news18-kannada Updated:November 10, 2020, 1:52 PM IST
ಸಚಿವ ಶ್ರೀರಾಮುಲು.
ಬೆಂಗಳೂರು(ನವೆಂಬರ್. 10): ಬಿಜೆಪಿ ಪಕ್ಷಕ್ಕೆ ಬಿ ವೈ ವಿಜಯೇಂದ್ರ ಅವರು ಬಾಹುಬಲಿ ಇದ್ದಂತೆ ಅವರು ಹೋದ ಕಡೆ ಎಲ್ಲಾ ಕಡೆ ಗೆಲ್ಲಿಸಿಕೊಂಡು ಬರುತ್ತಿದ್ದಾರೆ ಎಂದು ವಿಜಯೇಂದ್ರರನ್ನು ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ಹಾಡಿ ಹೊಗಳಿದರು . ಮುಖ್ಯಮಂತ್ರಿ ಗಳು ಮತ್ತು ಅವರ ಆಡಳಿತದ ಮೇಲೆ ಜನ ನಂಬಿಕೆ ಇಟ್ಟಿದ್ದರು. ಆಕಾರಣದಿಂದ ಇವತ್ತು ನಾವು ಗೆಲ್ಲುತ್ತಿದ್ದೇವೆ. ನಮ್ಮ ಯುವ ನಾಯಕ ವಿಜಯೇಂದ್ರ ಮುಂದಾಳತ್ವದಲ್ಲಿ ಗೆಲುವಾಗುತ್ತಿದೆ. ನಾನು ಹಿಂದೆ ಒಂದು ಮಾತು ಹೇಳಿದ್ದೆ ವಿಜಯೇಂದ್ರ ಎಲ್ಲೇ ಹೊದರು ಗೆಲ್ಲುತ್ತಾರೆ ಅಂತ ಹೇಳಿದ್ದೆ ಅದರಂತೆ ಗೆಲುವು ಆಗುತ್ತಿದೆ ಎಂದು ತಿಳಿಸಿದರು. ಶಿರಾ ಹಾಗೂ ಆರ್.ಆರ್ ನಗರ ಉಪ ಚುನಾವಣೆ ಫಲಿತಾಂಶ ಹೊರ ಬರುತ್ತಿದೆ .ಈಗಾಗಲೇ ಆರ್.ಆರ್.ನಗರ ಅಭ್ಯರ್ಥಿ ಮುನಿರತ್ನ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಆರ್ ಆರ್ ನಗರದಲ್ಲಿ ಈಗಾಗಲೇ 20ನೇ ಸುತ್ತು ಮುಕ್ತಾಯವಾಗಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ 1 ಲಕ್ಷಕ್ಕೂ ಅಧಿಕ ಮತಗಳಿಸಿದ್ದು, 44 ಸಾವಿರ ಮತಗಳ ಮುನ್ನಡೆಗಳಿಸಿದ್ದಾರೆ. ಮುನಿರತ್ನ ಗೆಲ್ಲವು ಬಹುತೇಕ ಖಚಿತವಾಗಿದೆ. ಕೈಅಭ್ಯರ್ಥಿ ಕುಸುಮಾ 58 ಸಾವಿರ ಮತಗಳಿಸಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಚುನಾವಣೆ ನಂತರ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎನ್ನುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಮಾತನಾಡುವುದಕ್ಕೆ ಇನ್ನೇನಿದೆ ಮುಖ್ಯಮಂತ್ರಿ ಕುರ್ಚಿಯನ್ನು ಮ್ಯೂಸಿಕಲ್ ಚೇರ್ ಎನ್ನುವ ರೀತಿಯಲ್ಲಿ ಮಾತನಾಡಿದ್ರು. ಆದರೆ, ಈಗ ಫಲಿತಾಂಶ ಬಂದಿದೆ ಅವರು ಹೇಳಿದ್ದು ಎಲ್ಲಾ ಸುಳ್ಳಾಗಿದೆ ಎಂದರು
ಸಿದ್ದಾರಾಮಯ್ಯ ಅವರ ಜ್ಯೋತೀಷ್ಯದ ಅಂಗಡಿ ಮುಚ್ಚಿದೆ : ಅಶೋಕ್
ಕರ್ನಾಟಕ ದ ಜನ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಶಬ್ಬಾಶ್ ಗಿರಿ ಕೊಟ್ಟಿದ್ದಾರೆ. ಬಿಎಸ್ ವೈ ಇನ್ನು ಎರಡು ವರ್ಷ ಬಿಎಸ್ ವೈ ಮುಖ್ಯಮಂತ್ರಿ ಆಗಿರಲಿ ಅಂತ ಆಶಿಸಿದ್ದಾರೆ. ಸಿದ್ದರಾಮಯಯ್ಯ ಅವರ ಬುಡ ಅಲ್ಲಾಡುತ್ತಿದೆ. ಕಾಂಗ್ರೆಸ್ ನವರು ಯೋಚನೆ ಮಾಡಬೇಕು. ಸಿದ್ದಾರಮಯ್ಯ ಬೇಕಾ ಇಲ್ಲ ಡಿಕೆ ಶಿವಕುಮಾರ್ ಬೇಕಾ ಅಂತ. ಸಿದ್ದಾರಾಮಯ್ಯ ಅವರ ಜ್ಯೋತೀಷ್ಯದ ಅಂಗಡಿ ಮುಚ್ಚಿದೆ. ಅವರು ಪದೇ ಪದೇ ಹೇಳ್ಳುತ್ತಿದ್ದರು ಬೈ ಎಲೆಕ್ಷನ್ ನಂತರ ಸಿಎಂ ಬದಲಾಗ್ತಾರೆ ಅಂತ ಅದು ಸುಳ್ಳಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
Published by:
G Hareeshkumar
First published:
November 10, 2020, 1:52 PM IST