ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು (CM Siddaramaiah) ಸರ್ಕಾರ ಜಯಂತಿಗಳಲ್ಲಿ ಟಿಪ್ಪು ಜಯಂತಿ (Tipu jayanti) ಕೈ ಬಿಟ್ಟಿರುವ ಕುರಿತು ಶಾಸಕ ಬಿವೈ ವಿಜಯೇಂದ್ರ (MLA BY Vijayendra) ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ತಡವಾಗಿ ಕಾಂಗ್ರೆಸ್ (Congress) ಪಕ್ಷಕ್ಕೆ ಜ್ಞಾನೋದಯ ಆಗಿದೆ. ಟಿಪ್ಪು ಜಯಂತಿ ಆಚರಣೆ ಕೈ ಬಿಟ್ಟಿರೋದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮಾತಿನ ಭರಾಟೆಯಲ್ಲಿ ಪೊಲೀಸರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಭಾರತದ ತ್ರಿವರ್ಣ ಧ್ವಜ ಕೇಸರಿಯಿಂದ ಶುರುವಾಗುತ್ತದೆ. ರಾಷ್ಟ್ರೀಯತೆಯ ಸಂಕೇತ ಕೇಸರಿ. ಸ್ವಾಮೀಜಿಗಳು, ತಪಸ್ವಿಗಳ ಬಣ್ಣ ಕೇಸರಿ. ಕೇಸರಿ ಬಗ್ಗೆ ಕಾಂಗ್ರೆಸ್‌ನವರಿಗೆ ಯಾಕಿಷ್ಟು ತಾತ್ಸಾರ ಎಂದು ಬಿವೈ ವಿಜಯೇಂದ್ರ ಪ್ರಶ್ನೆ ಮಾಡಿದರು.
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದಕ್ಕೆ ದೇಶದಲ್ಲಿಯೇ ಬಂದಿದೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ಉತ್ತರ ಕೊಡ್ತಾರೆ ಎಂದು ಹೇಳಿದರು.
ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಸರ್ಕಾರಿ ನಡೆಸೋದು ಕಷ್ಟ. ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜ್ಯದ ಮುಖ್ಯಮಂತ್ರಿ ಐದು ವರ್ಷ ಇರ್ತಾರಾ ಅನ್ನೋ ಗ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡಿದರು.
ಡಿಕೆ ಶಿವಕುಮಾರ್ ಅವರನ್ನ ಪ್ರಶ್ನಿಸಿದ ವಿಜಯೇಂದ್ರ!
ಚುನಾವಣೆಯಲ್ಲಿ ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಆಗಿದೆ ಎಂಬ ಭಾವನೆ ಬಂದಿದೆ. ದಾರಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ, ಮತ ಯಾಚನೆ ಮಾಡಿದ್ದೀರಿ. ಇವಾಗ ಈ ರೀತಿಯ ಮಾತುಗಳನ್ನ ಆಡುವುದು ಸರೀನಾ ಎಂದು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Nayana Motamma ಖಾಸಗಿ ಫೋಟೋ ವೈರಲ್; ನಟ ಚೇತನ್ ಹೇಳಿದ್ದು ಹೀಗೆ
ಡಬಲ್ ಸ್ಟೇರಿಂಗ್ ಸರ್ಕಾರ
ಇದು ಡಬಲ್ ಸ್ಟೇರಿಂಗ್ ಸರ್ಕಾರ. ಮುಖ್ಯಮಂತ್ರಿಗಳಿಗೊಂದು, ಡಿಸಿಎಂಗೆ ಒಂದು ಸ್ಟೇರಿಂಗ್ ಇದೆ. ಯಾರು ಯಾವ ಕಡೆ ಎಳಿತಾರೋ ಗೊತ್ತಿಲ್ಲ. ಮುಂದೆ ದೇವರೇ ಬುದ್ದಿ ಕೊಡಲಿ ಎಂದು ವ್ಯಂಗ್ಯ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ