ಕಾಂಗ್ರೆಸ್​-ಜೆಡಿಎಸ್​​ ನಡುವಿನ ಆಂತರಿಕ ಸಮಸ್ಯೆ ಸೋಲಿಗೆ ಕಾರಣ: ಮೈಸೂರು ಪರಾಜಿತ ಅಭ್ಯರ್ಥಿ ವಿಜಯಶಂಕರ್

ಸದ್ಯ ಪ್ರತಾಪ್​ ಸಿಂಹ 6,88,974, ವಿಜಯಶಂಕರ್​ಗೆ 548911 ಮತಗಳು ಲಭ್ಯವಾಗಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್​ ಎದುರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.

Ganesh Nachikethu
Updated:May 24, 2019, 4:52 PM IST
ಕಾಂಗ್ರೆಸ್​-ಜೆಡಿಎಸ್​​ ನಡುವಿನ ಆಂತರಿಕ ಸಮಸ್ಯೆ ಸೋಲಿಗೆ ಕಾರಣ: ಮೈಸೂರು ಪರಾಜಿತ ಅಭ್ಯರ್ಥಿ ವಿಜಯಶಂಕರ್
ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ
  • Share this:
ಮೈಸೂರು(ಮೇ.24): "ನನ್ನ ಸೋಲಿಗೆ ಕಾರಣವೇನು? ಎಂದು ವರದಿ ತಯಾರಿಸುತ್ತಿದ್ದೇನೆ. ಮೈತ್ರಿಯ ಆಂತರಿಕ ಸಮಸ್ಯೆಗಳನ್ನು ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ. ಏನಾದರೂ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿಗೆ ಲಾಭವಾಗಬಹುದಾದ ವಿಚಾರ ಇದ್ದರೆ ಹೇಳಬಹುದು. ಇದು ಸೋಲಿಗೆ ಕಾರಣವಾದ ಅನಾನುಕೂಲ ವಿಚಾರಗಳು. ಹಾಗಾಗಿ ಆಂತರಿಕ ವರದಿ ರಾಜ್ಯ ಕಾಂಗ್ರೆಸ್​ ನಾಯಕರಿಗೆ ನೀಡುತ್ತೇನೆ. ಸಾಧ್ಯವಾದಷ್ಟೂ ಮೈತ್ರಿಯೊಳಗಿನ ಅಸಮಾಧಾನ ಸರಿಪಡಿಸಿಕೊಂಡು ಸರ್ಕಾರ ಜೀವಂತವಾಗಿ ಇರಿಸಲು ಪ್ರಯತ್ನಿಸುತ್ತೇನೆ" ಎಂದು ಮೈಸೂರು-ಕೊಡಗು ಪರಾಜಿತ ಅಭ್ಯರ್ಥಿ ವಿಜಯಶಂಕರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಿಜಯಶಂಕರ್ ಅವರು, ಮೈತ್ರಿ ಒಳಗಿನ ಸಮಸ್ಯೆಯನ್ನ ಮಾಧ್ಯಮಗಳ‌ ಮುಂದೆ ಹೇಳಲು ಸಾಧ್ಯವಿಲ್ಲ. ನನ್ನ‌ ಹೇಳಿಕೆಯಿಂದ ಮೈತ್ರಿಗೆ ಅನುಕೂಲವಾಗಬೇಕು. ಲಾಭ ತರುವ ವಿಚಾರವಿದ್ದರೆ ಬಹಿರಂಗವಾಗಿ ಹೇಳುತ್ತೇನೆ. ಮನಸ್ಥಾಪಗಳನ್ನ ಬಹಿರಂಗವಾಗಿ ಹೇಳಿವುದಿಲ್ಲ ಎಂದು ಖಡಕ್​​ ಆಗಿಯೇ ಹೇಳಿದರು.

ಇನ್ನು ನಾನು ಹೇಳಬೇಕಾದ ವಿಚಾರ ನನ್ನ ನಾಯಕರಿಗೆ ಹೇಳುತ್ತೇನೆ. ಈಗಾಗಲೇ ಆಂತರಿಕ ವರದಿ ತಯಾರಿಗೆ ಸಿದ್ದತೆ ಮಾಡಿಕೊಂಡಿದ್ದೇನೆ. ಮೈತ್ರಿ ವ್ಯತ್ಯಾಸವಾಗಿದೆ, ಮಾನಸಿಕವಾಗಿ ನಾವು ಒಂದಾಗಿಲ್ಲ. ನಾಯಕನ‌ ಗುಣ ನುಡಿದಂತೆ ನಡೆಯುವುದು. ಇಲ್ಲಿ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಇಬ್ಬರ ನಡುವಿನ ಅಪನಂಬಿಕೆ ಕಾರಣದಿಂದಾಗಿ ನಷ್ಟವಾಗಿದೆ. ಸದ್ಯ ಅಪನಂಬಿಕೆ ಸರಿಪಡಿಸಿಕೊಳ್ಳಬೇಕು. ಇಲ್ಲವಾದರೇ ಮೈತ್ರಿ ಸರ್ಕಾರಕ್ಕೆ ಭಾರೀ ನಷ್ಟವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Lok Sabha Elections 2019: ಕಾಂಗ್ರೆಸ್​ ಪ್ರಣಾಳಿಕೆಯ ಮುಖ್ಯಾಂಶಗಳು

ಗುರುವಾರವೇ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇಲ್ಲಿನ ಮೈಸೂರಿನಿಂದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಸತತವಾಗಿ ಎರಡನೇ ಬಾರಿಗೆ ದೋಸ್ತಿ ಅಭ್ಯರ್ಥಿ ಎದುರಾಳಿ ಸಿ.ಎಚ್.ವಿಜಯಶಂಕರ್‌ ವಿರುದ್ಧ ಗೆದ್ದಿದ್ಧಾರೆ. ಹಾಲಿ ಸಂಸದ ಪ್ರತಾಪ್‌ ಸಿಂಹ, ಕಾಂಗ್ರೆಸ್ ಹಾಗೂ ದೋಸ್ತಿ ಅಭ್ಯರ್ಥಿ ವಿಜಯಶಂಕರ್‌ ವಿರುದ್ಧ ಮತ್ತೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಒಟ್ಟಾರೆ 22 ಅಭ್ಯರ್ಥಿಗಳು ಮೈಸೂರು - ಕೊಡಗು ಲೋಕಸಭೆ ಕ್ಷೇತ್ರದಲ್ಲಿ ನಿಂತಿದ್ದರು. ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಹಾಗೂ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ನಡುವೆ ನೇರ ಹಣಾಹಣಿ ಎದುರಾಗಿತ್ತು. ಸದ್ಯ ಪ್ರತಾಪ್​ ಸಿಂಹ 6,88,974, ವಿಜಯಶಂಕರ್​ಗೆ 548911 ಮತಗಳು ಲಭ್ಯವಾಗಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಮೈತ್ರಿ ಎದುರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'-----------
First published:May 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading