ರಾಯಚೂರು: ನಿಧಾನವಾಗಿ ಆರಂಭವಾದ ಬಸ್ ಸೇವೆ; ಖುಷಿಯಾದ ಪ್ರಯಾಣಿಕರು

ಆರಂಭದಲ್ಲಿ ಹೈದ್ರಾಬಾದ್, ಕರ್ನೂಲ್, ಗದ್ವಾಲ್ ಕ್ಕೆ ಹೋಗುವ ಬಸ್ ಗಳು ಆರಂಭವಾದವು. ನಂತರದಲ್ಲಿ ಲಿಂಗಸಗೂರು, ದೇವದುರ್ಗಾ ಸೇರಿದಂತೆ ವಿವಿಧಡೆ ಬಸ್ ಸೇವೆ ನಿಧಾನವಾಗಿ ಆರಂಭವಾಗಿದ್ದವು.

ಬಸ್ಸಿಗೆ ಕಾಯುತ್ತಿರುವ ಪ್ರಯಾಣಿಕರು

ಬಸ್ಸಿಗೆ ಕಾಯುತ್ತಿರುವ ಪ್ರಯಾಣಿಕರು

  • Share this:
ರಾಯಚೂರು(ಡಿ.14): ರಸ್ತೆ ಸಾರಿಗೆ ಸಿಬ್ಬಂದಿಯನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯಲಾಗುತ್ತಿದೆ. ಈ ಮಧ್ಯೆ ರಾಯಚೂರಿನಲ್ಲಿ ನಿನ್ನೆ ಸಂಜೆಯಿಂದಲೇ ಬಸ್ ಸೇವೆ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಿನ್ನೆ ಸಂಜೆ ಸರ್ಕಾರದೊಂದಿಗೆ ಕಾರ್ಮಿಕ ಮುಖಂಡರ ಸಭೆಯ ನಂತರ ಮುಷ್ಕರ ಆರಂಭ ಎಂದ ತಕ್ಷಣವೇ ರಾಯಚೂರು ಬಸ್ ನಿಲ್ದಾಣಕ್ಕೆ ಬಸ್ ಗಳು ಆಗಮಿಸಿದ್ದವು. ಪಕ್ಕದ ರಾಜ್ಯದ ಆಂಧ್ರ ಹಾಗೂ ತೆಲಂಗಾಣದಿಂದ ಬಂದಿರುವ ಬಸ್ ಗಳು ನಿಲ್ದಾಣಕ್ಕೆ ಬಂದವು. ರಾಯಚೂರಿನಿಂದ ಮಂಗಳೂರಿಗೆ ಹೋಗುವ ಬಸ್ ನಿಲ್ದಾಣಕ್ಕೆ ಬಂದಿತ್ತು. ಈ ಬಸ್ ಮಂಗಳೂರು ವಿಭಾಗದ್ದಾಗಿದ್ದರಿಂದ  ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿತು. ಮಂಗಳೂರಿನಲ್ಲಿ ನೌಕರರು ಸೋಮುವಾರ ಕೆಲಸಕ್ಕೆ ಹಾಜರಾಗಬೇಕಾಗಿದ್ದರಿಂದ ಕಾರ್ ಬುಕ್ ಮಾಡಿಕೊಂಡು ಹೊರಟಿದ್ದವರು ಬಸ್ ಬಂದಿದ್ದರಿಂದ ಪ್ರಯಾಣ ಬೆಳೆಸಿದರು.

ಆದರೆ ನಂತರ ಮತ್ತೆ ಬಸ್ ಮುಷ್ಕರ ಮುಂದುವರಿಕೆ ಎನ್ನುತ್ತಿದ್ದಂತೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಈ ಮಧ್ಯೆ ಎರಡು ಬಸ್ ಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಬುಕ್ಕಿಂಗ್ ಮಾಡಿಕೊಂಡಿದ್ದರು.  ಅವರನ್ನು ಬೆಂಗಳೂರಿಗೆ ಕಳುಹಿಸಬೇಕಾಗಿರುವುದರಿಂದ ಪೊಲೀಸರ ಭದ್ರತೆಯಲ್ಲಿ ಎರಡು ಬಸ್ ಗಳ ಪ್ರಯಾಣ ಆರಂಭಿಸಲಾಯಿತು.

ಇಂದು ಮುಂಜಾನೆ ಬಸ್ ಆರಂಭದ ಬಗ್ಗೆ ಅನಿಶ್ಚಿತತೆ ಇತ್ತು, ಆದರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗೀಯ ನಿಯಂತ್ರಕ ಹಾಗೂ ಪೊಲೀಸರು ಮುಂಜಾನೆಯಿಂದ ರಾಯಚೂರು ಬಸ್ ನಿಲ್ದಾಣದಲ್ಲಿ ನಿಂತು ಒಂದೊಂದೆ ಬಸ್ ಗಳನ್ನು ಆರಂಭಿಸಿದರು. ಆರಂಭದಲ್ಲಿ ಹೈದ್ರಾಬಾದ್, ಕರ್ನೂಲ್, ಗದ್ವಾಲ್ ಕ್ಕೆ ಹೋಗುವ ಬಸ್ ಗಳು ಆರಂಭವಾದವು. ನಂತರದಲ್ಲಿ ಲಿಂಗಸಗೂರು, ದೇವದುರ್ಗಾ ಸೇರಿದಂತೆ ವಿವಿಧಡೆ ಬಸ್ ಸೇವೆ ನಿಧಾನವಾಗಿ ಆರಂಭವಾಗಿದ್ದವು.

Petrol Diesel Price: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರವೆಷ್ಟು?

ಎಲ್ಲಾ ಬಸ್ ಗಳನ್ನು ಆರಂಭಿಸಲಾಗುವುದು, ಸಿಬ್ಬಂದಿಗೆ ಈಗಾಗಲೇ ಮಾಹಿತಿ ನೀಡಿ ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿಕೊಂಡಿದ್ದೇವೆ, ಸಿಬ್ಬಂದಿ ಬರುತ್ತಾರೆ ಎಂದು ಡಿಸಿ ಹೇಳಿದ್ದಾರೆ.ಈ‌ ಮಧ್ಯೆ ಸಿಬ್ಬಂದಿಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ. ನಿನ್ನೆ ಸರಕಾರದೊಂದಿಗೆ ಮಾತುಕತೆ ನಡೆಸಿ 9 ಬೇಡಿಕೆಯನ್ನು ಈಡೇರಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಸರಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಹೊರತುಪಡಿಸಿ ಒಪ್ಪಿಕೊಂಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ರುಜು ಮಾಡಿದ್ದೇವೆ. ನಾವು ಕೆಲಸಕ್ಕೆ ಹೋಗುತ್ತೇವೆ ಎಂದು ಡ್ಯೂಟಿಗೆ ಹಾಜರಾಗುತ್ತಿರುವ ಸಿಬ್ಬಂದಿಗಳು ಹೇಳಿದ್ದಾರೆ.

ನಮ್ಮ ಕಾರ್ಮಿಕ ಮುಖಂಡರಾದ ಅನಂತಸುಬ್ಬರಾವ್ ಎಐಟಿಯುಸಿ ನೇತೃತ್ವದ ಸಂಘಟನೆಯವರು ಕೆಲಸಕ್ಕೆ ಹಾಜರಾಗಿ ಎಂದಿದ್ದರಿಂದ ಬಹುತೇಕರು ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಎಐಟಿಯುಸಿ ಮುಖಂಡ ಅನ್ವರ್ ಪಾಷಾ ಹೇಳಿದ್ದಾರೆ. ಮೂರು ದಿನಗಳಿಂದ ಬಸ್ ಬಂದ್ ಆಗಿದ್ದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದಾರೆ, ದುಪ್ಪಟ್ಟು ದರ ನೀಡಿ ಪ್ರಯಾಣಿಸಿದ್ದಾರೆ.

ಈ ಮಧ್ಯೆ ಬಸ್ ನಿಲ್ದಾಣದಲ್ಲಿರುವ  ಅಂಗಡಿ ಮಾಲೀಕರು ವ್ಯಾಪಾರ ಬಂದ್ ಆಗಿ ಸಂಕಷ್ಟ ಅನುಭವಿಸುವಂತಾಗಿದೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಆಗಿ ತೊಂದರೆ ಅನುಭವಿಸುವಂತಾಗಿದೆ. ಈಗ ಮತ್ತೆ ಬಂದ್ ಆಗಿ ಸಮಸ್ಯೆ  ಎದುರಾಗಿದೆ. ಈಗ ನಿಗಮದವರು ಬಾಡಿಗೆ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Published by:Latha CG
First published: