ಬೆಂಗಳೂರು(ಸೆ.14): ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗ್ತಿದೆ. ಕೊರೋನಾ ಜೊತೆಗೆ ದುಬಾರಿ ಬದುಕಿಗೆ ಬಡಜನತೆ ಕಂಗಾಲಾಗುತ್ತಿದ್ದಾರೆ. ಈ ನಡುವೆ ರಾಜ್ಯದ ಪ್ರಯಾಣಿಕರಿಗೆ ಬಸ್ ಟಿಕೆಟ್ ಬೆಲೆ ಏರಿಕೆ ಆತಂಕವಿತ್ತು. ಆದರೆ ಈ ಆತಂಕವನ್ನು ಸದ್ಯಕ್ಕೆ ಸರ್ಕಾರ ದೂರ ಮಾಡಿದೆ. ಜೊತೆಗೆ ಸಾರಿಗೆ ಸಿಬ್ಬಂದಿಗೂ ಗುಡ್ ನ್ಯೂಸ್ ಇದೆ.
ಕೊರೋನಾದಿಂದ ಇರುವ ಕೆಲಸ ಹೋಗಿ, ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಮೂರನೇ ಅಲೆ ಆತಂಕದ ನಡುವೆ ಪೆಟ್ರೋಲ್, ಡೀಸೆಲ್, ಮನೆ ಅಡುಗೆಯ ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಇದರಿಂದ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಎಂದು ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
ಆದರೆ ಸದ್ಯ ಸರ್ಕಾರ ಪ್ರಯಾಣಿಕರಿಗೆ ಇನ್ನಷ್ಟು ಹೊರೆ ಮಾಡುವ ಯಾವ ಯೋಚನೆಯನ್ನೂ ಮಾಡಿಲ್ಲ. ಈ ಕುರಿತು ಸ್ಪಷ್ಟವಾಗಿ ಹೇಳಿರುವ ಸಾರಿಗೆ ಸಚಿವ ಶ್ರೀರಾಮುಲು ಸರ್ಕಾರಕ್ಕೆ ಎಷ್ಟೇ ಹೊರೆಯಾದ್ರೂ ಟಿಕೆಟ್ ದರ ಏರಿಸುವುದಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹಾಕುವುದಿಲ್ಲ. ಇದನ್ನ ಸ್ವತಃ ಸಿಎಂ ಬಸವರಾಜ್ ಬೊಮ್ಮಯಿ ಅವರೇ ಹೇಳಿದ್ದಾರೆ. ನಿಗಮದ ಆರ್ಥಿಕ ಪುನಶ್ಚೇತನಕ್ಕೆ ಬೇರೆ ಮೂಲಗಳಿಂದ ಹಣ ಒದಗಿಸುವ ಕೆಲಸ ಮಾಡುತ್ತೇವೆ ಎಂದೇಳಿದ್ದಾರೆ.
ಇದನ್ನೂ ಓದಿ:JEE Main 2021 Result: ನಾಳೆಯೊಳಗೆ ಜೆಇಇ ಮೇನ್ 2021 ಫಲಿತಾಂಶ ಪ್ರಕಟ ಸಾಧ್ಯತೆ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಕೊರೊನಾ ಹೆಚ್ಚಳದ ಸಂದರ್ಭದಲ್ಲಿ ಸಾರಿಗೆ ನೌಕರರ ತಮ್ಮ ನ್ಯಾಯುಯುತ ಬೇಡಿಕೆಗಾಗಿ ಮುಷ್ಕರ ನಡೆಸಿದ್ದರು. ಇದರಿಂದ ಸರ್ಕಾರ ನಾಲ್ಕು ನಿಗಮಗಳ 2 ಸಾವಿರಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡಿತ್ತು. ವಜಾ, ಅಮಾನತು, ವರ್ಗಾವಣೆ, ವಸತಿಗೃಹ ಬಿಡುವಂತೆ ಖಡಕ್ ಸೂಚನೆ ನೀಡಿ ದಂಡ ವಿಧಿಸಿತ್ತು. ಈ ಕುರಿತು ನ್ಯಾಯ ದೊರಕಿಸಿಕೊಡಿ ಎಂದು ನೊಂದ ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೆಲವರು ಕೋರ್ಟ್ ಮೊರೆ ಕೂಡ ಹೋಗಿದ್ದರು.
ಇದೀಗ ಸಾರಿಗೆ ಸಚಿವ ಬಿ ಶ್ರೀರಾಮುಲು ವಿಧಾನಸಭೆಯಲ್ಲಿ ನಾಲ್ಕು ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಸಿಬ್ಬಂದಿಗಳ ಹಿತದೃಷ್ಟಿಯಿಂದ ಜರುಗಿದ ಸಭೆಯಲ್ಲಿ ಅತಿ ಶೀಘ್ರದಲ್ಲಿ ಮಹತ್ವದ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಟ್ವಿಟರ್ ಮೂಲಕ ಸಚಿವ ರಾಮುಲು ಮಾಹಿತಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವ ರಾಮುಲು ತಿಳಿಸಿದ್ದಾರೆ.
ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಸಾರಿಗೆ ಇಲಾಖೆ ಸಿಬ್ಬಂದಿಗಳ ತಿಂಗಳ ವೇತನ ನೀಡಲು ಸರ್ಕಾರದ ಕೈಯೊಡ್ಡಬೇಕಿದೆ. ಇಷ್ಟೆಲ್ಲ ಆದ್ರೂ ಸದ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಸಾರಿಗೆ ಇಲಾಖೆ ಹೋಗುತ್ತಿಲ್ಲ. ಅದೇ ರೀತಿ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಇಲಾಖೆ ಮುಂದಾಗಿರುವುದು ಉತ್ತಮ ಬೆಳವಣಿಗೆ.
ಇದನ್ನೂ ಓದಿ:Karnataka Dams Water Level: ಮೈದುಂಬಿ ಹರಿಯುತ್ತಿವೆ ನದಿಗಳು, ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ