Tumakuru: ತಾಯಿ ಓದಿದ ಊರಿನಲ್ಲಿ 2 ಕೋಟಿ ಮೌಲ್ಯದ ಹೈ ಟೆಕ್ ಶಾಲೆ ನಿರ್ಮಿಸಿದ ಬೆಂಗಳೂರು ಉದ್ಯಮಿ

ಇನ್ನು ಉದ್ಯಮಿ ಹರ್ಷ ಮತ್ತು ಮಮತಾ ದಂಪತಿ ತುಮಕೂರು ಜಿಲ್ಲೆ ಕೋರಾ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 14 ಕೊಠಡಿಗಳ ಸುಸಜ್ಜಿತವಾದ ನೂತನ ಕಟ್ಟಡದ ಲೋಕಾರ್ಪಣೆಯಾಗಿದೆ.

  • Share this:
ತುಮಕೂರು : ಸಮಾಜದಲ್ಲಿ ತನಗಾಗಿ ಬದುಕುವವರಿಗಿಂತ ಇತರರ ಏಳಿಗೆಗಾಗಿ ಬದುಕುವವರು ಮಾದರಿಯಾಗ್ತಾರೆ. ಅದರಲ್ಲೂ ತಮ್ಮ ತಾಯಿ (Mother) ಚಿಕ್ಕಂದಿನಲ್ಲಿ ಓದಿದ ಶಾಲೆ (Government School) ಇರುವ ಊರಿಗೆ ಉದ್ಯಮಿಯೊಬ್ಬರು ಭರ್ಜರಿ ಗಿಫ್ಟ್ ನೀಡಿ ಮಾದರಿಯಾಗಿದ್ದಾರೆ. ಬರೋಬರಿ 2 ಕೋಟಿ ಮೌಲ್ಯದ ಹೈ ಟೆಕ್ ಸರ್ಕಾರಿ ಶಾಲೆ (School Building) ನಿರ್ಮಿಸಿ ತಾಯಿ ಓದಿದ ಶಾಲೆಯ ಋಣ ತೀರಿಸಿದ್ದಾರೆ. ಉದ್ಯಮಿ ತನ್ನ ತಾಯಿ ಓದಿದ ಸ್ಮರಣಾರ್ಥವಾಗಿ ನಿರ್ಮಿಸಿದ ಶಾಲೆ ಲೋಕಾರ್ಪಣೆಗೊಂಡಿದೆ. ಇಂತಹ ವಿಶೇಷವಾದ ಸಂಭ್ರಮದ ದಿನಕ್ಕೆ ಇಡೀ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಹೆಚ್ಚು ಅಂತಹದರಲ್ಲಿ ಹೀಗೆ ಸುಜ್ಜಿತವಾಗಿ ನಿರ್ಮಾಣವಾಗಿರುವ ಸರ್ಕಾರಿ ಶಾಲೆ ಕಟ್ಟಡ  ನೋಡಿ ಬೆರಗಾಗಬೇಡಿ, ಇದು ನಮ್ಮ ಸರ್ಕಾರ ನಿರ್ಮಾಣ ಮಾಡಿದ ಶಾಲೆಯಲ್ಲ, ಬದಲಿಗೆ ತನ್ನ ತಾಯಿಗಾಗಿ ಉದ್ಯಮಿ(Businessman)ಯೊಬ್ಬರು ನಿರ್ಮಿಸಿದ ಕೊಡುಗೆ.

ತುಮಕೂರು ಹೊರವಲಯ ಕೋರಾ (Kora, Tumakuru) ಎಂಬ ಗ್ರಾಮದಲ್ಲಿ ಇಲ್ಲಿನ ದಾನಿಯೊಬ್ಬರು 2 ಕೋಟಿ ಮೌಲ್ಯದ ಸರ್ಕಾರಿ ಶಾಲೆ ನಿರ್ಮಿಸಿ ಈ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಹೌದು, ಕೋರಾ ಗ್ರಾಮದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಇವರೆ ನೋಡಿ ಉದ್ಯಮಿ ಹರ್ಷ, ಮತ್ತು ಮಮತ ದಂಪತಿ.

Businessman built a school building in kora tumakuru
ಉದ್ಯಮಿ ಹರ್ಷ ಮತ್ತು ಅವರ ಪತ್ನಿ ಮಮತ

ಹರ್ಷ ಅವರ ತಾಯಿ ಸರ್ವಮಂಗಳಾ ನಾಗಯ್ಯ ಅವರು ಕೋರಾ ಸರ್ಕಾರಿ ಶಾಲೆಯಲ್ಲಿ (Kora Government School) ಚಿಕ್ಕವರಿದ್ದಾಗ ಓದಿದವರು. ಇದೇ ಕಾರಣಕ್ಕೆ ತಮ್ಮ ತಾಯಿ ಓದಿದ ಶಾಲೆಗೆ ದೊಡ್ಡ ಕೊಡುಗೆ ನೀಡಬೇಕೆಂದು ಹರ್ಷ ಅವರು ನಿರ್ಧರಿಸಿ 14 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ.

14 ಕೊಠಡಿಗಳ ಶಾಲೆ ನಿರ್ಮಾಣ

ಬೆಂಗಳೂರಿನಲ್ಲಿ ಖಾಸಗಿ ಉದ್ಯಮ ನಡೆಸುತ್ತಿರುವ ಹರ್ಷ ಅವರು ಒಮ್ಮೆ ಕೋರಾ ಮಾರ್ಗವಾಗಿ ಶಿರಾಗೆ ತೆರಳುವಾಗ ತಾಯಿಯ ಊರು ಎಂಬ ಅಭಿಮಾನದಿಂದ ಕಾರು ಇಳಿದಿದ್ದೇ ಇಂದಿನ ಮಹತ್ಕಾರ್ಯಕ್ಕೆ ಕಾರಣವಾಯಿತು. ಊರ ಮೊಮ್ಮಗ ಹರ್ಷ ಇಲ್ಲಿಗೆ ಕಾಲಿಟ್ಟಾಗ ಶಾಲೆಯ ಭಾಗಶಃ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೆಡವಲಾಗಿತ್ತು. ಇದನ್ನು ಗಮನಿಸಿದ ಹರ್ಷ ಅವರು ತಮ್ಮ ತಾಯಿ ಓದಿದ ನೆನಪಿಗಾಗಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿ ಕೊಡಲು ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದ್ದು,  ದೊಡ್ಡದಾದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಾಕ್ಷಿಯಾಗಿದೆ.

Businessman built a school building in kora tumakuru
ಶಾಲಾ ಕಟ್ಟಡ

ಇನ್ನು ಉದ್ಯಮಿ ಹರ್ಷ ಮತ್ತು ಮಮತಾ ದಂಪತಿ ತುಮಕೂರು ಜಿಲ್ಲೆ ಕೋರಾ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ'ಯ 14 ಕೊಠಡಿಗಳ ಸುಸಜ್ಜಿತವಾದ ನೂತನ ಕಟ್ಟಡದ ಲೋಕಾರ್ಪಣೆಯಾಗಿದೆ.

ಶಾಲೆಯಲ್ಲಿ ಈಗ ಗಣಕಯಂತ್ರ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಸ್ಮಾರ್ಟ್ ಕ್ಲಾಸ್ ಕೊಠಡಿ ಹೀಗೆ ಸಂಪೂರ್ಣ ಹೈಟೆಕ್ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿಕೊಡಲಾಗಿದೆ.

Businessman built a school building in kora tumakuru
ಸರ್ವಮಂಗಳ

ದಂಪತಿಗೆ ಪೂರ್ಣಕುಂಭ ಸ್ವಾಗತ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸ್ಥಳೀಯ ಶಾಸಕ ಡಾ.ಜಿ.ಪರಮೇಶ್ವರ್ ಹಾಗೂ ಸಂಸದ ಬಸವರಾಜ್ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ಇದೇ ವೇಳೆ  ಶಾಲಾ ಕಟ್ಟಡ ನಿರ್ಮಾಣದ ಮಹಾದಾನಿಗಳಾದ ಹರ್ಷ ಮತ್ತು ಮಮತಾ ದಂಪತಿಗೆ ಕೋರಾ ಗ್ರಾಮದ ರಾಜ ಬೀದಿಗಳಲ್ಲಿ ಪೂರ್ಣ ಕುಂಭ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯ್ತು.

ಒಟ್ಟಾರೆ ಕೋರಾ ಹೋಬಳಿ ಕೇಂದ್ರದಲ್ಲಿ ನಿರ್ಮಿಸಿಕೊಟ್ಟಿರುವ ಈ ಸುಸಜ್ಜಿತ ಶಾಲಾ ಕಟ್ಟಡ ಸುತ್ತಮುತ್ತಲ ಹತ್ತಾರು ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆಲೆಯಾಗಲಿದೆ.

Businessman built a school building in kora tumakuru
ಶಾಲಾ ಕಟ್ಟಡ

ಈ ದಂಪತಿ ತಮ್ಮ ಗ್ರಾಮಕ್ಕೆ ನೀಡಿರುವ ದೊಡ್ಡ ಕೊಡುಗೆ ಹಾಗೂ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿರುವ ಶಾಶ್ವತ ಕಾರ್ಯದ ಬಗ್ಗೆ ವಿಚಾರದಲ್ಲಿ ಗ್ರಾಮಸ್ಥರಲ್ಲಿ ಅಭಿಮಾನದ ಹೊಳೆಯೇ ಹರಿದಿದೆ.

Businessman built a school building in kora tumakuru
ಶಾಲಾ ಕಟ್ಟಡ

ಉದ್ಯಮಿಗೆ ಧನ್ಯವಾದ ಹೇಳಿದ ಗ್ರಾಮಸ್ಥರು

ಶಾಲೆಯ ಎಸ್‌ಡಿಎಂಸಿ ಸದಸ್ಯರು , ಹಳೇ ವಿದ್ಯಾರ್ಥಿಗಳ ಸಂಘ , ಗ್ರಾಪಂ ಸದಸ್ಯರು , ಗ್ರಾಮಸ್ಥರು ಸೇರಿ ಮೆರವಣಿಗೆ ಕಾರ್ಯಕ್ರಮ ಏರ್ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಏನೆ ಇರಲಿ ತನ್ನ ತಾಯಿ ಓದಿದ ಶಾಲೆ ಎಂಬ ಕಾರಣಕ್ಕೆ ಅವರ ಸ್ಮರಣಾರ್ಥವಾಗಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿಕೊಟ್ಟ ಹರ್ಷ ಹಾಗೂ ಮಮತ ದಂಪತಿಗಳಿಗೆ ಒಂದು ಸಲಾಂ ಹೇಳಲೇಬೇಕು.
Published by:Mahmadrafik K
First published: