ಬಿಜೆಪಿಯಲ್ಲಿ ದೊಡ್ಡ ಹುದ್ದೆಯ ಮೇಲೆ ವಿಜಯೇಂದ್ರ ಕಣ್ಣು?

ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದ ಬಳಿಕ ಯಡಿಯೂರಪ್ಪ ಅವರ ಖದರ್ ಬದಲಾಗಿದೆ. ಕೆಆರ್ ಪೇಟೆ ದಿಗ್ವಿಜಯದ ಗರಿ ಇಟ್ಟುಕೊಂಡು ವಿಜಯೇಂದ್ರ ಅವರು ಪಕ್ಷದೊಳಗೆ ಹೊಸ ಬೆಲೆ ಕಂಡುಕೊಂಡಿದ್ದಾರೆ.

news18
Updated:December 16, 2019, 5:23 PM IST
ಬಿಜೆಪಿಯಲ್ಲಿ ದೊಡ್ಡ ಹುದ್ದೆಯ ಮೇಲೆ ವಿಜಯೇಂದ್ರ ಕಣ್ಣು?
ವಿಜಯೇಂದ್ರಗೆ ಸಿಹಿ ತಿನಿಸುತ್ತಿರುವ ಬಿಎಸ್​ವೈ
  • News18
  • Last Updated: December 16, 2019, 5:23 PM IST
  • Share this:
ಬೆಂಗಳೂರು(ಡಿ. 16): ಯಡಿಯೂರಪ್ಪ ಅವರ ಕಿರಿಯ ಮಗ ಬಿ.ವೈ. ವಿಜಯೇಂದ್ರ ಅವರು ತಮ್ಮದೇ ನೆಲೆ ಕಂಡುಕೊಳ್ಳುತ್ತಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಿಂದಲೂ ಅವರು ರಾಜಕಾರಣದ ಮುಖ್ಯ ವಾಹಿನಿಗೆ ಬರುವ ಪ್ರಯತ್ನದಲ್ಲಿದ್ದಾರೆ. ಇತ್ತೀಚಿನ ಉಪ ಚುನಾವಣೆಯ ಬಳಿಕವಂತೂ ವಿಜಯೇಂದ್ರ ಅವರು ಬಿಜೆಪಿಯ ಭವಿಷ್ಯದ ನಾಯಕನೆಂಬಂತೆ ಬಿಂಬಿತವಾಗುತ್ತಿದ್ದಾರೆ. ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯೇಂದ್ರ ಅವರು ಪಕ್ಷದಲ್ಲಿ ಇನ್ನೂ ದೊಡ್ಡ ಮಟ್ಟದ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿದ್ದ ಕೆಆರ್ ಪೇಟೆಯಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ ಗೆಲುವು ಸಾಧಿಸಿತ್ತು. ವಿಜಯೇಂದ್ರ ಅವರೇ ಈ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. ಯಡಿಯೂರಪ್ಪ ಅವರ ಜನ್ಮಭೂಮಿಯಾಗಿದ್ದರೂ ಬಿಜೆಪಿಗೆ ನೆಲಯೇ ಇಲ್ಲದ ಕ್ಷೇತ್ರವಿದು. ಇಂಥ ನಾಡಿನಲ್ಲಿ ಊರೂರು ಸುತ್ತಿ ವಿಜಯೇಂದ್ರ ಪಕ್ಷ ಸಂಘಟನೆ ಮಾಡಿದರು. ಜೆಡಿಎಸ್ ವಿರೋಧಿ ಮತಗಳು ಬಿಜೆಪಿಯತ್ತ ಹೆಚ್ಚು ಹರಿದುಬರುವಂತೆ ಅವರು ನಿಗಾ ವಹಿಸಿದರು. ತತ್​ಪರಿಣಾಮವಾಗಿ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಗೆಲುವು ಸುಗಮಗೊಂಡಿತು.

ಇದನ್ನೂ ಓದಿ: ಕನ್ನಡ ‘ಅಸ್ಮಿತೆ’ಗೆ ಆಘಾತ; ಕಸಾಪ ಹೊಸ ಕಟ್ಟಡಕ್ಕೆ ಭೂಮಿ ಭಾಗ್ಯ ಇಲ್ಲ; ಬಿಬಿಎಂಪಿಯಿಂದ ಅನುಮೋದನೆ ರದ್ದು

ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದ ಬಳಿಕ ಯಡಿಯೂರಪ್ಪ ಅವರ ಖದರ್ ಬದಲಾಗಿದೆ. ಕೆಆರ್ ಪೇಟೆ ದಿಗ್ವಿಜಯದ ಗರಿ ಇಟ್ಟುಕೊಂಡು ವಿಜಯೇಂದ್ರ ಅವರು ಪಕ್ಷದೊಳಗೆ ಹೊಸ ಬೆಲೆ ಕಂಡುಕೊಂಡಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ಧಾರೆ. ಕೆಆರ್ ಪೇಟೆಯಲ್ಲಿ ಅಸಾಧ್ಯದ ಗೆಲುವನ್ನು ಸಾಧ್ಯವಾಗಿಸಿದ ಸಾಧನೆಯನ್ನು ಮನದಟ್ಟು ಮಾಡಿದ್ದಾರೆ. ಪಕ್ಷ ಸಂಘಟನೆಗೆ ತಮಗೆ ಇನ್ನೂ ದೊಡ್ಡ ಅವಕಾಶ ನೀಡಬೇಕೆಂದು ಅವರು ಅಮಿತ್ ಶಾ ಅವರನ್ನು ಮನವಿ ಕೂಡ ಮಾಡಿದ್ದಾರೆ. ಪರೋಕ್ಷವಾಗಿ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಕೇಳಿಕೊಂಡಿದ್ಧಾರೆ.

ಇತ್ತೀಚಿನ ಪಕ್ಷದ ಪದಾಧಿಕಾರಿಗಳ ಬದಲಾವಣೆ ವೇಳೆಯಲ್ಲೇ ವಿಜಯೇಂದ್ರ ಅವರಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಡಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ, ನೂತನ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಮಹೇಶ್ ಟೆಂಗಿನಕಾಯಿ ಅವರಿಗೆ ಆ ಸ್ಥಾನ ನೀಡಿದ್ದರು. ಈಗ ಉಪಸಮರದಲ್ಲಿ ಯಡಿಯೂರಪ್ಪ ಅವರ ಬಲ ಗಮನಾರ್ಹ ರೀತಿಯಲ್ಲಿ ಹೆಚ್ಚಳವಾಗಿದೆ. ಈಗ ಅವರ ಮಾತನ್ನು ಮೋದಿ ಮತ್ತು ಅಮಿತ್ ಶಾ ಕೂಡ ಆಸಕ್ತಿಯಿಂದ ಕೇಳುತ್ತಾರೆ. ಬಿ.ವೈ. ವಿಜಯೇಂದ್ರ ಅವರಿಗೆ ಉನ್ನತ ಸ್ಥಾನ ಸಿಗುವುದು ಬಹುತೇಕ ಖಚಿತ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 16, 2019, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading