ಸಿಎಎ ವಿರೋಧಿಸುವವರು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳು - ಎಲ್ಲರೂ ಸಿಎಎ ಒಪ್ಪಿಕೊಳ್ಳಬೇಕು ; ಬಸನಗೌಡ ಪಾಟೀಲ ಯತ್ನಾಳ್

ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ದಬ್ಬಾಳಿಕೆಗೆ ಒಳಗಾಗುವ ಅಲ್ಪಸಂಖ್ಯಾತ ಹಿಂದೂಗಳಿಗೆ ಇದರಡಿ ಪೌರತ್ವ ಸಿಗಲಿದೆ. ಇದನ್ನು ವಿರೋಧಿಸುತ್ತಿರುವ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದಿದ್ದಾರೆ.

news18-kannada
Updated:January 20, 2020, 2:57 PM IST
ಸಿಎಎ ವಿರೋಧಿಸುವವರು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳು - ಎಲ್ಲರೂ ಸಿಎಎ ಒಪ್ಪಿಕೊಳ್ಳಬೇಕು ; ಬಸನಗೌಡ ಪಾಟೀಲ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ವಿಜಯಪುರ(ಜ.20): ಸಿಎಎ ವಿರೋಧಿಗಳು ಅಂಬೇಡ್ಕರ್​ ಮತ್ತು ಸಂವಿಧಾನ ವಿರೋಧಿಗಳಿದ್ದಂತೆ, ಅಂಬೇಡ್ಕರ ರಚಿತ ಸಂವಿಧಾನದಡಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಿಎಎ ಕಾಯಿದೆ ಪಾಸ್ ಮಾಡಲಾಗಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್​​​​​​​​​​​​​ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಈ ಕಾಯಿದೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಲ್ಲಿ ದಬ್ಬಾಳಿಕೆಗೆ ಒಳಗಾಗುವ ಅಲ್ಪಸಂಖ್ಯಾತ ಹಿಂದೂಗಳಿಗೆ ಇದರಡಿ ಪೌರತ್ವ ಸಿಗಲಿದೆ. ಇದನ್ನು ವಿರೋಧಿಸುತ್ತಿರುವ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ನಾಯಕರು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದಿದ್ದಾರೆ.

ಸಿಎಂ ಮುಂದಿನ ರಾಜಕೀಯ ಕುರಿತು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರ, ಅವರು ಹಿರಿಯ ಸಂಘ ಜೀವಿ, ಬಿಜೆಪಿ ಸಿದ್ಧಾಂಥದಂತೆ 75 ವರ್ಷ ಮೇಲ್ಪಟ್ಟವರು ಚುನಾವಣೆ ರಾಜಕೀಯದಿಂದ ದೂರ ಉಳಿಯುತ್ತಾರೆ. ಅದರಂತೆ ಕಲ್ಲಡ್ಕ ಪ್ರಭಾಕರ ಭಟ್ ಹಿರಿಯರಾಗಿ ತಮ್ಮ ಭಾವನೆ ಹೇಳಿದ್ದಾರೆ. ಅವರ ವೈಯಕ್ತಿಕ ಅಭಿಪ್ರಾಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತೆ ಎಂದರು.

ಮುಂದಿನ ಬಾರಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ ನಾನೇ ಅಧಿಕಾರಕ್ಕೆ ಬರುತ್ತೇನೆ ಅಂತ ಅವರು ಸಿಎಂ ಹೇಳಿಲ್ಲ. ಪಕ್ಷ ಈ ಕುರಿತು ಆ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬೇಗ ನಡೆಯಲಿದೆ. ಅನರ್ಹರಿಂದ ಅರ್ಹರಾದ ಶಾಸಕರು ಸಚಿವರಾಗಲಿದ್ದಾರೆ. ಎಲ್ಲ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತೆ. ಆದರೆ, ಹಲವು ಬಾರಿ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಸರಕಾರ ಉಳಿಸಿಕೊಳ್ಳಲು ನಾವೆಲ್ಲ‌ ಗಟ್ಟಿಯಾಗಬೇಕು ಎಂದರು ತಿಳಿಸಿದರು.

ಭಾರತ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಮಾಜಿ ಸಿಎಂ  ಸಿದ್ಧರಾಮಯ್ಯ ಹೇಳಿಕೆ ವಿಚಾರ ಮಾತನಾಡಿದ ಯತ್ನಾಳ್,  ಭಾರತವನ್ನು ಮತ್ತೇನು ಪಾಕಿಸ್ತಾನ ಮಾಡ್ತಾರಾ? ಹಿಂದೂಗಳು ಹೆಚ್ಚಾಗಿರುವ ದೇಶವನ್ನು ಹಿಂದೂ ರಾಷ್ಟ್ರ ಎಂದೇ ಕರೆಯುತ್ತಾರೆ. ಅಧಿಕಾರಕ್ಕಾಗಿ‌ ಅಂದು ಜವಾಹರಲಾಲ್ ನೆಹರು ಭಾರತ ವಿಭಜನೆಗೆ ಕಾರಣರಾದರು ಎಂದರು

ಜವಾಹರಲಾಲ್​​​ ನೆಹರೂ ಅವರಿಗೆ ಮಹಾತ್ಮ‌ ಗಾಂಧಿ ವಚನ ನೀಡಿದ್ದರಿಂದ ಅವರು ಭಾರತದ ಮೊದಲ ಪ್ರಧಾನಿಯಾದರು. ನೆಹರು ಅವರಂಥ ವಿಲಾಸಿ ಜೀವನ ನಡೆಸುವ ಒಬ್ಬ ವ್ಯಕ್ತಿ ಭಾರತದ ಪ್ರಧಾನಿಯಾಗಿದ್ದು ಒಂದು ದುರಂತ. ಸರ್ಧಾರ್ ವಲ್ಲಭ ಬಾಯಿ ಪಟೇಲ್​ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು ಎಂದು ನೆಹರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಶಿವಸೇನೆಯಿಂದ ಹಿಂದುತ್ವ ವಿಚಾರ ಕೈಜಾರಿ ಹೋಗಿದೆ. ಈ ಹಿನ್ನೆಲೆ ಗಡಿ, ಭಾಷೆ, ಶಿರಡಿ ಸಾಯಿಬಾವಾ ಜನ್ಮಸ್ಥಳದ ವಿವಾದವನ್ನು ಪ್ರಸ್ತಾಪಿಸುತ್ತಿದೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ : ಶಾಸಕರ ಹೆಸರಲ್ಲಿ ಮಸೀದಿಗಳನ್ನು ತಲುಪುತ್ತಿವೆ ನಕಲಿ ಪತ್ರಗಳು; ಪೊಲೀಸರಿಂದ ತನಿಖೆ
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading