CM Ibrahim: ಬಿಜೆಪಿಗೆ ಮತ ಹಾಕಿಸಿದ್ದೇ ಡಿಕೆಶಿ, ಸಿದ್ದು; ಯಡಿಯೂರಪ್ಪ ಜೊತೆ ನಡೆದಿದೆ ಡೀಲ್​- ಇಬ್ರಾಹಿಂ ಆರೋಪ

ಸಿದ್ದರಾಮಯ್ಯ, ಡಿ‌ಕೆಶಿ ಮೊದಲ ವೋಟ್ ಬಿಜೆಪಿಗೆ, ಎರಡನೇ ವೋಟ್ ಕಾಂಗ್ರೆಸ್​ಗೆ ಹಾಕಿಸಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡಿ ಅಂತ ಸೋನಿಯಾ ಗಾಂಧಿಯವರಿಗೆ ವಿನಂತಿ ‌ಮಾಡುತ್ತೇನೆ.‌ ಸಿದ್ದರಾಮಯ್ಯ ಯಡಿಯೂರಪ್ಪರ ಜೊತೆಗೆ ಈಗಲೂ ಡೀಲ್ ಮಾಡಿಕೊಂಡ್ರು ಎಂದು CM ಇಬ್ರಾಹಿಂ ಹೇಳಿದ್ದಾರೆ.

ಸಿಎಂ ಇಬ್ರಾಹಿಂ

ಸಿಎಂ ಇಬ್ರಾಹಿಂ

  • Share this:
ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಜೆಡಿಎಸ್​ ಶಾಸಕರ ಅಡ್ಡ ಮತದಾನದ ಬಗ್ಗೆ ಜೆಡಿಎಸ್​ರಾಜ್ಯಾಧ್ಯಕ್ಷ್ಯ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಕಾಂಗ್ರೆಸ್​ ನಾಯಕರ (Congress Leaders) ವಿರುದ್ಧವೂ ಕಿಡಿಕಾರಿದ್ರು. ಕೋಲಾರದಲ್ಲಿ ಮಾತಾಡಿದ ಅವರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಸಿದ್ದು,  ಡಿಕೆ ಶಿವಕುಮಾರ್ (D.K Shivakumar), ಸಿದ್ದರಾಮಯ್ಯ (Siddaramaiah) ಎಂದ್ರು. ಮೊದಲನೇ ಮತ ಬಿಜೆಪಿಗೆ, ಎರಡನೇ ಮತ ಕಾಂಗ್ರೆಸ್ ಗೆ ಹಾಕಿಸಿದ್ದಾರೆ. ರಾಜ್ಯಸಭೆ ಚುನಾವಣೆ ಮೂಲಕ ಬಿಜೆಪಿ, ಕಾಂಗ್ರೆಸ್ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಂದು ತಿಳಿದುಬಂದಿದೆ ಎಂದು ಸಿ.ಎಂ ಇಬ್ರಾಹಿಂ ಕಿಡಿಕಾರಿದ್ರು.

ಜೆಡಿಎಸ್ ನಂ.1, ಬಿಜೆಪಿ ನಂ.2, ಕಾಂಗ್ರೆಸ್​ ನಂ.3 ಆಗುತ್ತೆ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಡ್ಡ ಮತದಾನ ಹಾಕಿದ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರ ಶ್ರೀನಿವಾಸ್ ಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿ.ಎಂ.ಇಬ್ರಾಹಿಂ, ಹೆಚ್​ಡಿಕೆ ಸಿಎಂ ಆಗಲು ಸಿದ್ದು, ಡಿ‌ಕೆಶಿ ಫೌಂಡೇಶನ್ ಹಾಕಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ನಂ.1 ಆಗುತ್ತೆ, ಬಿಜೆಪಿ ನಂ.2, ಕಾಂಗ್ರೆಸ್ ನಂ.3 ಆಗುತ್ತದೆ ಅಂತ ಎಲ್ಲಿರಿಗೂ ಗೊತ್ತಿದೆ.

ಮೊದಲ ವೋಟ್ ಬಿಜೆಪಿಗೆ, ಎರಡನೇ ವೋಟ್ ಕಾಂಗ್ರೆಸ್​ಗೆ

ಸಿದ್ದರಾಮಯ್ಯ, ಡಿ‌ಕೆಶಿ ಮೊದಲ ವೋಟ್ ಬಿಜೆಪಿಗೆ, ಎರಡನೇ ವೋಟ್ ಕಾಂಗ್ರೆಸ್​ಗೆ ಹಾಕಿಸಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡಿ ಅಂತ ಸೋನಿಯಾ ಗಾಂಧಿಯವರಿಗೆ ವಿನಂತಿ ‌ಮಾಡುತ್ತೇನೆ.‌ ಸಿದ್ದರಾಮಯ್ಯ ಯಡಿಯೂರಪ್ಪರ ಜೊತೆಗೆ ಈಗಲೂ ಡೀಲ್ ಮಾಡಿಕೊಂಡ್ರು. ಅದಕ್ಕೆ ಸಿ.ಟಿ ರವಿ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದು. ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ ಎಂದರು.

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ರಾಜಕೀಯಕ್ಕೆ ಹಣ ಮಾಡಲು ಬಂದವನಲ್ಲ ನಾನು

ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ರು. ಜೆಡಿಎಸ್ ಎಂದಿಗೂ ಬಿ ಟೀಂ ಅಲ್ಲ. ನಾವು ನಿಮ್ಮ ಜೊತೆ ಸರ್ಕಾರ ಮಾಡಿದರೆ ಒಂದು ವರ್ಷ ಸರ್ಕಾರ ನಡೆಸುವುದಕ್ಕೂ ಬಿಡಲಿಲ್ಲ ನೀವು. ರಾಜಕೀಯಕ್ಕೆ ಹಣ ಮಾಡಲು ಬಂದವನಲ್ಲ ನಾನು. ರಾಜಕೀಯದಲ್ಲಿ ದುಡ್ಡು ಮಾಡಬೇಕು ಅನ್ನೋ ಸ್ವಾರ್ಥ ಇಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಎಂದು ಕುಪೇಂದ್ರ ರೆಡ್ಡಿ ಹೇಳಿದರು.

ಕಾಂಗ್ರೆಸ್​ಗೆ ಎಷ್ಟು ಸ್ವಾರ್ಥ, ಸೇಡು ಇದೆ

ಕಾಂಗ್ರೆಸ್​ನ ದ್ವಿತೀಯ ಪ್ರಾಶಸ್ತ್ಯದ ಮತ ಕೊಡಿ ಅಂತಲೇ ನಾನು ಕೇಳಿಕೊಂಡಿದ್ದೆ. ಪಾರ್ಟಿ ಅಧ್ಯಕ್ಷರು ಬಂದು ಪೋಲಿಂಗ್ ಏಜೆಂಟ್ ಆಗ್ತಾರೆ ಅಂದ್ರೆ ಕಾಂಗ್ರೆಸ್​ಗೆ ಎಷ್ಟು ಸ್ವಾರ್ಥ, ಸೇಡು ಇದೆ ಅಂತ ಲೆಕ್ಕ ಹಾಕಿ. ಆಗಲೇ ನನಗೆ ಬಹಳ ಬೇಜಾರಾಯ್ತು. ಪ್ರಾದೇಶಿಕ ಪಕ್ಷವನ್ನು ಮುಗಿಸಿಬಿಡ್ತಾರೆ ಇವರು. ದೇಶದಲ್ಲಿ ಗಟ್ಟಿಯಾದ ಪ್ರತಿಪಕ್ಷವೇ ಇಲ್ಲ ಎಂದು ಕುಪೇಂದ್ರ ರೆಡ್ಡಿ ಕಿಡಿಕಾರಿದ್ರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಬಿಜೆಪಿ ಬಿ ಟೀಂ ಪಿತಾಮಹ ಸಿದ್ದರಾಮಯ್ಯ. ಡೀಲ್ ರಾಮಯ್ಯ ಸಿದ್ದರಾಮಯ್ಯ ಎಂದು ಎಂಎಲ್​ಸಿ ಶರವಣ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಶಾಸಕರನ್ನು ಮನೆಗೆ ಕರೆಸಿಕೊಂಡು ಡೀಲ್ ಮಾಡ್ಕೊಂಡಿದ್ದೀರಾ?. ರಾಜ್ಯಸಭಾ ಚುನಾವಣೆಯಲ್ಲಿ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯ ಯಾರ ಮಾತೂ ಕೇಳಲ್ಲ, ಸಿದ್ದರಾಮಯ್ಯ ತಾವೇ ಹೈಕಮಾಂಡ್ ತರ ಮಾಡ್ತಿದ್ದಾರೆ ಅಂತ ಕಾಂಗ್ರೆಸ್​ನವರೇ ಹೇಳ್ತಿದ್ದಾರೆ.

ಇದನ್ನೂ ಓದಿ: Motamma: ತನ್ನ ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಸಿಡಿದೆದ್ದ ಮೋಟಮ್ಮ; ಕೈ ನಾಯಕರ ಮೇಲೇಕೆ ಈ ಪರಿ ಸಿಟ್ಟು

ದೇವೇಗೌಡರು ನನಗೆ ಫಾರೂಕ್​ಗೆ ಸಿದ್ದರಾಮಯ್ಯರನ್ನು ಭೇಟಿ ಮಾಡುವುದಕ್ಕೆ ಹೇಳಿದ್ರು. ಸಿದ್ದರಾಮಯ್ಯ ಭೇಟಿ ಮಾಡಿ ಮಾವು ಮನವಿ ಮಾಡಿಕೊಂಡ್ವಿ. ಅಲ್ಲಿ ನಡೆದದ್ದನ್ನು ಹೇಳದೇ ಶರವಣ ಸ್ವೀಟ್ ಕೊಡೋದಕ್ಕೆ ಬಂದ ಅಂತ ತಿರುಚಿ ಹೇಳೋ ಸಿದ್ದರಾಮಯ್ಯರನ್ನು ಏನಂತ ಕರೆಯಬೇಕು? ಕುಮಾರಣ್ಣ, ದೇವೇಗೌಡರ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದೀರಾ, ನೀವು ಅದಕ್ಕೆ ಬೆಲೆ ತೆರಲೇಬೇಕು ಎಂದು ಗುಡುಗಿದರು.
Published by:Pavana HS
First published: