• Home
  • »
  • News
  • »
  • state
  • »
  • C M Bipin: ಪ್ರಾಜೆಕ್ಟ್ ಚೀತಾ ಕೋರ್ ತಂಡದಲ್ಲಿ ಕೊಡಗಿನ ಕನ್ನಡಿಗ ವನ್ಯಜೀವಿ ಜೀವಶಾಸ್ತ್ರಜ್ಞ ಬಿಪಿನ್‌

C M Bipin: ಪ್ರಾಜೆಕ್ಟ್ ಚೀತಾ ಕೋರ್ ತಂಡದಲ್ಲಿ ಕೊಡಗಿನ ಕನ್ನಡಿಗ ವನ್ಯಜೀವಿ ಜೀವಶಾಸ್ತ್ರಜ್ಞ ಬಿಪಿನ್‌

ವನ್ಯಜೀವಿ ಜೀವಶಾಸ್ತ್ರಜ್ಞ ಬಿಪಿನ್‌

ವನ್ಯಜೀವಿ ಜೀವಶಾಸ್ತ್ರಜ್ಞ ಬಿಪಿನ್‌

ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ ಎಂಟು ಚಿರತೆಗಳನ್ನು (ಅಸಿನೋನಿಕ್ಸ್ ಜುಬಾಟಸ್) ತಂದಿರುವ ತಂಡದಲ್ಲಿ ಕೊಡಗಿನ ವನ್ಯಜೀವಿ ಮತ್ತು ಪರಿಸರ ವಿಜ್ಞಾನಿಗಳು ಕೂಡ ಇದ್ದಾರೆ ಎಂಬುದು ನಮ್ಮ ಕರ್ನಾಟಕದ ಹೆಮ್ಮೆ ಆಗಿದೆ. ಕೊಡಗಿನ ಸಿ.ಎಂ. ಬಿಪಿನ್ ಅವರು ಚೀತಾ ಪ್ರಾಜೆಕ್ಟ್‌ನ ಪ್ರಮುಖ ವಿಜ್ಞಾನಿ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಡೀನ್ ಡಾ. ಯದ್ವೇಂದ್ರದೇವ್ ವಿಕ್ರಮಸಿನ್ಹ್ ಝಾಲಾ ಅವರ ಪ್ರಮುಖ ನಿರ್ವಹಣಾ ತಂಡದಲ್ಲಿದ್ದಾರೆ.

ಮುಂದೆ ಓದಿ ...
  • Share this:

ಮೈಸೂರು: ಸೆಪ್ಟೆಂಬರ್‌ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ ಎಂಟು ಚಿರತೆಗಳನ್ನು (Cheetah) (ಅಸಿನೋನಿಕ್ಸ್ ಜುಬಾಟಸ್) ತಂದಿರುವ ತಂಡದಲ್ಲಿ ಕೊಡಗಿನ ವನ್ಯಜೀವಿ ಮತ್ತು ಪರಿಸರ ವಿಜ್ಞಾನಿಗಳು ಕೂಡ ಇದ್ದಾರೆ ಎಂಬುದು ನಮ್ಮ ಕರ್ನಾಟಕದ (Karnataka) ಹೆಮ್ಮೆ ಆಗಿದೆ. ಕೊಡಗಿನ ಸಿ.ಎಂ. ಬಿಪಿನ್ ಅವರು ಚೀತಾ ಪ್ರಾಜೆಕ್ಟ್‌ನ ಪ್ರಮುಖ ವಿಜ್ಞಾನಿ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಡೀನ್ ಡಾ. ಯದ್ವೇಂದ್ರದೇವ್ ವಿಕ್ರಮಸಿನ್ಹ್ ಝಾಲಾ ಅವರ ಪ್ರಮುಖ ನಿರ್ವಹಣಾ ತಂಡದಲ್ಲಿದ್ದಾರೆ. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಚಿರತೆಗಳನ್ನು ಪುನಃ ಪರಿಚಯಿಸಲು ಬಿಪಿನ್ (Bipin) ಅವರು ಈ ಮೊದಲು ಸಾಕಷ್ಟು ವ್ಯಾಪಕವಾದ ಕ್ಷೇತ್ರಕಾರ್ಯ ಮತ್ತು ಅಧ್ಯಯನವನ್ನು ನಡೆಸಿದರು.


ಪ್ರಾಜೆಕ್ಟ್ ಚೀತಾವು ಪ್ರಪಂಚದ ಮೊದಲ ಅಂತರ್-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆಯಾಗಿದೆ. ಸಿ.ಎಂ. ಬಿಪಿನ್ ಅವರು 2011 ರಿಂದ ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಸ್ವಾಯತ್ತ ವನ್ಯಜೀವಿ ಸಂಶೋಧನೆ ಮತ್ತು ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲ ಸೇವಾ ಸಂಸ್ಥೆಯ ಯೋಜನೆಯ ಸಮೀಕ್ಷಾ ತಂಡದಲ್ಲಿ ಬಿಪಿನ್ ಅವರು ಸಾಕಷ್ಟು ಹೆಸರನ್ನು ಗಳಿಸಿಕೊಂಡಿದ್ದಾರೆ.


ಬಿಪಿನ್‌ ಅವರ ಹಿನ್ನೆಲೆ


ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಕಾನೂರು ಗ್ರಾಮದವರಾದ ಚೊಟ್ಟೆಕ್ಮಾಡ ಬಿಪಿನ್ ಅವರು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ಪದವೀಧರರಾಗಿದ್ದು, ವನ್ಯಜೀವಿ ಮತ್ತು ಪ್ರಕೃತಿಯ ಬಗ್ಗೆ ತಮಗಿರುವ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಬೇಕೆಂದು ವನ್ಯಜೀವಿಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳುತ್ತಿದ್ದರು.


ಅವರು ತಮ್ಮ ಶಾಲಾ ಶಿಕ್ಷಣವನ್ನು ವಿರಾಜಪೇಟೆಯ ಸೇಂಟ್ ಆನ್ಸ್ ಶಾಲೆಯಲ್ಲಿ ಮತ್ತು ಸತ್ಯಸಾಯಿ ಲೋಕ ಸೇವಾ ಟ್ರಸ್ಟ್‌ನಲ್ಲಿ ಕಾಲೇಜು ಮುಗಿಸಿದರು. ಇವರ ಪೋಷಕರಾದ ಮೊಣ್ಣಪ್ಪ ಮತ್ತು ತಾರಾ ಮೊಣ್ಣಪ್ಪ ನಿವೃತ್ತ ಶಿಕ್ಷಕರಾಗಿದ್ದು, ಕಾನೂರಿನಲ್ಲಿ ನೆಲೆಸಿದ್ದಾರೆ.


ಇಂಜಿನಿಯರ್‌ನಿಂದ ಪರಿಸರಶಾಸ್ತ್ರಜ್ಞರಾದ ಬಿಪಿನ್‌


ಬಿಪಿನ್‌ ಅವರು ಚಿರತೆಗಳ ಮೇಲೆ ನಿಗಾ ಇರಿಸಿರುವ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ, ಸ್ಟಾರ್ ಆಫ್ ಮೈಸೂರು ಎಂಬ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಅವರು “ಆರ್‌ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ ಕೂಡಲೇ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕರೂ ಸಹ ನನ್ನ ಮನದ ಅಭಿಲಾಷೆ ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕೆಂಬುದು ಆಗಿತ್ತು ಎಂದಿದ್ದಾರೆ.


ಇದನ್ನೂ ಓದಿ: Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


“ಈ ಇಂಜಿನಿಯರ್‌ ಕೆಲಸ ಮಾಡುವಾಗ ನನಗೆ ಉಸಿರುಗಟ್ಟಿದಂತೆ ಭಾಸವಾಗುತ್ತಿತ್ತು. ಉತ್ತಮವಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ನಾನು 2004 ರಲ್ಲಿ ಬೆಂಗಳೂರಿನ ವನ್ಯಜೀವಿ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಣಾ ಮತ್ತು ಪರಿಸರ ತಂಡವನ್ನು ಸೇರಿಕೊಂಡೆ.


ಕರ್ನಾಟಕದಲ್ಲಿ ಹುಲಿಗಳು ಮತ್ತು ಅವುಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವ ಕೆಲಸ ಮಾಡಿದೆ. ಈ ಅವಧಿಯಲ್ಲಿ, ವನ್ಯಜೀವಿ ವಿಜ್ಞಾನ ಮತ್ತು ಪ್ರಕೃತಿ ಸಂರಕ್ಷಣೆಯಲ್ಲಿ ಶಿಕ್ಷಣ, ಉತ್ತಮ-ಸಜ್ಜುಗೊಳಿಸುವಿಕೆ ಮತ್ತು ತರಬೇತಿಯ ಅಗತ್ಯವಿದೆ ಎಂದು ನಾನು ಭಾವಿಸಿದೆ ಮತ್ತು ನಾನು ನನ್ನ M.Sc ಅನ್ನು ವನ್ಯಜೀವಿ ಜೀವಶಾಸ್ತ್ರದಲ್ಲಿ ಪೂರ್ಣಗೊಳಿಸಿದೆ” ಎಂದು ಬಿಪಿನ್‌ ಅವರು ಹೇಳಿದರು.


ಬಿಪಿನ್ ಅವರು ನಂತರ ತಮ್ಮ ಸ್ನಾತಕೋತ್ತರ ಪದವಿಗಾಗಿ 2008 ರಲ್ಲಿ ಬೆಂಗಳೂರಿನ ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರಕ್ಕೆ ಪ್ರವೇಶವನ್ನು ಪಡೆದರು. ಇದರ ನಂತರ 2011 ರಲ್ಲಿ ಡೆಹ್ರಾಡೂನ್‌ನ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸೇರಿಕೊಂಡರು ಮತ್ತು ಈಗ ಪ್ರಾಜೆಕ್ಟ್ ಚೀತಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


"ಈ ಯೋಜನೆಯ ಭಾಗವಾಗಿ, ಐದು ರಾಜ್ಯಗಳಾದ ರಾಜಸ್ಥಾನ, ಗುಜರಾತ್, ಛತ್ತೀಸ್ಗಢ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಇವುಗಳ ಸಂಪೂರ್ಣ ಭೂದೃಶ್ಯವನ್ನು ಕೂಲಂಕುಷವಾಗಿ ಅಧ್ಯಯನ ಮಾಡಲಾಗಿದೆ.


10 ಸ್ಥಳಗಳನ್ನು ಚಿರತೆ ಮರುಪರಿಚಯಕ್ಕೆ ಸೂಕ್ತವೆಂದು ಗುರುತಿಸಲಾಗಿದೆ ಮತ್ತು ಅವುಗಳಲ್ಲಿ ಐದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ, ಶಾಘರ್ ಭೂದೃಶ್ಯ ಮತ್ತು ರಾಜಸ್ಥಾನದ ಮುಕುಂದರ ಹಿಲ್ಸ್ ಟೈಗರ್ ರಿಸರ್ವ್ ಮತ್ತು ಮಧ್ಯಪ್ರದೇಶದ ನೌರದೇಹಿ ವನ್ಯಜೀವಿ ಅಭಯಾರಣ್ಯವನ್ನು ಆದ್ಯತೆಯ ಸ್ಥಳಗಳೆಂದು ಗುರುತಿಸಲಾಗಿದೆ” ಎಂದು ಬಿಪಿನ್ ಬಹಿರಂಗಪಡಿಸಿದರು.


ನ್ಯಾಯಾಲಯ ಪ್ರಕರಣ


ಈ ಯೋಜನಾ ಕಾರ್ಯವು ಮೇ 2012 ರಲ್ಲಿ, ಸಿಂಹಗಳನ್ನು ಕುನೋ ಅಭಯಾರಣ್ಯಕ್ಕೆ ಮರು ಪರಿಚಯಿಸುವ ಯೋಜನೆಯು ಅನೇಕ ಸಂಘರ್ಷಗಳಿಗೆ ನಾಂದಿಯಾಗಬಹುದು ಎಂಬ ಕಾರಣದಿಂದ ಈ ಕುನೋ ಅಭಯಾರಣ್ಯಕ್ಕೆ ಚಿರತೆಗಳನ್ನು ಮರುಪರಿಚಯಿಸುವ ಯೋಜನೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿತು.


ಇದನ್ನೂ ಓದಿ:  Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?


ಆದರೆ 2020 ರಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಯು ಮೇಲ್ವಿಚಾರಣೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್‌ ಡಾ. ಎಂ.ಕೆ ನೇತೃತ್ವದ ತಜ್ಞರ ಸಮಿತಿಯ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ತೆರವುಗೊಳಿಸಿತು.


ವನ್ಯಜೀವಿ ಸಂರಕ್ಷಣಾ ಕಾಯಿದೆಯ ವಾಸ್ತುಶಿಲ್ಪಿ ರಂಜಿತ್‌ ಸಿಂಗ್ ಅವರ ಆಫ್ರಿಕನ್ ಚಿರತೆಯನ್ನು ಭಾರತಕ್ಕೆ ಮರಳಿ ತರುವ ಯೋಜನೆ ಇದಾಗಿತ್ತು.


ನಮೀಬಿಯಾದಲ್ಲಿ ತರಬೇತಿ


ಚಿರತೆಗಳ ನಿರ್ವಹಣೆ, ಆವಾಸಸ್ಥಾನ ನಿರ್ವಹಣೆ, ಸಂಶೋಧನೆ, ವಿವಿಧ ಹಂತಗಳಲ್ಲಿ ಸಂರಕ್ಷಣಾ ವಿಧಾನಗಳು ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುವ ಗ್ರಾಮಸ್ಥರೊಂದಿಗೆ ಪ್ರಾಣಿಗಳ ಸಂಘರ್ಷವನ್ನು ತಪ್ಪಿಸುವುದು ಹೇಗೆ ಎಂಬ ಇತ್ಯಾದಿ ತರಬೇತಿಗಾಗಿ ಬಿಪಿನ್ ಅವರನ್ನು ಜೂನ್ 2022 ರಲ್ಲಿ ತಂಡದೊಂದಿಗೆ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಯಿತು.


“ನನ್ನ ತಂಡದೊಂದಿಗೆ ಮೂಲ ಅಧ್ಯಯನದ ನಂತರ ತಾಂತ್ರಿಕತೆಯ ಅಧ್ಯಯನಗಳನ್ನು ಮಾಡಿದ್ದೇವೆ. ಇದರ ನಂತರ ಆಡಳಿತಾತ್ಮಕ, ಹಣಕಾಸು, ಕಾನೂನು ಮತ್ತು ನೀತಿ ವಿಷಯಗಳಲ್ಲಿ ಅಗತ್ಯವಿರುವ ಸಹಾಯವನ್ನು ಒದಗಿಸುವುದು ಸೇರಿದಂತೆ ಅಗತ್ಯವಿರುವಾಗ ಎಲ್ಲ ಕೆಲಸವನ್ನು ಸಹ ನಾನು ಮಾಡಿದ್ದೇನೆ.


ಏಕೆಂದರೆ ಈ ಕೆಲಸ ನನಗಿಷ್ಟ. ಚಿರತೆಗಳ ಬಿಡುಗಡೆಯ ದಿನಗಳು ಹತ್ತಿರವಾಗುತ್ತಿದ್ದಂತೆ, ಭಾರತದಲ್ಲಿ ಮಳೆಗಾಲ ಆರಂಭವಾಗಿ, ಅನೇಕ ಅರಣ್ಯ ಪ್ರದೇಶಗಳಿಗೆ ಪ್ರವೇಶಿಸಲು ಕಷ್ಟವಾಗುತ್ತಿತ್ತು.


ಮಳೆಗಾಲವು ಭಾರತದಲ್ಲಿ ಚಿರತೆಗಳನ್ನು ಬಿಡಲು ಸೂಕ್ತ ಸಮಯ ಆಗಿಲ್ಲದ ಕಾರಣ, ಮಾನ್ಸೂನ್ ಮುಗಿಯುವವರೆಗೆ ಕಾಯುವುದು ಜಾಣತನದ ನಿರ್ಧಾರ ಆಗಿತ್ತು ”ಎಂದು ಅವರು ವಿವರಿಸಿದರು.


“ಸೆಪ್ಟೆಂಬರ್ ಸೂಕ್ತ ತಿಂಗಳು ಮತ್ತು ಈ ಸಂದರ್ಭ ಪ್ರಧಾನಿ ಮೋದಿಯವರ ಜನ್ಮದಿನವಾಗಿತ್ತು. ಮಧ್ಯಪ್ರದೇಶದ ಅರಣ್ಯ ಇಲಾಖೆ, NTCA ಮತ್ತು MoEF & CC ಯ ಅಧಿಕಾರಿಗಳು ವಿವಿಧ ಹಂತಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಈ ಯೋಜನೆಯನ್ನು ಸಮನ್ವಯಗೊಳಿಸಿದ್ದಾರೆ ಮತ್ತು ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ತಮ್ಮ ಪಾತ್ರವನ್ನು ಅವರು ಸಮರ್ಪಕವಾಗಿ ನಿರ್ವಹಿಸಿದ್ದಾರೆ” ಎಂದು ಬಿಪಿನ್‌ ಹೇಳಿದರು.


ಕುನೋ ರಾಷ್ಟ್ರೀಯ ಉದ್ಯಾನವನ


"ವಿಂಧ್ಯಾಚಲ ಪರ್ವತಗಳ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಕುನೋ ರಾಷ್ಟ್ರೀಯ ಉದ್ಯಾನವನವು 35 ಚಿರತೆಗಳನ್ನು ಹೊಂದುವಷ್ಟು ಸ್ಥಳಾವಕಾಶ ಇದೆ. ಇದು 748 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಅಲ್ಲಿ ಚಿರತೆಗಳು ತಮ್ಮ ಸುತ್ತಲಿನ 6,800 ಚ.ಕಿ.ಮೀ.ವರೆಗಿನ ಸೂಕ್ತ ಪ್ರದೇಶವನ್ನು ಹೊಂದಿವೆ.


ನಾವು ಕುನೋ ರಾಷ್ಟ್ರೀಯ ಉದ್ಯಾನವನವನ್ನು ಹೊರತುಪಡಿಸಿ ಇನ್ನೂ ನಾಲ್ಕು ಪ್ರದೇಶಗಳನ್ನು ಗುರುತಿಸಿದ್ದೇವೆ ಮತ್ತು ಈ ಚೀತಾ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಆಫ್ರಿಕಾದಿಂದ 50 ದೊಡ್ಡ ಚಿರತೆಗಳನ್ನು ತರುವ ಗುರಿಯನ್ನು ಹೊಂದಿದೆ.


ದೀರ್ಘಾವಧಿಯಲ್ಲಿ ದೇಶದಲ್ಲಿ ಕಾರ್ಯಸಾಧ್ಯವಾದ ಚೀತಾ ಮೆಟಾಪೋಪ್ಯುಲೇಷನ್ ಅನ್ನು ಸ್ಥಾಪಿಸುತ್ತದೆ ”ಎಂದು ಬಿಪಿನ್‌ ಅವರು ಹೇಳಿದರು. ಕುನೋ ರಾಷ್ಟ್ರೀಯ ಉದ್ಯಾನವನವು ಚಿರತೆಗಳಿಗೆ ಉತ್ತಮ ಬೇಟೆಯ ನೆಲೆಯನ್ನು ಹೊಂದಿದೆ, ಇದರಲ್ಲಿ ನಾಲ್ಕು ಕೊಂಬಿನ ಸಾರಂಗಾ, ಚಿಂಕಾರಾ, ನೀಲ್ಗೈ, ಕಾಡು ಹಂದಿ, ಮಚ್ಚೆಯುಳ್ಳ ಜಿಂಕೆ ಮತ್ತು ಸಾಂಬಾರ್ ಪ್ರಾಣಿಗಳು ಸಹ ಸೇರಿವೆ.


ಇದನ್ನೂ ಓದಿ:  Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!


ಚಿರತೆಗಳು ಭಾರತದಲ್ಲಿ ತೆರೆದ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳನ್ನು ಮತ್ತು ಅದರಲ್ಲಿ ಕ್ಷೀಣಿಸುತ್ತಿರುವ ವನ್ಯಜೀವಿಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ.


ಇದು ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಪರಿಸರ ವ್ಯವಸ್ಥೆಯನ್ನು ಕ್ರೋಢೀಕರಿಸಲು ಮತ್ತು ವರ್ಧಿಸಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ವಿವಿಧ ಜೀವನೋಪಾಯದ ಅವಕಾಶಗಳೊಂದಿಗೆ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಕೂಡ ಮಾಡುತ್ತದೆ.


"ಚೀತಾಗಳ ವ್ಯಾಪಕ ಬೇಟೆ ಮತ್ತು ಆವಾಸಸ್ಥಾನದ ನಷ್ಟವು ಅವುಗಳ ಅಳಿವಿಗೆ ಕಾರಣವಾಯಿತು. ʼಭಾರತದಲ್ಲಿ ಆಫ್ರಿಕನ್ ಚೀತಾ ಪರಿಚಯ ಯೋಜನೆ’ 2009 ರಲ್ಲಿ ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾದಿಂದ ಮೊದಲ ಬಾರಿಗೆ ಉದ್ದೇಶಿಸಲ್ಪಟ್ಟಿತು ಮತ್ತು ಕೊನೆಗೂ ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿಯನ್ನು ಭಾರತಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಬಿಪಿನ್‌ ಅವರು ಹೇಳಿದರು.


ಸಂತಸ ವ್ಯಕ್ತಪಡಿಸಿರುವ ಬಿಪಿನ್‌ ತಾಯಿ
ಬಿಪಿನ್‌ ಅವರು ಕೋರ್ ಪ್ರಾಜೆಕ್ಟ್ ಚೀತಾ ತಂಡದಲ್ಲಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಬಿಪಿನ್ ಅವರ ತಾಯಿ ತಾರಾ ಮೊಣ್ಣಪ್ಪ ಅವರು “ಬಿಪಿನ್ ಅವರ ಸಾಧನೆಗಳ ಬಗ್ಗೆ ಕುಟುಂಬವು ಹೆಮ್ಮೆಪಡುತ್ತದೆ” ಎಂದು ಸ್ಟಾರ್ ಆಫ್ ಮೈಸೂರುಗೆ ತಿಳಿಸಿದರು.

Published by:Ashwini Prabhu
First published: