HOME » NEWS » State » BYADAGI CHILLI PRICE FALL DOWN IN MARKER FARMERS WORRIED SESR

ವಿಶ್ವಪ್ರಸಿದ್ಧ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕುಸಿತ: ಕೋವಿಡ್ ಹಾವಳಿಯಿಂದ ಮಾರುಕಟ್ಟೆ ಬಂದ್ ಆಗೋ ಆತಂಕದಲ್ಲಿ ರೈತರು..!

ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ಅಲೆ ಹೆಚ್ಚುತ್ತಿದ್ದು ಮತ್ತೆ ಮಾರುಕಟ್ಟೆ ಬಂದ್ ಆದರೆ ಹೇಗೆ ಅನ್ನೋ ಆತಂಕದಲ್ಲಿ ರೈತರು ಸಿಕ್ಕ ಬೆಲೆಗೆ ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ.

news18-kannada
Updated:April 17, 2021, 9:46 PM IST
ವಿಶ್ವಪ್ರಸಿದ್ಧ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕುಸಿತ: ಕೋವಿಡ್ ಹಾವಳಿಯಿಂದ ಮಾರುಕಟ್ಟೆ ಬಂದ್ ಆಗೋ ಆತಂಕದಲ್ಲಿ ರೈತರು..!
ಮೆಣಸಿನಕಾಯಿ
  • Share this:
ಹಾವೇರಿ (ಏ. 17):  ವಿಶ್ವಪ್ರಸಿದ್ಧ ಜಿಲ್ಲೆಯ ಬ್ಯಾಡಗಿಯ ಮೆನಸಿಣಕಾಯಿಗೆ ರಾಜ್ಯ ಮಾತ್ರವಲ್ಲ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಗ್ರಾಹಕರು ಹೆಚ್ಚಿರುವ ಹಿನ್ನಲೆ ಬ್ಯಾಡಗಿಯಲ್ಲಿ ವಾರಕ್ಕೆ ಎರಡು ಬಾರಿ ಮೆನಸಿಣಕಾಯಿ ಮಾರುಕಟ್ಟೆ ಇರುತ್ತದೆ. ಸೋಮವಾರ ಮತ್ತು ಗುರುವಾರ ಮೆನಸಿಣಕಾಯಿ ಮಾರಾಟ ಖರೀದಿ ನಡೆಯುತ್ತದೆ. ಗದಗ, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ರೈತರು ಮೆನಸಿಣಕಾಯಿ ಮಾರಾಟಕ್ಕೆ ತರುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಬ್ಯಾಡಗಿ ತಳಿಯ ಮೆನಸಿಣಕಾಯಿ ಮಾರ್ಕೆಟ್​ಗೆ ಬರುತ್ತದೆ. ವಾರದಲ್ಲಿ ಎರಡು ಬಾರಿ ನಡೆಯುವ ಮೆನಸಿಣಕಾಯಿ ಮಾರ್ಕೆಟ್​ಗೆ ಎರಡು ಲಕ್ಷಕ್ಕೂ ಅಧಿಕ ಚೀಲ ಮೆನಸಿಣಕಾಯಿ ಬರುತ್ತಿದೆ. ಬ್ಯಾಡಗಿ ತಳಿಯ ಮೆನಸಿಣಕಾಯಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ರೂ ರೈತರಿಗೆ ಸೂಕ್ತ ದರ ಸಿಗುತ್ತಿಲ್ಲ.

ಕಳೆದ ಒಂದು ಅಥವಾ ಎರಡು ತಿಂಗಳ ಹಿಂದೆ ಬ್ಯಾಡಗಿ ಮೆನಸಿಣಕಾಯಿಗೆ ಭರ್ಜರಿ ಬೆಲೆ ಇತ್ತು. ಕ್ವಿಂಟಲ್ ಗೆ ಮೂವತ್ತೈದು ಸಾವಿರ ಗೂಪಾಯಿವರೆಗೂ ದರವಿತ್ತು. ಆದರೆ ಈಗ ರೈತರಿಗೆ ಸಿಗುತ್ತಿರುವ ಬೆಲೆ ಕಡಿಮೆ ಆಗಿದೆ. ಈಗ ಹದಿನೈದು ಸಾವಿರ ರುಪಾಯಿಯಿಂದ ಇಪ್ಪತ್ತು, ಇಪ್ಪತ್ತೈದು ಸಾವಿರ ರೂಪಾಯಿವರೆಗೆ ದರ ಸಿಗುತ್ತಿದೆ. ಕಳೆದ ಒಂದೆರಡು ತಿಂಗಳಿಗೆ ಹೋಲಿಸಿದರೆ ಮೆನಸಿಣಕಾಯಿ ದರ ಕಡಿಮೆ ಆಗಿದೆ ಅಂತಾರೆ ಮೆನಸಿಣಕಾಯಿ ಬೆಳೆಗಾರ ಮಾಬುಸುಭಾನಿ.

ಬೇರೆ ಬ್ಯಾಡಗಿ ಹಾವಳಿ

ಕಳೆದ ಕೆಲವು ವರ್ಷಗಳಿಂದ ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ ಸೇರಿದಂತೆ ಹಲವೆಡೆ ಬ್ಯಾಡಗಿ ತಳಿಯ ಮೆನಸಿಣಕಾಯಿ ಬೆಳೆತಿದ್ದರು. ಆದರೆ ಈಗ ಈ ಭಾಗದಲ್ಲಿ ಮೆನಸಿಣಕಾಯಿ ಬೆಳೆಯುವವರ ಪ್ರಮಾಣ ಕಡಿಮೆ ಆಗಿದೆ. ಆದರೆ, ಈಗ ಧಾರವಾಡ, ಗದಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿ ಬ್ಯಾಡಗಿ ತಳಿಯ ಮೆನಸಿಣಕಾಯಿ ಬೆಳೆಯುತ್ತಿದ್ದಾರೆ. ಬೇರೆ ಕಡೆಗೆ ಹೋಲಿಸಿದರೆ ಬ್ಯಾಡಗಿ ಮಾರ್ಕೆಟ್​ನಲ್ಲಿ ಮೆನಸಿಣಕಾಯಿಗೆ ಸ್ವಲ್ಪ ಹೆಚ್ಚಿನ ದರ ಸಿಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳ ರೈತರು ಇಲ್ಲಿಗೆ ಹೆಚ್ಚಾಗಿ ಮೆನಸಿಣಕಾಯಿ ಮಾರಾಟಕ್ಕೆ ಬರುತ್ತಾರೆ. ಅದ್ರಲ್ಲೂ ಈಗ ಮಾರ್ಕೆಟ್ ತುಂಬ ಎಲ್ಲೆಲ್ಲೂ ಬ್ಯಾಡಗಿ ಮೆನಸಿಣಕಾಯಿ ಘಾಟು ಬರುತ್ತಿದೆ. ಕೆಂಪು ಕೆಂಪಾಗಿರೋ‌ ಮೆನಸಿಣಕಾಯಿ ರುಚಿಯಲ್ಲೂ ಸಖತ್ ಟೇಸ್ಟ್ ಆಗಿರುತ್ತದೆ. ಕಳೆದ ಕೆಲವು ದಿನಗಳಿಂದ ಮಾರ್ಕೆಟ್​ಗೆ ಹೆಚ್ಚಿನ ಪ್ರಮಾಣದ ಮೆನಸಿಣಕಾಯಿ ಬರ್ತಿದೆ. ಹೀಗಾಗಿ ದರದಲ್ಲಿ ಸ್ವಲ್ಪ ಕಡಿಮೆ ಆಗಿದೆ ಎನ್ನಲಾಗ್ತಿದೆ.ದರದಲ್ಲಿ ಕಡಿಮೆ ಆಗುತ್ತಿರುವುದು ದೂರದ‌ ಊರುಗಳಿಂದ ಮೆನಸಿಣಕಾಯಿ ಮಾರಾಟಕ್ಕೆ ತರುವ ರೈತರಿಗೆ ಕೊಂಚ ಹೊರೆಯಾಗುತ್ತಿದೆ. ಹೆಚ್ಚಿನ ದರ ಸಿಕ್ಕರೆ ಕೈ ತುಂಬ ಹಣ ಸಿಗುತ್ತ ಇದೆ. ಈಗ ದರದಲ್ಲಿ ಕೊಂಚ ಕಡಿಮೆ ಆಗಿರೋದರಿಂದ ರೈತರಿಗೆ ಕೈಗೆ ಬರುತ್ತಿರುವ ಉಳಿತಾಯದ ಹಣದ ಪ್ರಮಾಣ ಕಡಿಮೆ ಆಗಿದೆ. ಸಾಗಾಣಿಕೆ ವೆಚ್ಚ ಅದು ಇದು ಅಂತಾ ಖರ್ಚು ಹೆಚ್ಚಾಗಿ ದರ ಕಡಿ‌ಮೆ ಸಿಗುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ಅಲೆ ಹೆಚ್ಚುತ್ತಿದ್ದು ಮತ್ತೆ ಮಾರುಕಟ್ಟೆ ಬಂದ್ ಆದರೆ ಹೇಗೆ ಅನ್ನೋ ಆತಂಕದಲ್ಲಿ ರೈತರು ಸಿಕ್ಕ ಬೆಲೆಗೆ ಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ.

ಕಳೆದ ಒಂದು ಅಥವಾ ಎರಡು ತಿಂಗಳುಗಳ ಹಿಂದೆ ಮೆನಸಿಣಕಾಯಿ ದರ ಬಂಪರ್ ಬಂಪರ್ ಎನ್ನುವ ‌ಆಗಿತ್ತು. ಈಗ ಮಾರ್ಕೆಟ್​ನಲ್ಲಿ ಮೆನಸಿಣಕಾಯಿ ದರದಲ್ಲಿ ಕೊಂಚ ಪ್ರಮಾಣದ ಇಳಿಕೆ ಕಂಡಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಲಾಕ್ ಡೌನ್ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

(ವರದಿ: ಮಂಜುನಾಥ ತಳವಾರ)
Published by: Seema R
First published: April 17, 2021, 9:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories