News18 India World Cup 2019

ಉಪಸಮರದಲ್ಲಿ ಬಿಜೆಪಿ ಜೊತೆ ಸಮಬಲ ಸಾಧಿಸಿದ ಮೈತ್ರಿಪಾಳಯ; ಬಿಜೆಪಿ ಸಂಖ್ಯಾಬಲ 105ಕ್ಕೇರಿಕೆ; ಮುಂದೇನು ಕಥೆ?

ಚಿಂಚೋಳಿಯ ಗೆಲುವಿನೊಂದಿಗೆ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 105ಕ್ಕೇರಿದಂತಾಗಿದೆ. ಬಹುಮತದ ಸನಿಹಕ್ಕೆ ಧಾವಿಸುತ್ತಿರುವ ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಏನು ನಡೆ ಇರಬಹುದೆಂಬ ಕುತೂಹಲವಿದೆ.

news18
Updated:May 23, 2019, 6:42 PM IST
ಉಪಸಮರದಲ್ಲಿ ಬಿಜೆಪಿ ಜೊತೆ ಸಮಬಲ ಸಾಧಿಸಿದ ಮೈತ್ರಿಪಾಳಯ; ಬಿಜೆಪಿ ಸಂಖ್ಯಾಬಲ 105ಕ್ಕೇರಿಕೆ; ಮುಂದೇನು ಕಥೆ?
ಮಾಜಿ ಸಿಎಂ ಯಡಿಯೂರಪ್ಪ
news18
Updated: May 23, 2019, 6:42 PM IST
ಬೆಂಗಳೂರು(ಮೇ 23): ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಹುತೇಕ ಕ್ಲೀನ್ ಸ್ವೀಪ್ ಮಾಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟು ಕಾಂಗ್ರೆಸ್ ಮಿಕ್ಕ ಕಡೆಯಲ್ಲೆಲ್ಲಾ ಸೋತಿದೆ. ಜೆಡಿಎಸ್ ಕೂಡ ಹಾಸನ ಬಿಟ್ಟು ಉಳಿದ ಕಡೆ ಸೋತಿದೆ. ಬಿಜೆಪಿ ಬರೋಬ್ಬರಿ 25 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದರೆ, ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿಪಾಳಯ ಹಾಗೂ ಬಿಜೆಪಿ ಸಮಗೌರವ ಸಂಪಾದಿಸಿವೆ. ಕುಂದಗೋಳದಲ್ಲಿ ದಿವಂಗತ ಸಿ.ಎಸ್. ಶಿವಳ್ಳಿ ಅವರ ಪತ್ನಿ ಹಾಗು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವು ಸಾಧಿಸಿದ್ಧಾರೆ. ಅತ್ತ, ಚಿಂಚೋಳಿಯಲ್ಲಿ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್ ಜಯಭೇರಿ ಭಾರಿಸಿದ್ದಾರೆ.

ಕುಂದಗೋಳದಲ್ಲಿ ಕಾಂಗ್ರೆಸ್ ಗೆದ್ದಿರುವುದು ಡಿಕೆ ಶಿವಕುಮಾರ್​ಗೆ ಪುಷ್ಟಿ ಸಿಕ್ಕಂತಾಗಿದೆ. ಕುಂದಗೋಳಕ್ಕೆ ಡಿಕೆಶಿ ಅವರನ್ನೇ ಚುನಾವಣಾ ಉಸ್ತುವಾರಿಯನ್ನಾಗಿಸಲಾಗಿತ್ತು. ಡಿಕೆಶಿ ಅವರು ರಾತ್ರಿ ಹಗಲೂ ಕ್ಷೇತ್ರದಲ್ಲೇ ಇದ್ದು ಎಲ್ಲವನ್ನೂ ನಿಭಾಯಿಸಿದರು. ಕ್ಷೇತ್ರದ ಬಿಜೆಪಿಯ ಕೆಲ ಕಾರ್ಯಕರ್ತರನ್ನು ತಮ್ಮತ್ತ ಸೆಳೆದುಕೊಂಡು ಗೆಲುವಿನ ದಾರಿಯನ್ನ ಸುಗಮಗೊಳಿಸುವಲ್ಲಿ ಅವರ ಪಾತ್ರ ಬಹಳ ಮಹತ್ವದ್ದು.

ಇದನ್ನೂ ಓದಿ: Mandya Election Result: ಜೋಡೆತ್ತು ಅಬ್ಬರಕ್ಕೆ ಮಂಕಾದ ನಿಖಿಲ್; ಯಶ್-ದರ್ಶನ್ ಬೆಂಬಲದಿಂದ ಗೆದ್ದರು ಸುಮಲತಾ

ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಅವರೇನೂ ಸಾಮಾನ್ಯ ಅಭ್ಯರ್ಥಿಯೇನಲ್ಲ. ಯಡಿಯೂರಪ್ಪ ಅವರ ಸಂಬಂಧಿಯಾದ ಚಿಕ್ಕನಗೌಡ್ರ ಅವರು ಹಿಂದಿನ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ ಸೋಲನುಭವಿಸಿದ್ದರು. ಜನರು ಅದೇ ಅನುಕಂಪದಲ್ಲಿ ಈ ಬಾರಿ ತಮ್ಮ ಕೈ ಹಿಡಿಯುತ್ತಾರೆಂದು ಭಾವಿಸಿದ್ದ ಚಿಕ್ಕನಗೌಡ್ರ ಅವರಿಗೆ ಈ ಬಾರಿ ನಿರಾಸೆಯಾಗಿದೆ.

ಕುಂದಗೋಳದಲ್ಲಿ ಪಡೆದ ಮತಗಳು:
1) ಕುಸುಮಾವತಿ ಶಿವಳ್ಳಿ(ಕಾಂಗ್ರೆಸ್)- 77,640
Loading...

2) ಎಸ್.ಐ. ಚಿಕ್ಕನಗೌಡ್ರ(ಬಿಜೆಪಿ)- 76,039

ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳು ಈ ಮೊದಲು ಕಾಂಗ್ರೆಸ್ ತೆಕ್ಕೆಯಲ್ಲಿದ್ದವು. ಈಗ ಚಿಂಚೋಳಿಯನ್ನು ಗೆಲ್ಲುವುದರೊಂದಿಗೆ ಬಿಜೆಪಿಗೆ ಒಂದು ಹೆಚ್ಚುವರಿ ಸ್ಥಾನ ಸಿಕ್ಕಂತಾಗಿದೆ. ಅಂದರೆ, ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 105ಕ್ಕೆ ಏರಿದೆ. ಇಬ್ಬರು ಪಕ್ಷೇತರ ಹಾಗೂ ಬಿಎಸ್​ಪಿ ಶಾಸಕರ ಬೆಂಬಲ ಸಿಗುವ ಸಾಧ್ಯತೆ ಇರುವುದರಿಂದ ಬಿಎಸ್​ವೈ ಅಂಡ್​ ಟೀಮ್​ನ ಬಲ 108ಕ್ಕೆ ಏರಬಹುದು. ಸರಕಾರ ರಚಿಸಲು ಬೇಕಾದ ಬಹುಮತವಾದ 113 ಸ್ಥಾನಗಳಿಗೆ 5 ಕೊರತೆಯಾಗಬಹುದು. ಕಾಂಗ್ರೆಸ್​ನ ರೋಷನ್ ಬೇಗ್ ಅವರು ಈಗಾಗಲೇ ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊರಹಾಕಿ ನರೇಂದ್ರ ಮೋದಿ ಪರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಅವರು ಯಾವಾಗ ಬೇಕಾದರೂ ಬಿಜೆಪಿಗೆ ಸೇರಬಹುದು ಎನ್ನುತ್ತವೆ ಮೂಲಗಳು. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಮತ್ತೊಮ್ಮೆ ಅಧಿಕಾರ ಹಿಡಿದಿರುವುದರಿಂದ ಮೈತ್ರಿಪಾಳಯದಿಂದ ಶಾಸಕರನ್ನು ಸೆಳೆಯುವುದು ಯಡಿಯೂರಪ್ಪಗೆ ಈಗ ಇನ್ನಷ್ಟು ಸುಲಭವಾಗಬಹುದು. ಆಪರೇಷನ್ ಕಮಲ ತಡೆಯುವ ಉತ್ಸಾಹ ಮೈತ್ರಿಪಾಳಯಕ್ಕೆ ಮೊದಲಿನಷ್ಟು ಇರುವ ಸಾಧ್ಯತೆ ಇಲ್ಲ. ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಹೊಸ ಬದಲಾವಣೆ ಸಾಧ್ಯತೆ ಇದೆ.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...