ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪಗಿಂತ ಮಗ ಬಿ. ವೈ ವಿಜಯೇಂದ್ರ ಪ್ರಭಾವಿ: ಹೇಗಂತೀರಾ? ಇಲ್ಲಿ ಓದಿ..

ಇನ್ನು ವಿಜಯೇಂದ್ರರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಗೋಪಾಲಯ್ಯ, ಬಿಜೆಪಿ ಸೇರಿದ ನಂತರ ಆಗ್ಗಾಗ ಇಲ್ಲಿಗೆ ಬಂದು ಹೋಗುತ್ತೇನೆ. ವಿಜಯೇಂದ್ರ ನನಗೆ ಉತ್ತಮ ಸ್ನೇಹಿತರು ಎಂದರು.

ಬಿಎಸ್​ ಯಡಿಯೂರಪ್ಪ- ವಿಜಯೇಂದ್ರ

ಬಿಎಸ್​ ಯಡಿಯೂರಪ್ಪ- ವಿಜಯೇಂದ್ರ

  • Share this:
ಬೆಂಗಳೂರು(ಫೆ.05): ನಗರದ ಹೃದಯ ಭಾಗದಲ್ಲಿರುವ ಆ ಮನೆಗೆ ಇಂದು ಸಚಿವಾಕಾಂಕ್ಷಿಗಳ ದಂಡೇ ಬಂದಿತ್ತು. ಇವರೊಂದಿಗೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೆಲವು ಶಾಸಕರು ಕೂಡ ಆಗಮಿಸಿದ್ದರು. ಹಾಗೆಯೇ ಡಿಸಿಎಂ ಕೂಡ ಈ ಮನೆಗೆ ಭೇಟಿ ನೀಡಿದ್ದರು. ಇಷ್ಟು ಶಾಸಕರು ಭೇಟಿ ಮಾಡಲು ಬಂದದ್ದು ಯಾರನ್ನು ಗೊತ್ತಾ? ಅವರೇ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ.

ಹೌದು, ಬಿ ವೈ ವಿಜಯೇಂದ್ರ  ಸದ್ಯ ಬಿಜೆಪಿಯ ಯುವ ಮೋರ್ಚಾ ಪ್ರಾಧಾನ ಕಾರ್ಯದರ್ಶಿ. ಜತೆಗೆ ತನ್ನ ತಂದೆ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ನಿರ್ವಹಣೆಯೂ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲೂ ಬಿ.ವೈ ವಿಜೇಯಂದ್ರ ತೆರೆಯ ಹಿಂದು ನಿಂತು ಕೆಲಸ ಮಾದ್ದರು.

ನಗರದ ಶಿವಾನಂದ ಸರ್ಕಲ್​​​ನಲ್ಲಿರುವ ವಿಜಯೇಂದ್ರರವರ ಖಾಸಗಿ ನಿವಾಸಕ್ಕೆ ಸಚಿವರಾಗಬೇಂದುಕೊಂಡಿದ್ದ ಶಾಸಕಾರದ ಚಂದ್ರಪ್ಪ , ಶಂಕರ್ ಪಾಟೀಲ್ , ಶಿವರಾಜ್ ಪಾಟೀಲ್, ಗೋಪಾಲಯ್ಯ , ಸಿಪಿ ಯೋಗೇಶ್ವರ್ , ಎಂಟಿಬಿ ನಾಗರಾಜ್​, ರಾಮನಗರ ಬಿಜೆಪಿ ಮುಖಂಡ ರುದ್ರೇಶ್ ಸೇರಿದಂತೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಬಂದಿದ್ದರು. ಹೀಗೆ ಗಣ್ಯರು ವಿಜೇಯಂದ್ರರ ಭೇಟಿಗೆ ಬರಲು ಮುಖ್ಯ ಕಾರಣವೇ ಸಂಪುಟ ವಿಸ್ತರಣೆ ವಿಚಾರ. ಅಷ್ಟರ ಮಟ್ಟಿಗೆ ವಿಜೇಯಂದ್ರ ಇತ್ತೀಚಿನ ರಾಜಕಾರಣದಲ್ಲಿ ಪವರ್ ಪುಲ್ ಆಗಿದ್ದಾರೆ.

ಇದನ್ನೂ ಓದಿ: ಗೋವನ್ನು ತಿನ್ನುವ ಹುಲಿಗಳಿಗೆ ಘೋರಶಿಕ್ಷೆ: ಗೋವಾ ಶಾಸಕ ಚರ್ಚಿಲ್ ಅಲೆಮಾವೊ

ಇನ್ನು ವಿಜಯೇಂದ್ರರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಗೋಪಾಲಯ್ಯ, ಬಿಜೆಪಿ ಸೇರಿದ ನಂತರ ಆಗ್ಗಾಗ ಇಲ್ಲಿಗೆ ಬಂದು ಹೋಗುತ್ತೇನೆ. ವಿಜಯೇಂದ್ರ ನನಗೆ ಉತ್ತಮ ಸ್ನೇಹಿತರು ಎಂದರು.

ಸಿಎಂ ಪುತ್ರ ಬಿ.ವೈ ವಿಜಯೇಂದ್ರರನ್ನು ಸಚಿವಾಕಾಂಕ್ಷಿಗಳು ಭೇಟಿ ಮಾಡುತ್ತಿರುವು ಕೆಲವು ಬಿಜೆಪಿ ನಾಯಕರನ್ನು ಕೆರಳಿಸಿದೆ ಎಂಬ ಮಾತುಗಳು ಕೇಳಿ ಬಂದವು. ಈ ಬೆನ್ನಲ್ಲೇ ದೆಹಲಿಯಲ್ಲಿ ಮಾಧ್ಯಮದ ಜತೆಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​, ಶಾಸಕರು ವಿಜಯೇಂದ್ರನನ್ನು ಭೇಟಿ‌ ಮಾಡಿದರೆ ತಪ್ಪೇನು. ವಿಜಯೇಂದ್ರ ಯುವ ಮೋರ್ಚಾ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಶಾಸಕರು ಅವರನ್ನು ಭೇಟಿ ಮಾಡಿ ಕ್ಯಾಬಿನೆಟ್​​ ವಿಚಾರ ಚರ್ಚೆ ಮಾಡ್ತಾರೆ ಅನ್ನೋದು ಸರಿಯಿಲ್ಲ ಎಂದರು. ಆದರೀಗ ಸಂಪುಟ ವಿಸ್ತರಣೆ ವಿಚಾರದಲ್ಲಿ ಜೂನಿಯರ್ ಯಡಿಯೂರಪ್ಪರ ಮಾತಿಗೆ ಅಷ್ಟೊದ್ ಬೆಲೆ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ.
First published: