ಎನ್​ಆರ್​ಸಿ, ಸಿಎಎ, ಎನ್‌ಪಿ‌ಆರ್ ಮುಸ್ಲಿಮರಿಗಷ್ಟೇ ಅಲ್ಲಾ, ಎಲ್ಲ ಸಮುದಾಯದವರಿಗೂ ಸಮಸ್ಯೆಯೇ; ಅಸಾದುದ್ದೀನ್ ಓವೈಸಿ

ಬೀದರ್‌ನಲ್ಲಿ ಎನ್‌ಆರ್‌ಸಿ ವಿರುದ್ದ ವಿದ್ಯಾರ್ಥಿಗಳು ನಾಟಕ  ಮಾಡಿದ್ದಕ್ಕೆ ಪೊಲೀಸರು  ಶಿಕ್ಷಕರು, ಪೋಷಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. 4, 5ನೇ ತರಗತಿಯ ಮಕ್ಕಳಿಗೆ ಏನು ಗೊತ್ತಿರುತ್ತದೆ. ಅವರ ತಾಯಿ ಮೇಲೆ ಪ್ರಕರಣ ದಾಖಲಿಸುತ್ತಾರೆ ಎಂದರು.

news18-kannada
Updated:February 20, 2020, 9:42 PM IST
ಎನ್​ಆರ್​ಸಿ, ಸಿಎಎ, ಎನ್‌ಪಿ‌ಆರ್ ಮುಸ್ಲಿಮರಿಗಷ್ಟೇ ಅಲ್ಲಾ, ಎಲ್ಲ ಸಮುದಾಯದವರಿಗೂ ಸಮಸ್ಯೆಯೇ; ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ
  • Share this:
ಬೆಂಗಳೂರು: ನಾನು ಹೆಚ್ಚು ಓದಿಲ್ಲ. ನಮ್ಮ ತಂದೆ ಕಿವಿ ಹಿಡಿದು ಓದಲು ಕಳುಹಿಸುತ್ತಿದ್ದರು. ಮೋದಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಟೈರ್ ಪೊಲಿಟಿಕಲ್ ಸೈನ್ಸ್ ಓದಿದ್ದಾರೆ. ನನ್ನ ಬಳಿ ಅಷ್ಟೆಲ್ಲ ವಿದ್ಯೆ ಇಲ್ಲ. ಆದರೂ ಅವರು ನನ್ನೊಂದಿಗೆ ಎನ್​ಆರ್‌ಸಿ, ಎನ್‌ಪಿ‌ಆರ್, ಸಿಎಎ ಬಗ್ಗೆ ಚರ್ಚೆಗೆ ಬರಲಿ ಎಂದು ಎಐಎಂಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿಯನ್ನು ಚರ್ಚೆಗೆ ಆಹ್ವಾನಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಎನ್‌ಆರ್‌ಸಿ, ಎನ್‌ಪಿ‌ಆರ್, ಸಿ‌ಎ‌ಎ ವಿರುದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಓವೈಸಿ, ಬಿಜೆಪಿಯವರೆಲ್ಲ ಒಟ್ಟಿಗೆ ಚರ್ಚೆಗೆ ಬರಲಿ, ನಾನೊಬ್ಬನೆ ಚರ್ಚೆಗೆ ಸಿದ್ದ. ಪ್ರಧಾನಿಗಳು ಯಾವಾಗಲು ಪಾಕಿಸ್ತಾನ್, ಪಾಕಿಸ್ತಾನ್ ಅಂತಿರ್ತಾರೆ. ಹಿಜಾಬ್ ಧರಿಸಿದ್ದ ಒಬ್ಬ ಯುವತಿಗೆ ನಮ್ಮ ದೇಶದಲ್ಲಿ ಗೋಲ್ಡ್ ಮೆಡಲ್ ಕೊಡಲು ನಿರಾಕರಿಸಿದರು ಎಂದು ಹೇಳಿದರು.

ಬೀದರ್‌ನಲ್ಲಿ ಎನ್‌ಆರ್‌ಸಿ ವಿರುದ್ದ ವಿದ್ಯಾರ್ಥಿಗಳು ನಾಟಕ  ಮಾಡಿದ್ದಕ್ಕೆ ಪೊಲೀಸರು  ಶಿಕ್ಷಕರು, ಪೋಷಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. 4, 5ನೇ ತರಗತಿಯ ಮಕ್ಕಳಿಗೆ ಏನು ಗೊತ್ತಿರುತ್ತದೆ. ಅವರ ತಾಯಿ ಮೇಲೆ ಪ್ರಕರಣ ದಾಖಲಿಸುತ್ತಾರೆ.  ಈ ವಿಚಾರವನ್ನು ನನಗೆ ಒಬ್ಬರು ಫೋನ್ ಮಾಡಿ ಹೇಳಿದರು. ನೀವು ದಿಲ್ಲಿಯಲ್ಲಿ ಏನು ಮಾಡ್ತಿದ್ದಿರಾ, ನಿಮ್ಮ ಒಬ್ಬ ತಾಯಿ, ಅಕ್ಕ-ತಂಗಿ ಜೈಲಿನಲ್ಲಿದ್ದಾರೆ ಅಂದರು. ನಮ್ಮ ಹೆಣ್ಣು ಮಗಳನ್ನು ಜೈಲಿಗಟ್ಟಿದ್ದಾರೆ ಅಂದ್ರು. ನಾನು ಅಲ್ಲಿಂದ ಹೈದರಾಬಾದಿಗೆ ಬಂದು ಬೀದರ್‌ಗೆ ಬಂದೆ. ಅವರನ್ನ ಜೈಲಿನಲ್ಲಿ ಭೇಟಿಯಾದೆ, ಅವರ ಪರಿಸ್ಥಿತಿ ಕಂಡು ಮನಸು ಮರುಕ ಪಟ್ಟಿತ್ತು. ಶಿಕ್ಷಕರು ನನಗೆ ಬಿಪಿ ಹೆಚ್ಚಿದೆ, ಗ್ಲೂಕೋಸ್ ಹಾಕುತ್ತಿದ್ದಾರೆ ಅಂದ್ರು. ಪ್ರಧಾನಿಗಳು ಪುಟ್ಟಮಕ್ಕಳ ಮೇಲೆ ದ್ವೇಷ ಸಾಧಿಸುವಂತಿದೆ ಎಂದರು.

ಜೆ‌ಎನ್‌ಯು ವಿಶ್ವವಿದ್ಯಾಲದಲ್ಲಿ ಗಲಭೆಗಳಾದವು. ಗೋಲಿಬಾರ್ ನಡೆಯಿತು, ಹಲ್ಲೆ ಮಾಡಿದವರು ಮುಸಲ್ಮಾನರಲ್ಲ ಎಂಬ ಕಾರಣಕ್ಕೆ ಅವರನ್ನು ಬಿಟ್ಟರು. ಆದರೆ ಮುಸಲ್ಮಾನ್ ಎಂಬ ಕಾರಣಕ್ಕೆ 4, 5ನೇ ತರಗತಿಯ ಮಗುವಿನ ತಾಯಿಯನ್ನು ಜೈಲಿಗಟ್ಟಿದ್ದಾರೆ. ನಿಮ್ಮತ್ರ ತಾಕತ್ತು, ಬಂದೂಕು, ಕಾನೂನು ಎಲ್ಲಾ ಇದೆ. ನಮ್ಮಲ್ಲಿ ಅಲ್ಲಾಹುವಿನ ಆಶೀರ್ವಾದ ಇದೆ, ನಂಬಿಕೆ ಇದೆ. ನಮ್ಮಲ್ಲಿ ಒಗ್ಗಟ್ಟು ಇರಬೇಕು, ದೃಢ ವಿಶ್ವಾಸ ಇರಬೇಕು. ಯಾರೇ ಬಂದು ದಾಖಲೆ ಕೇಳಿದರೂ ತೋರಿಸಲ್ಲ ಎಂದು ಸವಾಲು ಹಾಕಿದರು.

ಇದನ್ನು ಓದಿ: ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಯುವತಿ

ಭಾರತದಲ್ಲಿ ಶೇ. 28 ಜನರ ಬಳಿ ಮಾತ್ರ ಜನನ ಪ್ರಮಾಣ ಪತ್ರ ಇದೆ. ಹಿಂದು, ಮುಸ್ಲಿಂ, ದಲಿತ, ಆದಿವಾಸಿ, ಬುಡಕಟ್ಟು ಸೇರಿದಂತೆ ಬಹುತೇಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ.  ಇದು ಬರಿ ಮುಸ್ಲಿಮರಿಗಷ್ಟೇ ಬರೆಯಲ್ಲಾ, ಎಲ್ಲಾ ಸಮುದಾಯದವರಿಗೂ ಸಮಸ್ಯೆಯೇ.  ಈಗ ಎಲ್ಲರೂ ಒಂದು ವರ್ಷದ ಒಳಗೆ ಜನನ ಮರಣ ಪ್ರಮಾಣ ಪತ್ರ ಮಾಡಿಸಿಕೊಳ್ಳಬೇಕು.  ಇಲ್ಲವಾದರೆ ವಕೀಲರು ಕೋರ್ಟ್ ಕಚೇರಿ ಅಲೆಯಬೇಕು. ವಕೀಲರು ಕೇಸ್ ತೆಗೆದುಕೊಳ್ಳುವ ಬದಲು ಬರಿ ಜನನ ಮರಣ ಪ್ರಮಾಣ ಪತ್ರ ಮಾಡಿಸಿಕೊಡಲು ಮುಂದಾಗಬೇಕು.  ಎನ್‌ಆರ್‌ಸಿ, ಎನ್‌ಪಿ‌ಆರ್ ಆಗಿಲ್ಲ ಅಂದ್ರೆ ನೀವು ಸಂಕಷ್ಟದಲ್ಲಿ ಸಿಲುಕುತ್ತಿರಾ. ಎನ್‌ಆರ್‌ಸಿ ಎನ್‌ಪಿ‌ಆರ್ ಜರ್ಮನಿಯಲ್ಲಿ ಹಿಟ್ಲರ್ ರೂಪಿಸಿದ್ದ ಕಾನೂನು. ಲಕ್ಷಾಂತರ ಜನರನ್ನು ದೇಶದಿಂದ ಹೊರಗಟ್ಟಿದರು, ನಮ್ಮ ದೇಶದ ಜೈಲುಗಳಲ್ಲಿ 3 ಲಕ್ಷ ಜನರನ್ನ ಮಾತ್ರ ಬಂಧಿಸಿಡಬಹುದು. ಎನ್‌ಆರ್‌ಸಿ, ಎನ್‌ಪಿ‌ಆರ್‌ನಿಂದ ಜನರನ್ನು ಸ್ಟಡಿಯಂಗಳಲ್ಲಿ ಬಂಧಿಸಿಡಬೇಕಾಗುತ್ತದೆ. ಅಲ್ಲಿ ಐಪಿಎಲ್ ನೋಡ್ಕೊಂಡು ಕುತ್ಕೋಬೇಕು ಎಂದು ಗೇಲಿ ಮಾಡಿದರು.
First published:February 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ