HOME » NEWS » State » BY VIJAYENDRA NOT CONTEST IN BASAVA KALYANA CONSTITUENCY SAYS MINISTER ST SOMASHEKAR LG

ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ; ಸಚಿವ ಎಸ್​.ಟಿ. ಸೋಮಶೇಖರ್ ಸ್ಪಷ್ಟನೆ

ಸಚಿವ ಸಂಪುಟ ವಿಸ್ತರಣೆ  ಮುಖ್ಯಮಂತ್ರಿ ಪರಮಾಧಿಕಾರ. ಎಚ್.ವಿಶ್ವನಾಥ ಹಿರಿಯರು. ಅವರಿಗೆ ರಾಜಕೀಯದಲ್ಲಿ ಅನುಭವವಿದೆ. ಇನ್ನೂ ಮಂತ್ರಿ ಮಂಡಲ ವಿಸ್ತರಿಸಿಲ್ಲ. ಅದರ ಬಗ್ಗೆ ಮಾತನಾಡುವ ಅಧಿಕಾರ ಸಚಿವರಾಗಲಿ, ಶಾಸಕರಿಗಾಗಲಿ ಇಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

news18-kannada
Updated:November 13, 2020, 1:21 PM IST
ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ; ಸಚಿವ ಎಸ್​.ಟಿ. ಸೋಮಶೇಖರ್ ಸ್ಪಷ್ಟನೆ
ಎಸ್.ಟಿ. ಸೋಮಶೇಖರ್
  • Share this:
ಧಾರವಾಡ(ನ.13): ಬಸವಕಲ್ಯಾಣದ ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸಲ್ಲ ಎಂದು ಸ್ವತಃ ಸಿಎಂ ಯಡಿಯೂರಪ್ಪರೇ ಹೇಳಿದ್ದು, ವಿಜಯೇಂದ್ರ ಸ್ಪರ್ಧಿಸಲ್ಲ ಎಂದಿದ್ದಾರೆ ಎಂದು ಸಹಕಾರ ಖಾತೆ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವ ಕಲ್ಯಾಣದಿಂದ ಯಾರು ಸ್ಪರ್ಧೆ ಮಾಡಬೇಕೆಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ರಮೇಶ ಜಾರಕಿಹೊಳಿ ಅವರು ಶಾಸಕರೊಂದಿಗೆ ನಡೆಸಿದ ಸಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಿದವರು ಬಿಜೆಪಿ ಶಾಸಕರೇ ಹೊರತು ಬೇರೆ ಯಾರೂ ಅಲ್ಲ. ಅವರು ಸಭೆ ನಡೆಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಹೇಳಿದರು.

ಹಸಿರು ಪಟಾಕಿ ಹಚ್ಚಿ ದೀಪಾವಳಿ ಆಚರಿಸಿ; ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮನವಿ

ಸಚಿವ ಸಂಪುಟ ವಿಸ್ತರಣೆ  ಮುಖ್ಯಮಂತ್ರಿ ಪರಮಾಧಿಕಾರ. ಎಚ್.ವಿಶ್ವನಾಥ ಹಿರಿಯರು. ಅವರಿಗೆ ರಾಜಕೀಯದಲ್ಲಿ ಅನುಭವವಿದೆ. ಇನ್ನೂ ಮಂತ್ರಿ ಮಂಡಲ ವಿಸ್ತರಿಸಿಲ್ಲ. ಅದರ ಬಗ್ಗೆ ಮಾತನಾಡುವ ಅಧಿಕಾರ ಸಚಿವರಾಗಲಿ, ಶಾಸಕರಿಗಾಗಲಿ ಇಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ. ಸಿಬಿಐ ಕಾನೂನಡಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Published by: Latha CG
First published: November 13, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories