BS Yediyurappa ಚುನಾವಣಾ ನಿವೃತ್ತಿ ಬಗ್ಗೆ ಪುತ್ರನ ಎಕ್ಸ್‌ಕ್ಲೂಸಿವ್ ಮಾತು; ನನ್ನ ತಂದೆ ಮತ್ತು ಪಕ್ಷ ಎರಡು ಕಣ್ಣಿದ್ದಂತೆ ಎಂದ ವಿಜಯೇಂದ್ರ

ಬಿ.ಎಸ್. ಯಡಿಯೂರಪ್ಪ ಈ ಬಾರಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಶಿಕಾರಿಪುರದಿಂದ ಕಣಕ್ಕಿಳಿಸುವ ಬಗ್ಗೆ ಮಾತನಾಡಿದ್ದಾರೆ. ಬಿಎಸ್‌ವೈ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ತಮ್ಮ ತಂದೆಯವರ ನಿರ್ಧಾರದ ಬಗ್ಗೆ ಅವರ ಪುತ್ರ ಬಿ.ವೈ. ವಿಜಯೇಂದ್ರ ನ್ಯೂಸ್ 18 ಜೊತೆ Exclusive ಆಗಿ ಮಾತನಾಡಿದ್ದಾರೆ.

ಬಿವೈ ವಿಜಯೇಂದ್ರ

ಬಿವೈ ವಿಜಯೇಂದ್ರ

  • Share this:
ಬೆಂಗಳೂರು: ಹಿರಿಯ ರಾಜಕಾರಣಿ (Senior Politician), ರಾಜ್ಯ ರಾಜಕೀಯದಲ್ಲಿ ಅಪಾರ ಅನುಭವಿ, ಮಾಜಿ ಸಿಎಂ (Former CM) ಬಿ.ಎಸ್. ಯಡಿಯೂರಪ್ಪ (BS Yediyurappa) ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. 1983ರಿಂದ ಒಟ್ಟು 8 ಬಾರಿ ಶಿವಮೊಗ್ಗದ (Shivamogga) ಶಿಕಾರಿಪುರ (Shikaripur) ಕ್ಷೇತ್ರದಿಂದ ಗೆಲುವು ಸಾಧಿಸುತ್ತಿರುವ ಬಿಎಸ್‌ವೈ, ಈ ಬಾರಿ ಚುನಾವಣಾ ರಾಜಕೀಯದಿಂದ ನಿವೃತ್ತಿ (election retirement) ಘೋಷಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ತಮ್ಮ ಪುತ್ರ ಬಿವೈ ವಿಜಯೇಂದ್ರ (BY Vijayendra) ಅವರನ್ನು ಶಿಕಾರಿಪುರದಿಂದ ಕಣಕ್ಕಿಳಿಸುವ ಬಗ್ಗೆ ಮಾತನಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ (State Politics) ಭಾರೀ ಸಂಚಲನ ಮೂಡಿಸಿದೆ. ಇನ್ನು ತಂದೆ ಬಿಎಸ್‌ವೈ ಅವರ ಈ ನಿರ್ಧಾರದ ಬಗ್ಗೆ ಅವರ ಪುತ್ರ ಬಿವೈ ವಿಜಯೇಂದ್ರ ನ್ಯೂಸ್ 18 (News18) ಜೊತೆ ಎಕ್ಸ್‌ಕ್ಸೂಸಿವ್ (Exclusive) ಆಗಿ ಮಾತನಾಡಿದ್ದಾರೆ.

 “ನನ್ನ ತಂದೆ ಮತ್ತು ಪಕ್ಷ ನನ್ನ ಎರಡು ಕಣ್ಣುಗಳಿದ್ದಂತೆ”

 ಶಿಕಾರಿಪುರ ಸ್ಪರ್ಧೆಯ ಬಗ್ಗೆ ನ್ಯೂಸ್ 18 ಜೊತೆ ಬಿವೈ ವಿಜಯೇಂದ್ರ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಪಕ್ಷ ಏನನ್ನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ. ಏನೇ ಮಾಡಿದರೂ ತಂದೆಯವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುತ್ತೇನೆ ಎಂದಿದ್ದಾರೆ. ಇನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ತಂದೆ ಮತ್ತು ಪಕ್ಷ ನನ್ನ ಎರಡು ಕಣ್ಣುಗಳಿದ್ದಂತೆ. ಕೇವಲ ಒಬ್ಬರಿಂದ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ” ಅಂತ ಹೇಳಿದ್ದಾರೆ. ವರುಣಾ ಅಥವಾ ಚಾಮರಾಜನಗರದಿಂದ ನಾನು ಸ್ಪರ್ಧಿಸುತ್ತೇನೆ ಎನ್ನಲಾಗಿತ್ತು. ಆದರೆ ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಅಂತ ವಿಜಯೇಂದ್ರ ಹೇಳಿದ್ದಾರೆ.

 ಶಿಕಾರಿಪುರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಡ

 ಈ ಹಿಂದೆ ಶಿಕಾರಿಪುರದಿಂದ ಯಾರೇ ಸ್ಪರ್ಧೆ ಮಾಡಿದ್ರೂ ಅವರನ್ನು ಬೆಂಬಲಿಸುತ್ತೇನೆ ಅಂತ ಯಡಿಯೂರಪ್ಪ ಹೇಳಿದ್ದರು. ಆದರೆ ಬಿಎಸ್‌ವೈ ಸ್ಪರ್ಧಿಸದಿದ್ದರೆ ವಿಜಯೇಂದ್ರ ಅವರೇ ಸ್ಪರ್ಧಿಸಬೇಕು ಅಂತ ಸ್ಥಳೀಯ ಮುಖಂಡರು, ಕಾರ್ಯಕರ್ತರು ಒತ್ತಡ ಹೇರಿದ್ದರು. ಹೀಗಾಗಿ ಶಿಕಾರಿಪುರದಿಂದ ನಾನೇ ಸ್ಪರ್ಧಿಸೋ ಬಗ್ಗೆ ನಿರ್ಧಾರವಾಯ್ತು ಅಂತ ವಿಜಯೇಂದ್ರ ಹೇಳಿದ್ದಾರೆ.

 ಇದನ್ನೂ ಓದಿ: BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ; ರಾಜಾಹುಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ

 “ಬಿಎಸ್‌ವೈ ಮಗನಾಗಿ ಅಲ್ಲ, ಕಾರ್ಯಕರ್ತನಾಗಿ ದುಡಿದಿದ್ದೇನೆ”

 “ಕಳೆದ ಹತ್ತು ವರ್ಷಗಳಿಂದ ಪಕ್ಷದಲ್ಲಿದ್ದೇನೆ, ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಬಿಎಸ್‌ವೈ ಮಗ ಅಂತ ನನಗೆ ಅವಕಾಶ ಅಥವಾ ಜವಾಬ್ದಾರಿ ಕೊಡಲಿಲ್ಲ. ಬದಲಾಗಿ ಸ್ವಸಾಮರ್ಥ್ಯದಿಂದ ಕೆಲಸ ಮಾಡಿದ್ದೇನೆ. ಹೀಗಾಗಿ ಈ ಬಾರಿ ನಾನು ಶಿಕಾರಿಪುರದಿಂದ ಸ್ಪರ್ಧಿಸಬೇಕು ಎಂದು ಹಲವರು ಒತ್ತಾಯಿಸಿದ್ದರಿಂದ ತಂದೆಯೇ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

 “ಸಿಎಂ ಸ್ಥಾನದ ಬಗ್ಗೆ ನಾನು ಯೋಚಿಸಿಲ್ಲ”

ಭವಿಷ್ಯದಲ್ಲಿ ನೀವೇ ರಾಜ್ಯದ ಸಿಎಂ ಆಗುವ ಕನಸು ಕಾಣುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸುವ ಬಗ್ಗೆ ಮಾತ್ರ ಯೋಚಿಸುತ್ತೇನೆ. ಅದು ಬಿಟ್ಟು ಬೇರೆ ಯೋಚಿಸುವುದಿಲ್ಲ. ಅಂತಿಮವಾಗಿ ಪಕ್ಷದ ನಾಯಕರು ಏನು ನಿರ್ಧರಿಸುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.

 ಇದನ್ನೂ ಓದಿ: BS Yediyurappa: ಬಿ ಎಸ್ ಯಡಿಯೂರಪ್ಪಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್, ರಾಜಾಹುಲಿ ಈಗ ನಿರಾಳ

 ಮತ್ತೆ ಈ ಬಾರಿಯೂ ಅಧಿಕಾರಕ್ಕೆ ಬರುತ್ತೇವೆ

 ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರಸ್ತುತ ಅನುಕೂಲಕರ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಸಂಪೂರ್ಣ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ತಮಗಿದೆ ಅಂತ ವಿಜಯೇಂದ್ರ ಹೇಳಿದ್ದಾರೆ.
Published by:Annappa Achari
First published: