ಮಂತ್ರಿಗಳನ್ನು ಅನರ್ಹರೆನ್ನುವ ಸಿದ್ದರಾಮಯ್ಯ ಗೆದ್ದಿದ್ದು ಹೇಗೆಂದು ಗೊತ್ತಿದೆ; ಎಚ್. ವಿಶ್ವನಾಥ್ ವಾಗ್ದಾಳಿ

ಪಕ್ಷದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಸಚಿವರಾದರೂ ಅವರು ಅನರ್ಹರೇ. ಕಾನೂನಿನ ಪ್ರಕಾರ ಅವರು ಎಂದಿಗೂ ಅನರ್ಹರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು.

ಹೆಚ್ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ

ಹೆಚ್ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ

  • Share this:
ಮೈಸೂರು (ಫೆ. 7): ಪಕ್ಷದ್ರೋಹಿಗಳು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು ನನಗೆ ಸಂತಸ ತಂದಿಲ್ಲ. ನನ್ನ ಪಾಲಿಗೆ ಅವರು ಯಾವತ್ತಿದ್ದರೂ ಅನರ್ಹರೇ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯನವರ ಹೇಳಿಕೆಗೆ ಮಾಜಿ ಶಾಸಕ ಎಚ್​. ವಿಶ್ವನಾಥ್ ತಿರುಗೇಟು ನೀಡಿದ್ದಾರೆ. ಸುಪ್ರೀಂಕೋರ್ಟ್​ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡಬೇಕು. ಅವರು ಯಾವ ರೀತಿ ಗೆದ್ದಿದ್ದಾರೆ ಎಂಬುದು ನನಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಚ್. ವಿಶ್ವನಾಥ್​ ಈ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು. ಸೋತರೂ ತಮಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದ ಅವರಿಗೆ ನಿರಾಸೆಯಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಚುನಾವಣೆಯಲ್ಲಿ ಗೆದ್ದ 10 ವಲಸಿಗ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಪಕ್ಷದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಸಚಿವರಾದರೂ ಅವರು ಅನರ್ಹರೇ. ಕಾನೂನಿನ ಪ್ರಕಾರ ಅವರು ಎಂದಿಗೂ ಅನರ್ಹರೇ. ತಮಗೆ ಬೇಕಾದವರಿಗೆ ಮಂತ್ರಿ ಸ್ಥಾನ ನೀಡುವ ಸ್ವಾತಂತ್ರ್ಯವೂ ಯಡಿಯೂರಪ್ಪನವರಿಗೆ ಇಲ್ಲ ಎಂಬುದನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ ಎಂದು ಲೇವಡಿ ಮಾಡಿದ್ದರು.

ಇದನ್ನೂ ಓದಿ: ‘ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ಸಂತಸ ತಂದಿಲ್ಲ; ನನ್ನ ಪಾಲಿಗವರು ಅನರ್ಹರು‘ - ಸಿದ್ದರಾಮಯ್ಯ

ಅದಕ್ಕೆ ಇಂದು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್. ವಿಶ್ವನಾಥ್, ಸಿದ್ದರಾಮಯ್ಯನವರಿಂದ ಸಂವಿಧಾನಕ್ಕೆ ಅಪಚಾರವಾಗಿದೆ. ಸಚಿವರನ್ನು ಅನರ್ಹರು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್​ ತೀರ್ಪಿಗೂ ಅಗೌರವ ತಂದಿದ್ದಾರೆ. ಪ್ರಮಾಣವಚನ ಸ್ವೀಕಾರ ಮಾಡಿದ ಶಾಸಕರು ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರು. ಸಿದ್ದರಾಮಯ್ಯ ಹೇಗೆ ಗೆದ್ದಿದ್ದರು ಎಂದು ನನಗೆ ಗೊತ್ತಿದೆ. ಹಾಗಾದರೆ ಇವರು ಹೇಗೆ ಗೆದ್ದರು? ಎಲ್ಲ ಚುನಾವಣೆಗಳು ದುಡ್ಡಿನಿಂದಲೇ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೆಂಪಾಪುರದಲ್ಲಿ ವಾಲಿದ್ದ ಕಟ್ಟಡ ತೆರವು ಕಾರ್ಯಾಚರಣೆ ಆರಂಭ; ಅಕ್ಕಪಕ್ಕದ ಜನರ ಸ್ಥಳಾಂತರ

ಪಕ್ಷಾಂತರಿಗಳು 17 ಜನ ಒಟ್ಟಾಗಿಲ್ಲ ಎಂಬ ಚರ್ಚೆ ವಿಚಾರವಾಗಿಯೂ ಹೇಳಿಕೆ ನೀಡಿರುವ ಎಚ್​. ವಿಶ್ವನಾಥ್, ಯಾವಾಗಲೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಇರಲು ಆಗುತ್ತಾ? ಗಂಡ ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವು ಯಾವಾಗಲು ಜೊತೆಯಾಗಿರಲು ಆಗುತ್ತಾ? ನಿನ್ನೆ ಕಾರ್ಯಕ್ರಮಕ್ಕೆ ಕೆಲವರು ಬಂದಿಲ್ಲದಿರಬಹುದು. ಆದರೆ, ನಾವೆಲ್ಲ ಒಟ್ಟಾಗಿದ್ದೇವೆ. ನಿನ್ನೆ ನಾನು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
First published: