದ್ದರೂ ಕೂಡ ಮಾಜಿ ಸಚಿವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಕೂಡ ಈ ಸೌಕರ್ಯ ಪಡೆದಿದ್ದಾರೆ. ಇದನ್ನು ಗಮನಿಸಿದರೆ ಅವರು ಕೂಡ ಮಂತ್ರಿ ಸ್ಥಾನ ಪಡೆಯಲಿದ್ದಾರಾ ಎಂಬ ಅನುಮಾನ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ