ಆ ವ್ಯಕ್ತಿ ಬಹುದೊಡ್ಡ ಉದ್ಯಮಿ (Businessman). ಖಾಸಗಿ ವಲಯದಲ್ಲಿ (Private Sector) ಬಹುದೊಡ್ಡ ಆಸ್ಪತ್ರೆ (Hospital) ಕಟ್ಟಿ ಉಡುಪಿ (Udupi) ಜಿಲ್ಲೆಯಲ್ಲಿ ಹೆಸರು ವಾಸಿಯಾದವರು. ಆದ್ರೆ ಯಾವಾಗ ಬಡ್ಡಿ ಮೂಲಕ ಕೋಟ್ಯಾಂತರ ರೂಪಾಯಿ ಸಾಲ (Loan) ನೀಡಿದ್ರೋ ಅದೇ ಜೀವಕ್ಕೆ ಕಂಟಕವಾಯಿತು. ಕೊಟ್ಟ ಸಾಲ ಕೇಳಿ ಕೇಳಿ ಸುಸ್ತಾಗಿ ಕೊನೆಗೆ ಸಾಲ ಪಡೆದವನ ಮನೆಯಲ್ಲೇ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಹೀಗೆ ಮನೆಯ ಆವರಣದಲ್ಲಿ ಕುರ್ಚಿಯಲ್ಲಿ ಕೂತ ಸ್ಥಿತಿಯಲ್ಲೇ ಸಾವಿಗೆ ಶರಣಾದವರು 80 ವರ್ಷದ ಕಟ್ಟೆ ಗೋಪಾಲಕೃಷ್ಣ ಶೆಟ್ಟಿ (Gopalakrishna Shetty). ಉಡುಪಿ ಜಿಲ್ಲೆಯ ಕುಂದಾಪುರ (Kundapura) ಹಾಗೂ ಬೈಂದೂರು (Bynduru) ತಾಲೂಕಿನಲ್ಲಿ ಕಟ್ಟೆ ಗೋಪಾಲಕೃಷ್ಣ ಅಂದ್ರೆ ಖ್ಯಾತರಾದವರು.
ಚಿನ್ಮಯಿ ಆಸ್ಪತ್ರೆ ಈ ಭಾಗದಲ್ಲಿ ಮೊದಲು ಸ್ಥಾಪಿಸಿ ಫೇಮಸ್ ಆಗಿದ್ರು. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರು ವಾಸಿಯಾಗಿದ್ರು.ಇದೀಗ ಕುಂದಾಪುರ ತಾಲೂಕಿನ ಅಂಕದಕಟ್ಟೆ ಗ್ರಾಮದ ಪುರಾಣಿಕ್ ರಸ್ತೆಯಲ್ಲಿರುವ ಸ್ನೇಹಿತ ಮೊಳಹಳ್ಳಿ ಗಣೇಶ್ ಶೆಟ್ಟಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಎದೆ ಭಾಗಕ್ಕೆ ಗುಂಡು ಹೊಡೆದುಕೊಂಡ್ರು
ತಾನು ತಂದಿದ್ದ ಪರವಾನಗಿ ಇರುವ ರಿವಾಲ್ವರ್ ನಿಂದ ಎದೆ ಭಾಗಕ್ಕೆ ಗುಂಡು ಹೊಡೆದು ಮೋಸ ಮಾಡಿದವನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಕಟ್ಟೆ ಗೋಪಾಲ ಅವರನ್ನ ಕಂಡ ಸ್ನೇಹಿತರು, ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: Belagavi: ಡಿಕೆಶಿ ಬಿಟ್ಟು ತುಂಬಾ ಜನ BJPಗೆ ಬರ್ತಿದ್ದಾರೆ, ಅವ್ರನ್ನ ಕಾಯ್ದುಕೊಳ್ಳಿ, ಕಟೀಲ್ ವಾರ್ನಿಂಗ್
9 ಕೋಟಿ ಸಾಲದ ಕಥೆ
ಇನ್ನು ಕಟ್ಟೆ ಭೋಜಣ್ಣ ಸೂಸೈಡ್ ಹಿಂದಿದೆ 9 ಕೋಟಿ ಸಾಲದ ಕಥೆ. ಹೌದು, ಡೆತ್ ನೋಟಿನಲ್ಲಿ ಬಹಿರಂಗವಾಗಿ ಕೋಟ್ಯಂತರ ರೂಪಾಯಿ ಸಾಲದ ಕುರಿತು ಗೋಪಾಲಕೃಷ್ಣ ಶೆಟ್ಟಿ ಬರೆದಿದ್ದಾರೆ. ಡೆತ್ ನೋಟಿನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಹೆಸರು ಪ್ರಸ್ತಾಪವಾಗಿದೆ. ಇಬ್ಬರು ಸೇರಿ 3 ಕೋಟಿ 34 ಲಕ್ಷ ನಗದು 5 ಕೆಜಿ ಬಂಗಾರ ವಂಚಿಸಿದ್ದಾರೆ ಎಂದು ಆರೋಪ ಇದೆ.
ಬಡ್ಡಿ ಆಸೆ ತೋರಿಸಿ ಭೋಜಣ್ಣ ಅವರಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದರಂತೆ. ಇಷ್ಟೊಂದು ಹಣ ಬಡ್ಡಿಯನ್ನು ನೀಡದೆ ಅಸಲನ್ನು ನೀಡದೆ ಸತಾಯಿಸುತ್ತಿದ್ದ ಮೊಳಹಳ್ಳಿ ಗಣೇಶ್ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಐದಾರು ಬಾರಿ ಕಾಂಪ್ರಮೈಸ್ ಮಾಡಲು ಪ್ರಯತ್ನ ಪಟ್ಟರು ಒಪ್ಪದೇ ದುಡ್ಡು ಕೊಡದೆ ಸತಾಯಿಸುತ್ತಿದ್ದನಂತೆ ಮೊಳಹಳ್ಳಿ ಗಣೇಶ್ ಶೆಟ್ಟಿ.
ವಂಚಕನ ಮನೆಯಲ್ಲಿಯೇ ಸೂಸೈಡ್
ಇದರಿಂದ ಬೇಸತ್ತು ಕೊನೆಯದಾಗಿ ಸಾಲ ಕೇಳಲು ಗಣೇಶ್ ಶೆಟ್ಟಿ ಮನೆಗೆ ಬಂದರು ಹಣ ಸಿಗದಿದ್ದಾಗ ಮನೆ ಮುಂಭಾಗದಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ ಕಟ್ಟೆ ಭೋಜಣ್ಣ.
ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿ ಇಂದ ಮನೆಯವರಿಗೆ ದುಡ್ಡು ತೆಗೆಸಿ ಕೊಡುವಂತೆ ಭೋಜಣ್ಣ ಅವರು ಕೊನೆಯದಾಗಿ ಡೆತ್ ನೋಟಲ್ಲಿ ಮನವಿ ಮಾಡಿದ್ದಾರೆ.
ನಿಯತ್ತು ಎಲ್ಲಿದೆ ಎಂದು ಸಾರ್ವಜನಿಕರ ಪ್ರಶ್ನೆ
ಇನ್ನಾದರೂ ಪೊಲೀಸರು ಮೋಸಗಾರರಿಗೆ ಸರಿಯಾಗಿ ಬುದ್ಧಿ ಕಲಿಸಿ ಕಟ್ಟೆ ಬೋಜಣ್ಣ ಅವರಿಗೆ ನ್ಯಾಯ ನೀಡಬೇಕಿದೆ. ಈ ಸಾವಿನ ಮೂಲಕ ಆದ್ರೂ ಸಾಲ ಕೊಡುವಾಗ ನೂರು ಬಾರಿ ಯೋಚನೆ ಮಾಡಬೇಕಿದೆ. ನಿಯತ್ತು ಎಲ್ಲಿದೆ ಅನ್ನೋದು ಎಲ್ಲರ ಪ್ರಶ್ನೆ.
ಇದನ್ನೂ ಓದಿ: Hijab Row: ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ: ಪ್ರಮೋದ್ ಮುತಾಲಿಕ್
ಲವ್ ಜಿಹಾದ್ ಗೆ ಯುವತಿ ಬಲಿ
ಲವ್ ಜಿಹಾದ್ (Love Jihad) ಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ. ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತ ಯುವತಿ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ (Girl Suicide). ಅಣ್ಣ ನಾನು ತಪ್ಪು ಮಾಡಿದ್ದೇನೆ ಅಂತ ಸಾವಿನ ಕೊನೆ ಕ್ಷಣದಲ್ಲಿ ನೋವನ್ನ ಹೊರಹಾಕಿದ್ದಾಳೆ ಆ ಯುವತಿ. ಯುವತಿಯ ಸಾವಿಗೆ ಕಾರಣನಾದ ಕಿರಾತಕ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಉಡುಪಿಯಲ್ಲಿ (Udupi) ನಡೆದ ಲವ್ ಸೆಕ್ಸ್ ದೋಖಗೆ ಶಿಲ್ಪಾ ದೇವಾಡಿಗ ಬಲಿಯಾಗಿದ್ದಾರೆ. ಈಕೆ ಕುಂದಾಪುರ (Kundapura) ತಾಲೂಕಿನ ಉಪ್ಪಿನಕುದ್ರು ಗ್ರಾಮದ ಯುವತಿ. ಮನೆಯಿಂದ ಕೆಲವೇ ದೂರವಿರುವ ತಲ್ಲೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ