ಬೆಂಗಳೂರು(ಸೆ.08): ನಾಳೆ ಗೌರಿ ಹಬ್ಬ, ಶುಕ್ರವಾರ ಗಣೇಶ ಚತುರ್ಥಿ(Ganesh Chaturthi). ಬಳಿಕ ಎರಡನೇ ಶನಿವಾರ ಮತ್ತು ಭಾನುವಾರ. ಈ ವಾರ ಸತತ 3 ದಿನ ಸಾಲು-ಸಾಲು ರಜೆಗಳಿವೆ. ಹೀಗಾಗಿ ಹಳ್ಳಿಗಳಿಂದ ಬಂದು ಪಟ್ಟಣ ಸೇರಿದ್ದ ಜನರು ಹಬ್ಬ ಆಚರಣೆಗೆಂದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಗಣೇಶ ಹಬ್ಬಕ್ಕೆಂದು ಊರಿಗೆ ಹೊರಟು ನಿಂತವರಿಗೆ ಖಾಸಗಿ ಬಸ್ಗಳು(Private Buses) ಶಾಕ್ ಕೊಟ್ಟಿವೆ. ಕೋವಿಡ್(COVID-19) ಬಿಕ್ಕಟ್ಟಿನ ನಡುವೆಯೇ ಖಾಸಗಿ ಬಸ್ ದರವನ್ನು(Bus Fare) ಏರಿಸಿದ್ದು, ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಜನರು ಕಿಡಿಕಾರಿದ್ದಾರೆ.
ಈಗ ಹಬ್ಬಕ್ಕೆ ಊರಿಗೆ ಹೊರಡಬೇಕಾದರೆ ಜೇಬು ತುಂಬಾ ಹಣ ಇಟ್ಟುಕೊಂಡು ಹೋಗಬೇಕು. ಮೊದಲೇ ಹಬ್ಬಗಳ ಸೀಸನ್ನಲ್ಲಿ ಊರಿಗೆ ಹೋಗಬೇಕಾದರೆ ಜಾಸ್ತಿ ಹಣ ಬೇಕು. ಹೀಗಿರುವಾಗ ಕೋವಿಡ್ ಬಿಕ್ಕಟ್ಟಿನ ನಡುವೆ ಬಸ್ ದರ ಹೆಚ್ಚು ಮಾಡಿರುವುದು ಜನಸಾಮಾನ್ಯರಿಗೆ ಬರೆ ಹಾಕಿದಂತಾಗಿದೆ.
ಇದನ್ನೂ ಓದಿ:Trending Ad: ಈ ಆಭರಣ ತೊಟ್ಟ ಸುಂದರಿ ತೃತೀಯ ಲಿಂಗಿ ಎಂದರೆ ನಂಬುತ್ತೀರಾ? ಎಲ್ಲರಿಗೂ ಬಹಳ ಇಷ್ಟವಾಗಿದೆ ಈ ವಿಡಿಯೋ
ಶುಕ್ರವಾರ, ಶನಿವಾರ, ಭಾನುವಾರ ಸತತ ಮೂರು ದಿನಗಳ ರಜೆ ಇದೆ. ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್ಗಳು ಟಿಕೆಟ್ ದರವನ್ನು ಏರಿಕೆ ಮಾಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಜನಸಾಮಾನ್ಯರ ಗತಿಯೇನು? ಖಾಸಗಿ ಬಸ್ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ಹುಟ್ಟಿದೆ.
ಈಗಾಗಲೇ ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದಾರೆ. ಗೌರಿ ಗಣೇಶ ಹಬ್ಬಕ್ಕೆ ಖಾಸಗಿ ಬಸ್ 'ದರ'ಬಾರ್ ಶುರುವಾಗಿದೆ.
ವಿವಿಧ ನಗರಗಳಿಗೆ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆಯಾಗಿದ್ದು, ಆ ಪಟ್ಟಿ ಈ ಕೆಳಕಂಡಂತಿದೆ.
ನಗರ |
ಹಬ್ಬದ ದರ |
ಹಿಂದಿನ ದರ |
ಉಡುಪಿ |
1,400 - 1,800 |
700 - 750 |
ಬೆಳಗಾವಿ |
1,100 - 1, 300 |
800 - 900 |
ಧಾರವಾಡ |
900 - 1,100 |
600 - 650 |
ಮಂಗಳೂರು |
1,000 - 1,300 |
700 - 800 |
ಹುಬ್ಬಳ್ಳಿ |
1,200 - 1,500 |
750 - 800 |
ಕಲಬುರ್ಗಿ |
1,200 - 1,550 |
800 - 900 |
ಹಬ್ಬಗಳ ಸೀಸನ್ನಲ್ಲಿ ಆಗ್ಗಿದ್ದಾಂಗೆ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಸಾಮಾನ್ಯ ಎಂಬುವಂತೆ ಆಗಿದೆ. ಈಗ ಗೌರಿ ಹಬ್ಬದ ಪ್ರಯುಕ್ತ ಹಣ್ಣು ಮತ್ತು ಹೂವಿನ ಬೆಲೆಯೂ ಗಗನಕ್ಕೇರುತ್ತಿದೆ. ದುಪ್ಪಟ್ಟು ಬೆಲೆ ಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ:Gold Price Today: ಗೌರಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ; ಬೆಲೆ ಇಳಿಕೆಯಾಗಿದೆ ನೋಡಿ..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ