ಮಾಜಿ ಸಿಎಂ ಮಗ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್​​ ನೇರ ಕಾರಣ; ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ಎಂಟಿಬಿ ನಾಗರಾಜ್!

ರಾಜಕೀಯದಲ್ಲಿ ನನ್ನ ಎದುರು ಭೈರತಿ ಸುರೇಶ್​ ಬಚ್ಚಾ, ಅವನ ಬಂಡವಾಳ ನನಗೆ ಗೊತ್ತು. ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಲು ಬೈರತಿ ಸುರೇಶ್ ನೇರ ಕಾರಣ . ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಆತ. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದ ವ್ಯಕ್ತಿಗೆ ಕುಡಿಯುವುದನ್ನು ಕಲಿಸಿ ಸಾಯಿಸಿದ್ದು ನನಗೆ ಗೊತ್ತಿದೆ ಎಂದು ಭೈರತಿ ಸುರೇಶ್​ ವಿರುದ್ಧ ಎಂಟಿಬಿ ಕಿಡಿಕಾರಿದ್ದಾರೆ.

MAshok Kumar | news18-kannada
Updated:September 22, 2019, 3:18 PM IST
ಮಾಜಿ ಸಿಎಂ ಮಗ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್​​ ನೇರ ಕಾರಣ; ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ಎಂಟಿಬಿ ನಾಗರಾಜ್!
ಅನರ್ಹ ಶಾಸಕ ಎಂಟಿಬಿ ನಾಗಾರಾಜ್​​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಹೊಸಪೇಟೆ (ಸೆಪ್ಟೆಂಬರ್​.22); ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಾಯಕನಿಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಇನ್ನೂ ಭೈರತಿ ಸುರೇಶ್​ ರಾಜಕೀಯದಲ್ಲಿ ನನ್ನ ಎದುರು ಬಚ್ಚ. ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಆತನೆ ನೇರ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಶನಿವಾರ ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಎಂಟಿಬಿ ನಾಗರಾಜ್ ನಾಗರಹಾವು. ಅವರೇ ನಾನು ನಾಗರಾಜ್ ಅಲ್ಲ, ನಾಗರಾಜ ಎಂದಿದ್ದರು. ಬಾಯಲ್ಲಿ ನಿಂಬೆಹಣ್ಣು ಇಟ್ಕೊಂಡು ಡ್ಯಾನ್ಸ್ ಮಾಡ್ತಾರೆ. ಇದೆಲ್ಲಾ ಎಲ್ಲಿ ಕಲಿತುಕೊಂಡ್ರೋ ಗೊತ್ತಿಲ್ಲ.

ಎಂಟಿಬಿ ನಾಗರಾಜ್ ನನ್ನನ್ನು ಎದೆಯಲ್ಲಿ ಇಟ್ಟು, ಬಿಸಾಡಿದ್ದಾರಂತೆ. ಇಂಥವರು ರಾಜಕೀಯದಲ್ಲಿ ಇರೋಕೆ ಲಾಯಕ್ಕಾ? ನೀವೇ ಯೋಚಿಸಿ. ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಎಂಟಿಬಿ ನಾಗರಾಜ್​ಗೆ ಸರಿಯಾಗಿ ಬುದ್ಧಿ ಕಲಿಸಿ, ಎಂಟಿಬಿ ನಾಗರಾಜ್ ಸ್ಪರ್ಧೆ ಮಾಡಿದರೂ ಅಷ್ಟೇ, ಅವರ ಮಗ ಸ್ಪರ್ಧೆ ಮಾಡಿದರೂ ಅಷ್ಟೇ, ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಪಕ್ಷಕ್ಕೆ ದ್ರೋಹ ಮಾಡಿದ ಇಂತಹವರನ್ನು ಸುಮ್ಮನೆ ಬಿಡಬಾರದು” ಎಂದು ದೂಷಿಸಿದ್ದರು.

ಸಿದ್ದರಾಮಯ್ಯನವರ ಮಾತಿಗೆ ಇಂದು ತಿರುಗೇಟು ನೀಡಿರುವ ಎಂಟಿಬಿ ನಾಗರಾಜ್, “ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಹೊರಿಸಿರುವ ಆರೋಪಗಳೆಲ್ಲ ಶುದ್ಧ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬರುವ ಮುನ್ನವೇ ನಾನು ಎಂಎಲ್ಎ ಆಗಿದ್ದೆ. ನನಗೆ ಎಂಎಲ್ಎ ಟಿಕೆಟ್ ನೀಡಿದ್ದು ಎಸ್.ಎಂ. ಕೃಷ್ಣ ಅವರೇ ಹೊರತಿ ಸಿದ್ದರಾಮಯ್ಯ ಅಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುರುಬರನ್ನ ಗಣನೆಗೆ ತೆಗೆದು ಕೊಂಡಿರಲಿಲ್ಲ. ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣಬೈರೇಗೌಡ ರಂತಹ ರಾಜಕಾರಣಿಗಳ್ಯಾರು ಮೂಲ ಕಾಂಗ್ರೆಸಿಗರಲ್ಲ. ಇವರೆಲ್ಲ ಬೇರೆ ಕಡೆ ಮದುವೆಯಾಗಿ ಕಾಂಗ್ರೆಸ್ ಗೆ ಬಂದು ಸಂಸಾರ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಮಾಯ್ಯ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರಿಗೂ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಭೈರತಿ ಸುರೇಸ್ ಅವರ ಬಡ್ಡಿ ವಸೂಲಿ ಆರೋಪಕ್ಕೆ ತಿರುಗೇಟು ನೀಡಿರುವ ಅವರು, “ರಾಜಕೀಯದಲ್ಲಿ ನನ್ನ ಎದುರು ಅವನು ಬಚ್ಚಾ, ಅವನ ಬಂಡವಾಳ ನನಗೆ ಗೊತ್ತು. ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಸಾವನ್ನಪ್ಪಲು ಬೈರತಿ ಸುರೇಶ್ ನೇರ ಕಾರಣ . ರಾಕೇಶ್ ಸಿದ್ದರಾಮಯ್ಯನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್. ಇನ್ನೂ ನೂರು ವರ್ಷ ಬದುಕಿ ಬಾಳಬೇಕಿದ್ದ ವ್ಯಕ್ತಿಗೆ ಕುಡಿಯುವುದನ್ನು ಕಲಿಸಿ ಸಾಯಿಸಿದ್ದು ನನಗೆ ಗೊತ್ತಿದೆ” ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಅಂಕಿತ ಹಾಕಿದ್ದಾರೆ.

ಇದನ್ನೂ ಓದಿ : ಎಂಟಿಬಿ ನಾಗರಹಾವು ಇದ್ದಂಗೆ, ಬಾಯಲ್ಲಿ ನಿಂಬೆಹಣ್ಣು ಇಟ್ಕಂಡು ಡ್ಯಾನ್ಸ್ ಮಾಡ್ತಾರೆ; ಸಿದ್ದರಾಮಯ್ಯ ವ್ಯಂಗ್ಯ
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ