ಬಸವಕಲ್ಯಾಣದತ್ತ ವಿಜಯೇಂದ್ರ ಪ್ರಯಾಣ; ಉಪಚುನಾವಣೆ ಘೋಷಣೆಗೂ ಮೊದಲು ತಾಲೀಮು ಆರಂಭ

ಈ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ  ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಖುದ್ದು ಈ ಮಾತನ್ನು ವಿಜಯೇಂದ್ರ ಅಲ್ಲಗಳೆದಿದ್ದರು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ರೈಲಿನಲ್ಲಿ ಬಸವಕಲ್ಯಾಣದತ್ತ ಪ್ರಯಾಣ ಬೆಳೆಸಿದ ಬಿ.ವೈ.ವಿಜಯೇಂದ್ರ.

ರೈಲಿನಲ್ಲಿ ಬಸವಕಲ್ಯಾಣದತ್ತ ಪ್ರಯಾಣ ಬೆಳೆಸಿದ ಬಿ.ವೈ.ವಿಜಯೇಂದ್ರ.

 • Share this:
  ಬೆಂಗಳೂರು; ಆರ್​ಆರ್​ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಬಿಜೆಪಿಗೆ ಹೆಸರೇ ಇಲ್ಲದ ಶಿರಾದಲ್ಲಿ ಬಿಜೆಪಿ ಗೆಲುವಿನ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಣತಂತ್ರ ಯಶಸ್ವಿಯಾಗಿತ್ತು. ಇದೀಗ ಎರಡು ಉಪಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅವರ ನಿಧನದಿಂದ ತೆರವಾಗಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರಕ್ಕೆ ಇನ್ನೇನು ಉಪಚುನಾವಣೆ ದಿನಾಂಕ ನಿಗದಿಯಾಗಲಿದೆ. ಅದಕ್ಕೂ ಮೊದಲೇ ಈ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಅದರಂತೆ ಇಂದು ವಿಜಯೇಂದ್ರ ಅವರೇ ಈ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದು, ಈಗಿನಿಂದಲೇ ರಣತಂತ್ರ ಎಣಿಯುವ ತಾಲೀಮು ಆರಂಭಿಸಿದ್ದಾರೆ. 

  ಇಂದು ಸಂಜೆ ಬೆಂಗಳೂರಿನಿಂದ ರೈಲಿನ ಮೂಲಕ ಬಿ.ವೈ. ವಿಜಯೇಂದ್ರ ಅವರು ಬಸವಕಲ್ಯಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ನಾಳೆಯಿಂದಲೇ ಬಸವಕಲ್ಯಾಣದಲ್ಲಿ ಚುನಾವಣಾ ರಣತಂತ್ರಕ್ಕೆ ಮುನ್ನುಡಿ ಬರೆಯಲಿದ್ದಾರೆ. ನಾಳೆ ಬೆಳಗ್ಗೆ ನಾಳೆ ಬೆಳಗ್ಗೆ 8 ಗಂಟೆಗೆ ಕಲಬುರ್ಗಿಗೆ ತೆರಳಲಿರುವ ಅವರು ಆನಂತರ ಅಲ್ಲಿಂದ ಬಸವಕಲ್ಯಾಣಕ್ಕೆ ತೆರಳಿ 11 ಗಂಟೆಗೆ ಬಸವಣ್ಣನವರ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 11.30ಕ್ಕೆ ಮರಾಠ ಸಮುದಾಯದ ಸಭೆ ನಡೆಸಲಿದ್ದಾರೆ. ಚುನಾವಣೆ ಘೋಷಣೆಗೂ ಮೊದಲೇ ತಾಲೀಮು ಆರಂಭಿಸಿರುವ ವಿಜಯೇಂದ್ರ ಬಸವಕಲ್ಯಾಣಕ್ಕೆ ಅಧಿಕೃತವಾಗಿ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

  ಇದನ್ನು ಓದಿ: ಆರ್​ಆರ್​ ನಗರ, ಶಿರಾ ನಂತರ ಎಲ್ಲರ ಗಮನ ಈಗ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯತ್ತ!

  ಈ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ  ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಖುದ್ದು ಈ ಮಾತನ್ನು ವಿಜಯೇಂದ್ರ ಅಲ್ಲಗಳೆದಿದ್ದರು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಒಮ್ಮೆ ಜೆಡಿಎಸ್ ನಿಂದ ಮತ್ತೊಮ್ಮೆ ಬಿಜೆಪಿಯಿಂದ ಶಾಸಕರಾಗಿರುವ ಖೂಬಾ ಅವರು ಕಳೆದ ವಿಧಾನಸಭೆಯಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

  ಕಾಂಗ್ರೆಸ್ ವಶದಲ್ಲಿದ್ದ ಈ ಕ್ಷೇತ್ರವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ಸಹ ಸಕಲ ಪ್ರಯತ್ನ ನಡೆಸುತ್ತಿದೆ. ಬಸವಕಲ್ಯಾಣದಲ್ಲಿ 55,000 ಲಿಂಗಾಯತ, 49,000 ಮುಸ್ಲಿಂ, 40,000 ಮರಾಠ, 26,000 ಕೋಲಿ, 15,000 ಕುರುಬ ಮತ್ತು ಸುಮಾರು 45,000 ಎಸ್ಸಿ ಮತದಾರರಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲೂ ಗುರುತಿಸಿಕೊಂಡಿದ್ದ ನಾರಾಯಣರಾವ್ ಅವರು ಅಹಿಂದ ವರ್ಗದ ನಾಯಕರಾಗಿದ್ದವರು. ನಾರಾಯಣರಾವ್ ಅವರ ಕುಟುಂಬಸ್ಥರಿಗೆ ತಪ್ಪಿದರೆ, ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದರೆ ಅನುಕಂಪದ ಜೊತೆಗೆ ಕಾಂಗ್ರೆಸ್ ಗೆಲುವಿಗೆ ಇದು ಸಹಕಾರಿಯಾಗಲಿದೆ ಎಂಬುದು ಕೈ ಮುಖಂಡರ ಲೆಕ್ಕಾಚಾರ.
  Published by:HR Ramesh
  First published: