HOME » NEWS » State » BY ELECTION FIXED FOR RAJYA SABHA SEAT WHICH REPLACING DEATH BY ASHOK GASTI RH

ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ

ಜುಲೈ 23 ರಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಗಸ್ತಿ, ಕಳೆದ ರಾಜ್ಯಸಭಾ ಅಧಿವೇಶನದಲ್ಲಿ ಭಾಗಿಯಾಗಬೇಕಿತ್ತು. ಆದರೆ ಅವರಿಗೆ ಸೆಪ್ಟೆಂಬರ್ 2 ರಂದು ಕೊರೋನಾ ದೃಢಪಟ್ಟಿದ್ದರಿಂದ ಅವರನ್ನು ಬೆಂಗಳೂರಿನ‌ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೆಪ್ಟೆಂಬರ್ 17ರಂದು ಕೊನೆಯುಸಿರೆಳೆದರು.

news18-kannada
Updated:November 2, 2020, 5:06 PM IST
ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ
ಅಶೋಕ್​ ಗಸ್ತಿ
  • Share this:
ಬೆಂಗಳೂರು; ಅಶೋಕ್ ಗಸ್ತಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಿಗದಿ ಮಾಡಲಾಗಿದೆ. ಮೂಲತಃ ರಾಯಚೂರಿನವರಾದ ಅಶೋಕ್ ಗಸ್ತಿ ಅವರು ಕಳೆದ ಜೂನ್​ನಲ್ಲಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ, ಕಳೆದ ಸೆಪ್ಟೆಂಬರ್ 17ರಂದು ಮಾರಕ ಕೊರೋನಾ ಸೋಂಕಿಗೆ ತುತ್ತಾಗಿ ಅಸುನೀಗಿದ್ದರು. ಇದೀಗ ಅವರ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ ನಿಗದಿ ಮಾಡಲಾಗಿದೆ.

ಲಿಂಗಸಗೂರಿನ ಕೃಷ್ಣಯ್ಯ ಹಾಗು ವೆಂಕಮ್ಮ ಎಂಬ ದಂಪತಿಗಳ ಎರಡನೆಯ ಪುತ್ರನಾಗಿರುವ ಗಸ್ತಿ 1965 ರಲ್ಲಿ ಜನಿಸಿದ್ದರು. ಹಿಂದುಳಿದ ವರ್ಗದವರಾಗಿದ್ದ ಅಶೋಕ ಗಸ್ತಿ ಶಾಲಾ ದಿನಗಳಲ್ಲಿ ಎಬಿವಿಪಿ ಕಾರ್ಯಕರ್ತರಾಗಿ ವಿದ್ಯಾರ್ಥಿ ಸಂಘಟನೆಯನ್ನು ತೊಡಗಿಕೊಂಡಿದ್ದರು. ಲಿಂಗಸಗೂರಿನಲ್ಲಿ ಪದವಿ ಕಾಲೇಜಿಗಾಗಿ ಹೋರಾಟ ಮಾಡಿದ್ದರು. ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನ ಲಿಂಗಸಗೂರಿನಲ್ಲೇ ಮುಗಿಸಿದ್ದ ಅಶೋಕ ಗಸ್ತಿ ಅವರು, ಪದವಿ ಹಾಗೂ ಎಲ್​ಎಲ್​ಬಿಯನ್ನ ರಾಯಚೂರಿನಲ್ಲಿ ಪೊರೈಸಿದರು.

ಬಡತನದ ಮಧ್ಯೆಯೂ ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದರು. 2005ರಲ್ಲಿ ರಾಯಚೂರು ನಗರಸಭೆಯ ಸದಸ್ಯರಾಗಿದ್ದ ಗಸ್ತಿ, 2012 ರಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾದರು. 1990 ರಿಂದಲೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಒಮ್ಮೆ ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿದರು. ಈ ಮಧ್ಯೆ ಬಳ್ಳಾರಿ ಲೋಕಸಭಾ ಕ್ಷೇತ್ರ ಉಸ್ತುವಾರಿ ಕಾರ್ಯದರ್ಶಿಯಾಗಿ ಕೆಲಸ‌ ಮಾಡಿದರು.

ಇದನ್ನು ಓದಿ: ಆರ್​ಆರ್ ನಗರದಲ್ಲಿ 40 ಸಾವಿರ ಅಕ್ರಮ ಮತದಾರರ ಹೆಸರು ಸೇರ್ಪಡೆ; ಮುನಿರತ್ನ ವಿರುದ್ಧ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ
Youtube Video

ಪಕ್ಷದಿಂದ ರಾಜ್ಯಸಭೆಗೆ ಅಶೋಕ ಗಸ್ತಿ ಹೆಸರು ಘೋಷಣೆಯಾದಾಗ ಎಲ್ಲರಲ್ಲಿಯೂ ಅಚ್ಚರಿ ಮೂಡಿತ್ತು. ಜುಲೈ 23 ರಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಗಸ್ತಿ, ಕಳೆದ ರಾಜ್ಯಸಭಾ ಅಧಿವೇಶನದಲ್ಲಿ ಭಾಗಿಯಾಗಬೇಕಿತ್ತು. ಆದರೆ ಅವರಿಗೆ ಸೆಪ್ಟೆಂಬರ್ 2 ರಂದು ಕೊರೋನಾ ದೃಢಪಟ್ಟಿದ್ದರಿಂದ ಅವರನ್ನು ಬೆಂಗಳೂರಿನ‌ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸೆಪ್ಟೆಂಬರ್ 17ರಂದು ಕೊನೆಯುಸಿರೆಳೆದರು.
Published by: HR Ramesh
First published: November 2, 2020, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories