HOME » NEWS » State » BY VIJAYENDRA SAYS CONGRESS HAS NO CANDIDATE FOR MASKI BYPOLL KGV SNVS

ಮಸ್ಕಿಯಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು: ಬಿ.ವೈ. ವಿಜಯೇಂದ್ರ ವ್ಯಂಗ್ಯ

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಯೇ ಸಿಗುತ್ತಿಲ್ಲ. ಅವರು ಯಾರನ್ನೇ ನಿಲ್ಲಿಸಿದರೂ ಗೆಲ್ಲುವುದು ಬಿಜೆಪಿಯೇ ಎಂದು ಬಿ.ವೈ. ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

news18-kannada
Updated:November 23, 2020, 2:59 PM IST
ಮಸ್ಕಿಯಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು: ಬಿ.ವೈ. ವಿಜಯೇಂದ್ರ ವ್ಯಂಗ್ಯ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
  • Share this:
ಬೆಂಗಳೂರು(ನ. 23): ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್​ಗೆ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದ್ರೆ ನಾಚಿಕೆಗೇಡು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯ ಮಾಡಿದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಸ್ಕಿಯಲ್ಲಿ ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಆ ಕ್ಷೇತ್ರವನ್ನ ಹೇಗೆ ಗೆಲ್ಲಬೇಕೆಂಬ ತಂತ್ರವನ್ನ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್​ಗೆ ಸೇರ್ಪಡೆಯಾಗಿರುವ ಬಸನಗೌಡ ತುರವಿಹಾಳ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ ಇದೆ ಎಂದು ಕುಟುಕಿದಂತಿದೆ. ವಿಜಯೇಂದ್ರ ಅವರು ಮಸ್ಕಿಯಲ್ಲಿ ಚುನಾವಣಾ ಪ್ರಚಾರದ ಹೊಣೆ ಹೊರುವುದು ಅನುಮಾನ. ಅವರು ಇಂದು ಹೇಳಿದ ಪ್ರಕಾರ, ಬಸವ ಕಲ್ಯಾಣ ಕ್ಷೇತ್ರದಲ್ಲಿ ಸಂಘಟನೆ ಮಾಡಲು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರಂತೆ. ಈ ಬಗ್ಗೆ ಮಾತನಾಡಿದ ಅವರು, ತನಗೆ ಬಸವಕಲ್ಯಾಣ ಕಡೆ ಓಡಾಡಲು ಸೂಚಿಸಲಾಗಿದೆ. ಭಗವಂತ್ ಖೂಬಾ ಮತ್ತು ನಾನು ಬಸವಕಲ್ಯಾಣದಲ್ಲಿ ಕೆಲಸ ಮಾಡುತ್ತೇವೆ. ಅಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಡಿಸೆಂಬರ್​ವರೆಗೂ ಶಾಲೆಗಳ ಪುನಾರಂಭ ಇಲ್ಲ: ತಾಂತ್ರಿಕ ಸಮಿತಿ ಸಲಹೆ ಸ್ವೀಕರಿಸಿದ ರಾಜ್ಯ ಸರ್ಕಾರ

ಭಗವಂತ್ ಖೂಬಾ ಅವರು ಕಳೆದ ಬಾರಿ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು. ಈ ಬಾರಿಯೂ ಬಿಜೆಪಿ ಟಿಕೆಟ್​ಗೆ ಪ್ರಯತ್ನ ಮಾಡಿದ್ಧಾರೆ. ಈ ಬಗ್ಗೆ ಹೈಕಮಾಂಡ್ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇದೇ ವೇಳೆ, ಬಿ.ವೈ. ವಿಜಯೇಂದ್ರ ಅವರೇ ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಆಗುತ್ತಾರೆಂಬ ವದಂತಿಗಳಿದ್ದವು. ಆದರೆ, ವಿಜಯೇಂದ್ರ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಖೂಬಾ ಅವರೇ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇದೇ ವೇಳೆ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ನಿರ್ಧಾರ ವಿರೋಧಿಸಿ ಡಿಸೆಂಬರ್ 5ರಂದು ಬಂದ್ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಕನ್ನಡ ಸಂಘಟನೆಗಳು ತಪ್ಪು ತಿಳಿವಳಿಕೆ ಇಟ್ಟುಕೊಂಡಿವೆ ಎಂದರು.

ಇದನ್ನೂ ಓದಿ: ಭೂ ಸೇನೆ ಅಥವಾ ಅಂಬೇಡ್ಕರ್ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟ ಶಾಸಕ ದುರ್ಯೋಧನ ಐಹೊಳೆ

ಮರಾಠಾ ನಿಗಮವನ್ನು ಭಾಷಾಧಾರಿತವಾಗಿ ಮಾಡಿಲ್ಲ. ಮರಾಠಿಗರು ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ವಾಸವಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಕಲ್ಪನೆಗಳು ಬೇಡ. ನಿಗಮ ರಚನೆಯನ್ನು ಭಾಷೆಗೆ ಕನೆಕ್ಟ್ ಮಾಡುವುದು ಎಷ್ಟು ಸರಿ? ಹಿಂದೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತಿರುವಳ್ಳುವರ್ ಮತ್ತು ಸರ್ವಜ್ಞರ ಪ್ರತಿಮೆಗಳನ್ನ ನಿರ್ಮಿಸುವ ಮೂಲಕ ಮುಖ್ಯಮಂತ್ರಿಗಳು ಎರಡೂ ರಾಜ್ಯಗಳ ದಶಕಗಳ ವಿವಾದವನ್ನು ಬಗೆಹರಿಸಿದರು. ಈಗ ಮರಾಠಾ ವಿಚಾರಕ್ಕೆ ತಪ್ಪು ಕಲ್ಪನೆ ಮೂಡಿದೆ. ಇದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಭಿಪ್ರಾಯಪಟ್ಟರು.ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: November 23, 2020, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories