ತುಕ್ಡೆ ಗ್ಯಾಂಗ್ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ : ಡಿಕೆಶಿಗೆ ಸಿ.ಟಿ.ರವಿ ತಿರುಗೇಟು

ತುಕ್ಡೆ ಗ್ಯಾಂಗ್ ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅದು ಕನ್ನಯ್ಯ ಕುಮಾರ್ ಇರಬಹುದು, ಹಾರ್ದಿಕ್ ಪಟೇಲ್ ಇರಬಹುದು. ತುಕ್ಡೆ ಗ್ಯಾಂಗ್ ನ ಪ್ರಚೋದನೆ ಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ  ಎಂದರು.

ಸಿ.ಟಿ.ರವಿ

ಸಿ.ಟಿ.ರವಿ

  • Share this:
ಪಟಾಕಿ ಶುಭ ಕಾರ್ಯದಲ್ಲಿ ಸ್ವಾಗತ ಮಾಡಲು ಹಚ್ಚುತ್ತಾರೆ. ಆದ್ರೆ, ಬೆಂಕಿ ಹಚ್ಚೋ ಜಾಯಾಮಾನಕ್ಕೆ ನಾನು ಸೇರಿದವನಲ್ಲ. ಇವರ ಉದ್ದೇಶ ಅರಾಜಕತೆ ಸೃಷ್ಟಿ ಮಾಡೋದು, ಬೆಂಕಿ ಹಾಕೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ತಿರುಗೇಟು ನೀಡಿದ್ದಾರೆ. ಆ ಬೆಂಕಿ ಹಾಕುವ ಜಾಯಮಾನಕ್ಕೆ ನಾನು ಸೇರಿದವನಲ್ಲ. ಬೆಂಕಿ ಹಾಕೋರು ಡೇಂಜರ್. ಊರಿಗೆ ಬೆಂಕಿ ಹಾಕಿ ಇದ್ದಿಲು ಮಾರಿದ್ರೆ ಎಷ್ಟು ಲಾಭ ಆಗುತ್ತೆ ಅಂತಾ ಮನಸ್ಥಿತಿ ಇರೋರು ಕಾಂಗ್ರೆಸ್ಸಿಗರು.  ಬೆಂಕಿ ಹಾಕುವ ಮನಸ್ಥಿತಿ ಕಾರಣಕ್ಕೆ ಇವತ್ತು ಮರಾಠ, ಕನ್ನಡಿಗರ ನಡುವೆ ಸಂಘರ್ಷ ಉಂಟಾಗುವುದಕ್ಕೆ ಕಾರಣವಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದರು.

ಕನ್ನಡ ಭಾವುಟ ಸುಟ್ಟು ಗಲಭೆ ಎಬ್ಬಿಸುವಂತಹ ಕೆಲಸ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಮಾಡಿದ್ದಾರೆ. ಶಿವಾಜಿ ಪ್ರತಿಮೆ ಗೆ ಮಸಿ ಬಳಿದು ಮರಾಠಿಗರನ್ನ ಎತ್ತು ಕಟ್ಟುವ ಷಡ್ಯಂತ್ರ ನಡೆಸಿದ್ರು . ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಕರ್ನಾಟಕದಲ್ಲಿ ಮರಾಠ vs ಕನ್ನಡಿಗರು ಅಂತಾ ಸಂಘರ್ಷ ಉಂಟು ಮಾಡುವ ಸಂಚು ಮಾಡಿದ್ರು. ಇದೆಲ್ಲದರ ಹಿಂದೆ ಕಾಂಗ್ರೆಸ್ ಇದೆ ಎಂದು ಹೇಳಿದರು.

ತುಕ್ಡೆ ಗ್ಯಾಂಗ್ ನಿಂದ ಪ್ರಚೋದನೆ

ಈಗ ಬಂಧನವಾಗಿರೋದು ಕಾಂಗ್ರೆಸ್ ಬೆಂಬಲಿಗರು. ಬಂಧಿತರು ಡಿ.ಕೆ.ಶಿವಕುಮಾರ ಹಾಗೂ ಜಮೀರ್ ಖಾನ್ ಬೆಂಬಲಿಗರು . ತುಕ್ಡೆ ಗ್ಯಾಂಗ್ ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ ಅದು ಕನ್ನಯ್ಯ ಕುಮಾರ್ ಇರಬಹುದು, ಹಾರ್ದಿಕ್ ಪಟೇಲ್ ಇರಬಹುದು. ತುಕ್ಡೆ ಗ್ಯಾಂಗ್ ನ ಪ್ರಚೋದನೆ ಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ  ಎಂದರು.

ಇದನ್ನೂ ಓದಿ:  ನನಗೂ ಆ ಪಟಾಕಿ ರವಿಗೂ ಸಂಬಂಧವಿಲ್ಲ: ಡಿ.ಕೆ.ಶಿವಕುಮಾರ್

ನಾನು RSS ಸ್ವಯಂ ಸೇವಕ

ಅಕ್ರಮ ಸಂಪತ್ತು ಮಾಡಿಕೊಂಡು ಎಫ್ಐಆರ್, ಜೈಲು ಕಂಡರವು ಆರೋಪ ಮಾಡಿದ್ದಾರೆ, ಆರೋಪ ಮಾಡಿದವರು ತಮ್ಮ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಬೇಕು,. ಅಕ್ರಮ ಆಸ್ತಿ ಸಂಪಾದಿಸಿ ಜೈಲಿಗೆ ಹೋಗಿ ಬಂದು ಜಾಮೀನಿನ ಮೇಲೆ ಹೊರಗಿರುವ ಕುಖ್ಯಾತಿ ನನಗಿಲ್ಲ. ನಾನೇನು ಹಣ ಲೂಟಿ ಹೊಡೆದಿಲ್ಲ. ನಾನೊಬ್ಬ ಆರ್ ಎಸ್ಎಸ್ ಸ್ವಯಂ ಸೇವಕನೇ ಹೊರತು ಕೊತ್ವಾಲ್ ರಾಮಚಂದ್ರನ ಚೇಲಾ. ಕೋತ್ವಾಲ್ ರಾಮಚಂದ್ರನ ಚೇಲಾ ಆದವರಿಗೆ ಉಳಿದವರೆಲ್ಲ ಅವರಿಗೆ ಒಂದೇ ರೀತಿ ಕಾಣುತ್ತಾರೆ ಎಂದು ಸಿ,ಟಿ.ರವಿ ನಿನ್ನೆ ಹೇಳಿದ್ದರು.

ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್

ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್ ಇದೆ. ಸಂಘರ್ಷ ಉಂಟು ಮಾಡಿ ರಾಜಕೀಯ ದುರ್ಲಾಭ ಪಡೆಯುವ ಷಡ್ಯಂತ್ರ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರೇ ಈ ಪ್ರಕರಣದ ಪ್ರೊಡ್ಯೂಸರ್, ಡೈರೆಕ್ಟರ್ ಅನ್ನೋದು ಬಹಳ ಸ್ಪಷ್ಟ  ಎಂದು ಗಂಭೀರ ಆರೋಪವನ್ನು ಮಾಡಿದ್ರು.

ಇದನ್ನೂ ಓದಿ:  ಜಡೆ ಎಳೆದು, ಅಶ್ಲೀಲ ಮಾತು: ವಿದ್ಯಾರ್ಥಿನಿ ಆತ್ಮಹತ್ಯೆ

ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಸಿ.ಟಿ.ರವಿ (C.T.Ravi) ಮತ್ತು ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಹೇಳಿದ್ದಾರೆ. ಮಾತನಾಡುವ ವೇಳೆ ಸಿ,ಟಿ.ರವಿ ಅವರನ್ನು ಪಟಾಕಿ ರವಿ ಎಂದು ಹೇಳಿ ವ್ಯಂಗ್ಯ ಮಾಡಿದರು. ಸಿಟಿ ರವಿಗೂ ನನಗೂ ಸಂಬಂಧವಿಲ್ಲ. ಆದರೂ ‌ನನ್ನ ಬಗ್ಗೆ ಮಾತನಾಡುತ್ತಾರೆ. ಸಿ.ಟಿ. ರವಿ ಅಲ್ಲ ಪಟಾಕಿ ರವಿ. ಪಟಾಕಿ ಹೊಡೆಯೊದು, ಬಿಟ್ಟುಬಿಡುವುದು ಒಳ್ಳೆಯದು ಎಂದು ಕುಟುಕಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Snagolli Rayanna Statue) ಪ್ರತಿಮೆ ಭಗ್ನಗೊಳಿಸಿದ ಹಿನ್ನೆಲೆಯಲ್ಲಿ ಕನ್ನಡಿಗರ ಆಕ್ರೋಶ ಭುಗಿಲೆದಿದ್ದು, ರಾಜ್ಯ ಸರ್ಕಾರ ಇಂದು ಸದನದಲ್ಲಿ ಎಂಇಎಸ್(ME) ಪುಂಡಾಟದ ವಿರುದ್ದ ನಿರ್ಣಯ ಮಂಡನೆ ಮಾಡಿತು. ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ (cm basavaraj bommai) ಮಂಡಿಸಿದ ನಿರ್ಣಯಕ್ಕೆ ಅಂಗೀಕಾರ ದೊರೆಯಿತು
Published by:Mahmadrafik K
First published: