Shikaripura: ತಂದೆ ಹೇಳಿಕೆ ಬೆನ್ನಲ್ಲೇ ಶಿಕಾರಿಪುರದಲ್ಲಿ ವಿಜಯೇಂದ್ರ ಫುಲ್ ಆ್ಯಕ್ಟಿವ್

ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಪೇಜ್ ಪ್ರಮುಖರ ನೇಮಕಾತಿ ಮಾಡಿಕೊಂಡು ಚುನಾವಣೆ ನಡೆಸುತ್ತಿದೆ. ಇದರಿಂದ ಬಿಜೆಪಿಯ ಕಾರ್ಯಕರ್ತರಲ್ಲಿ ಪೇಜ್ ಪ್ರಮುಖರ ಪಾತ್ರ ಮಹತ್ವ ಪಡೆದುಕೊಂಡಿದೆ. ಹೀಗಾಗಿ ವಿಜಯೇಂದ್ರ ಅವರು ಪೇಜ್ ಪ್ರಮುಖರ ಸಭೆಯನ್ನು ನಡೆಸುತ್ತಿದ್ದಾರೆ.

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

  • Share this:
ಕಳೆದ ತಿಂಗಳು ಶಿಕಾರಿಪುರದಲ್ಲಿ (Shikaripura) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ತಮ್ಮ ಪುತ್ರ ವಿಜಯೇಂದ್ರ (BY Vijayendr) ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ ಮೇಲೆ ಕ್ಷೇತ್ರದಲ್ಲಿ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ವಿಧಾನಸಭೆ ಚುನಾವಣೆಗೆ (Assembly Election) ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ಪ್ರಾರಂಭಿಸಿವೆ. ಅದರಂತೆ ಬಿಜೆಪಿಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಲು ರಾಜಾಹುಲಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಸಹ ಚುನಾವಣಾ ತಯಾರಿ (Election Preparation) ಪ್ರಾರಂಭಿಸಿದ್ದಾರೆ. ಶಿಕಾರಿಪುರದ ಬಿಜೆಪಿಯ (BJP) ಮಹಾಶಕ್ತಿ ಕೇಂದ್ರಗಳ ಸಭೆಯನ್ನು ನಡೆಸಿದ್ದಾರೆ. ವಿಜಯೇಂದ್ರ ಅವರು ಹೊಸೂರು ಮಹಾಶಕ್ತಿ ಕೇಂದ್ರ ಹಾಗೂ ಕಪ್ಪನಹಳ್ಳಿ ಶಕ್ತಿ ಕೇಂದ್ರಗಳ ಪೇಜ್ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದಾರೆ.

ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಪೇಜ್ ಪ್ರಮುಖರ ನೇಮಕಾತಿ ಮಾಡಿಕೊಂಡು ಚುನಾವಣೆ ನಡೆಸುತ್ತಿದೆ. ಇದರಿಂದ ಬಿಜೆಪಿಯ ಕಾರ್ಯಕರ್ತರಲ್ಲಿ ಪೇಜ್ ಪ್ರಮುಖರ ಪಾತ್ರ ಮಹತ್ವ ಪಡೆದುಕೊಂಡಿದೆ. ಹೀಗಾಗಿ ವಿಜಯೇಂದ್ರ ಅವರು ಪೇಜ್ ಪ್ರಮುಖರ ಸಭೆಯನ್ನು ನಡೆಸುತ್ತಿದ್ದಾರೆ.

ಶಿಕಾರಿಪುರದಲ್ಲಿ ವಿಜಯೇಂದ್ರ ಸಖತ್ ಆಕ್ಟಿವ್

ವಿಜಯೇಂದ್ರ ಅವರು ಶಿಕಾರಿಪುರಕ್ಕೆ, ಹಬ್ಬ, ಚುನಾವಣೆ ಹಾಗೂ ಕುಟುಂಬದ ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾದ ಕಾರಣ ಶಿಕಾರಿಪುರಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದಾರೆ.

ಇದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಶಿಕಾರಿಪುರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಪಕ್ಷದ ತೀರ್ಮಾನವೇ ಅಂತಿಮ ಎಂದು ತಿಳಿಸಿದ ನಡುವೆಯೇ ವಿಜಯೇಂದ್ರ ಅವರು ಚುನಾವಣಾ ತಯಾರಿಯಲ್ಲಿರುವುದು ಕಂಡು ಬರುತ್ತಿದೆ.

BY Vijayendra Active in Shikaripura Assembly mrq
ಬಿವೈ ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ


ಶಿಕಾರಿಪುರ ತಾಲೂಕಿನಲ್ಲಿ ಪೇಜ್ ಪ್ರಮುಖ್ ಸಭೆ ಪಕ್ಷದ ಕರೆಯಂತೆ ಎರಡು ದಿನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಮಹೋತ್ಸವ ದೇಶದ ದೊಡ್ಡಹಬ್ಬವಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶಭಕ್ತಿ ಯುವಕರಲ್ಲಿ ಹೆಚ್ಚಿಸಲು ಹಬ್ಬದ ರೀತಿ ಆಚರಿಸಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆಗೆ ಬಿಜೆಪಿ ಸಿದ್ಧತೆ

20 ಕೋಟಿ ಮನೆಗಳ ಮೇಲೆ ಧ್ವಜ ಹಾರಿಸಲು ಕರೆ ನೀಡಿದ್ದಾರೆ. ರಾಜ್ಯದಲ್ಲೂ 58 ಸಾವಿರ ಬೂತ್ ಕೇಂದ್ರದಲ್ಲೂ ಅರ್ಥಪೂರ್ಣ ಆಚರಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ ಎಂದರು.

ಸ್ವಾತಂತ್ರ್ಯ ನೆನಪು ಈಸೂರು ಮರೆಯಲು ಅಸಾಧ್ಯ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗ್ರಾಮ ಎಂದು ಘೋಷಣೆ ಮಾಡಿದ ಮೊದಲ ಗ್ರಾಮ ಇಲ್ಲಿ ಹೆಚ್ಚು ಅರ್ಥಪೂರ್ಣ ಆಗಬೇಕು ಎನ್ನುವ ಕಾರಣಕ್ಕೆ ಸರಣಿ ಸಭೆ ನಡೆಸಲಾಗಿದೆ ಸಲಹೆ ಪಡೆದು ಕಾರ್ಯ ಯೋಜನೆ ಮಾಡಿಲಾಗಿದೆ ಎಂದರು.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಿಜೆಪಿ ಕಾರ್ಯಕರ್ತರ ಆಕ್ರೋಶ ಕುರಿತು ಉತ್ತರಿಸಿದ ಅವರು ಹತ್ಯೆಕೋರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಹಳ್ಳಿಹಕ್ಕಿ ಪುತ್ರ ಕಾಂಗ್ರೆಸ್ ಗೂಡು ಸೇರ್ತಾರ?

ಜೆಡಿಎಸ್​ನಿಂದ (JDS) ಬಿಜೆಪಿಗೆ ಹಾರಿದ ಹ ಳ್ಳಿಹಕ್ಕಿ H​. ವಿಶ್ವನಾಥ್ (H Vishwanth)​, ಸಮಿಶ್ರ ಸರ್ಕಾರ (Coalition Government) ಕೆಡವುವಲ್ಲಿ ಕೂಡ ಮಹತ್ವದ ಪಾತ್ರವಹಿಸಿದ್ರು. ಬಿಜೆಪಿ ಸೇರಿದ ಬಳಿಕ ವಿಧಾನಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್ ಬಿಜೆಪಿಯಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದಾರೆ.

BY Vijayendra Active in Shikaripura Assembly mrq
ಬಿವೈ ವಿಜಯೇಂದ್ರ


ಬಾಯ್ಬಿಟ್ರೆ ಕಾಂಗ್ರೆಸ್​ ಬಗ್ಗೆ ಕಿಡಿಕಾರುವ ಹೆಚ್ ವಿಶ್ವನಾಥ್, ಇದೀಗ ಮಗನಿಗೆ ಕಾಂಗ್ರೆಸ್ ಪಕ್ಷ ಸೇರಲು ಗ್ರೀನ್​ ಸಿಗ್ನಲ್​ (Green Signal) ಕೊಟ್ಟಿದ್ದಾರಂತೆ. ಈ ಅನಿರೀಕ್ಷಿತ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ

ವರದಿ: ವಿನಯ್ ಪುರದಾಳ
Published by:Mahmadrafik K
First published: