ಲಾಲ್​ಬಾಗ್​ ನಲ್ಲಿ ನಿರ್ಮಾಣವಾಗುತ್ತಿದೆ ಚಿಟ್ಟೆ ಪಾರ್ಕ್

news18
Updated:May 24, 2018, 5:21 PM IST
ಲಾಲ್​ಬಾಗ್​ ನಲ್ಲಿ ನಿರ್ಮಾಣವಾಗುತ್ತಿದೆ ಚಿಟ್ಟೆ ಪಾರ್ಕ್
news18
Updated: May 24, 2018, 5:21 PM IST
- ಸೌಮ್ಯ ಕಳಸ, ನ್ಯೂಸ್ 18 ಕನ್ನಡ 

ಬೆಂಗಳೂರು ( ಮೇ.24) :  ಸಸ್ಯಕಾಶಿ ಲಾಲ್​ಬಾಗ್​  ನಲ್ಲಿ ಇನ್ನು ಚಿಟ್ಟೆಗಳ ಆಟ, ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮನಸ್ಸಿಗೆ ಮುದಕೊಡಲಿವೆ. ಅನೇಕ ವರ್ಷಗಳಿಂದ ಬಳಸದೇ ಉಳಿದಿದ್ದ ಸ್ಥಳವನ್ನು ವಿಭಿನ್ನವಾಗಿ ಬದಲಿಸಲು ತೋಟಗಾರಿಕಾ ಇಲಾಖೆ ಸಜ್ಜಾಗಿದೆ.

ಸುಮಾರು 15 ಎಕರೆ ವಿಸ್ತೀರ್ಣದ ಈ ಸ್ಥಳವನ್ನು ಹಿಂದೊಮ್ಮೆ ಪಾರ್ಕಿಂಗ್ ಸೌಲಭ್ಯಕ್ಕಾಗಿ ಮೀಸಲಿಡಲು ನಿರ್ಧಾರವಾಗಿತ್ತು. ಆದರೆ ನಡಿಗೆದಾರರು ಮತ್ತು ಪರಿಸರ ಪ್ರಿಯರ ವಿರೋಧದಿಂದಾಗಿ ಆ ಯೋಚನೆಯನ್ನು ಕೈಬಿಡಲಾಯಿತು. ಈಗ ಇಲ್ಲೊಂದು ಸುಂದರ ಉದ್ಯಾನಗಲ ಗುಚ್ಛವೇ ತಲೆಯೆತ್ತಿ ನಿಲ್ಲಲಿದೆ. ಚಿಟ್ಟೆ, ಹಕ್ಕಿಗಳ ಚಿಲಿಪಿಲಿಯಿಂದ ಈ ಸ್ಥಳ ಕಲರ್​ಫುಲ್ ಆಗಿ ಬದಲಾಗಲಿದೆ.

ಅಂದ್ಹಾಗೆ ಇಲ್ಲಿ ಚಿಟ್ಟೆಗಳಿಗಾಗಿ ವಿಶೇಷ ಉದ್ಯಾನ, ಹಕ್ಕಿಗಳನ್ನು ಸೆಲೆಯಲು ಬಗೆಬಗೆಯ ಹಣ್ಣುಗಳ ಗಿಡಮರಗಳಿರುವ ಉದ್ಯಾನ, ಅಳಿವಿನ ಅಂಚಿನಲ್ಲಿರುವ ಕೆಲವಷ್ಟು ತಳಿಯ ಸಸ್ಯಸಂಕುಲ, ಸಸ್ಯಶಾಸ್ತ್ರದ ಬಗೆಗಿನ ಸಂಶೋಧನೆಗೆ ಸಹಕಾರಿಯಾಗಲಿರುವ ಹಲವು ತಳಿಗಳ ಜೊತೆ ಪಶ್ಚಿಮ ಘಟ್ಟಗಳ ಅಪರೂಪದ ಗಿಡಮರಗಳನ್ನೂ ಇಲ್ಲಿ ನೆಟ್ಟು ಪೋಷಿಸಲು ನಿರ್ಧರಿಸಲಾಗಿದೆ. ಇದನ್ನು ಪರಿಸರ ಪ್ರೇಮಿಗಳು ಮತ್ತು ಪಕ್ಷಿಪ್ರಿಯರು ಸಂತಸದಿಂದ ಸ್ವಾಗತಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಲಾಲ್ ಬಾಗ್​ನಲ್ಲಿ ಚಿಟ್ಟೆಯ ಪಾರ್ಕ್, ಹಕ್ಕಿಗಳಿಗೆ ಪೂರಕವಾದ ಸ್ಥಳದ ನಿರ್ಮಾಣ ಇವೆಲ್ಲವೂ ನಿಜಕ್ಕೂ ವಿಶೇಷ. ಇದು ಪ್ರವಾಸಿಗರು, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಮಕ್ಕಳಿಗೂ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇನ್ನೊಂದೆರಡು ವರ್ಷಗಳೊಳಗೆ ಇಲ್ಲಿ ಬಣ್ಣಬಣ್ಣದ ಚಿಟ್ಟೆಗಳ ಹಾರಾಟ, ಹಕ್ಕಿಗಳ ಹಾಡಿನ ಸಂಗೀತ ಕೇಳಲು ಸಿಗುವ ಸಾಧ್ಯತೆ ಇದೆ.

 
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ